ಮಲ್ಲಿಕಾರ್ಜುನ ದೇವರ ಜಾತ್ರೆ ನೂತನ ರಥೋತ್ಸವಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರರೀಗಳಿಂದ ಚಾಲನೆ

ಮಲ್ಲಿಕಾರ್ಜುನ ದೇವರ ಜಾತ್ರೆ
ನೂತನ ರಥೋತ್ಸವಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರರೀಗಳಿಂದ ಚಾಲನೆ

 e-ಸುದ್ದಿ ಮಸ್ಕಿ
ಫೆ.೨೪ ರಂದು ಮಸ್ಕಿ ಪಟ್ಟಣದಲ್ಲಿ ಎರಡನೇ ಶ್ರೀಶೈಲ ಎಂದು ಪ್ರಸಿದ್ಧವಾದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ ಮತ್ತು ನೂತನ ರಥೋತ್ಸವಕ್ಕೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ ಎಂದು ರಥೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯ ಮಹಾದೇವಪ್ಪಗೌಡ ಪಾಟೀಲ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಜಾತ್ರಮಹೋತ್ಸವದ ಮಾಹಿತಿ ಪ್ರಚಾರ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಹಳೇಯ ರಥ ಶತಮಾನ ಕಂಡಿದೆ. ಶೀಥಿಲಾವಸ್ಥೆಯಲ್ಲಿದ್ದ ಕಾರಣ ಪ್ರಸಕ್ತ ವರ್ಷ ನೂತನ ಕಟ್ಟಿಗೆಯ ರಥ ನಿರ್ಮಾಣ ಮಾಡಿದ್ದು ಜಾತ್ರೆಯಂದು ಲೋಕಾರ್ಪಣೆ ನಡೆಯಲಿದೆ. ಈ ವರ್ಷ ರಥವನ್ನು ಮಲ್ಲಿಕಾರ್ಜುನ ದೇವಸ್ಥಾನದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಎಳೆಯಲಾಗುತ್ತದೆ ಎಂದರು.
ನಂದವಾಡಗಿಯ ಶ್ರೀಮಹಾಂತಲಿಂಗ ಶಿವಾಚಾರ್ಯರು, ಮಸ್ಕಿ ಗಚ್ಚಿನಮಠದ ಶ್ರೀವರರುದ್ರಮುನಿ ಶಿವಾಚಾರ್ಯರು, ತೆಕ್ಕಲಕೋಟೆಯ ಶ್ರೀವೀರಭದ್ರ ಶಿವಾಚಾರ್ಯರು, ಎಮ್ಮಿಗನೂರಿನ ಶ್ರೀ ವಾಮದೇವ ಶಿವಾಚಾರ್ಯರು, ಸಂತೆಕೆಲ್ಲೂರಿನ ಶ್ರೀ ಗುರುಬಸವ ಮಹಾಸ್ವಾಮೀಗಳು, ಸಿಂಧನೂರಿನ ಶ್ರೀಸೋಮನಾಥ ಶಿವಾಚಾರ್ಯರು, ಬಳಗಾನೂರಿನ ವೀರಭದ್ರ ಶಿವಾಚಾರ್ಯರು, ಮೆದಕಿನಾಳದ ಡಾ.ಚನ್ನಮಲ್ಲ ಮಹಾಸ್ವಾಮೀಗಳು, ತುರ್ವಿಹಾಳದ ಅಮರಗುಂಡ ಸ್ವಾಮೀಜಿ, ಅಂಕುಶದೊಡ್ಡಿಯ ಶ್ರೀವಾಮದೇವ ಶಿವಾಚಾರ್ಯರು, ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು, ಅಂಕಲಿಮಠದ ಶ್ರೀವೀರಭದ್ರ ಸ್ವಾಮೀಜಿ, ತಿಮ್ಮಾಪುರ ಕಲ್ಯಾಣ ಆಶ್ರಮದ ಶ್ರೀಮಹಾಂತ ಸ್ವಾಮೀಜಿ, ಗಜೇಂದ್ರಗಡದ ಶ್ರೀಶರಣಬಸವ ಸ್ವಾಮೀಜಿ, ಸಂಸದ ಕರಡಿ ಸಂಗಣ್ಣ, ಶಾಸಕ ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ತ ಸದಸ್ಯ ಶರರಣಗೌಡ ಬಯ್ಯಾಪುರ, ಕೇಂದ್ರದ ಮಾಜಿ ಸಚಿವ ಬಸಸವರಾಜ ಪಾಟೀಲ ಆನ್ವರಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಪ್ರತಾಪಗೌಡ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಕೆ.ವೀರನಗೌಡ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ರಥ ಸಮಿತಿಯ ಮುಖಂಡರಾದ ಮಲ್ಲಪ್ಪ ಕುಡತಿನಿ, ಡಾ.ಬಿ.ಎಚ್.ದಿವಟರ್, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಲಕ್ಷ್ಮೀ ನಾರಯಣ ಶಟ್ಟಿ, ಚನ್ನಪ್ಪ ಬ್ಯಾಳಿ, ಅಮರೇಶ ಬ್ಯಾಳಿ, ನಾಗರಾಜ ಯಂಬಲದ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ನಾಗರಾಜ ಸಜ್ಜನ್, ಶರಣಯ್ಯ ಸೊಪ್ಪಿಮಠ ಹಾಗೂ ಇತರರು ಇದ್ದರು.
———————————-

ಧಾರ್ಮಿಕ ಕಾರ್ಯಕ್ರಮಗಳು
ಫೆ.೧೯ ರಂದು ಶ್ರೀಶೈಲದಿಂದ ತಂದಿರುವ ಗಂಗಾಜಲವನ್ನು ಭ್ರಮರಾಂಬ ದೇವಸ್ಥಾನದಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಮೆರವಣಿಗೆ ಮುಖಾಂತರ ತರಲಾಗುತ್ತದೆ. ಫೇ.೨೦ ರಂದು ಸಂಜೆ ೫-೩೦ ರಿಂದ ಶ್ರೀರಕ್ಷಾಗ್ನಹೋಮ ಶ್ರೀ ಗಣಹೋಮ ನಡೆಯುತ್ತದೆ. ಫೆ.೨೧ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ ಸಂಜೆ ೫-೩೦ಕ್ಕೆ ಏಕದಶ ಮಹಾರುದ್ರ ಹೋಮ ನಡೆಯುವುದು. ೨೨ ರಂದು ಸಂಜೆ ೫-೩೦ ಕ್ಕೆ ನೂತನ ರಥಕ್ಕೆ ರಥಾಂಗಹೋಮ ಹಾಗೂ ಜಯಾದಿಹೋಮ, ಪೂರ್ಣಾಹುತಿ ಹಾಗೂ ಸಕಲ ದೇವತೆಗಳಿಗೆ ಮಹಾಮಂಗಳಾರುತಿ, ಜಾತ್ರ ಮಹೋತ್ಸವದಲ್ಲಿ ದುಡಿಯುತ್ತಿದ್ದ ಕುಶಲಕರ್ಮಿಗಳಿಗೆ ಸತ್ಕಾರ ಸಮಾರಂಬ ನಡೆಯಲಿದೆ. ಫೆ೨೩ ರಂದು ಮಲ್ಲಿಕಾರ್ಜುನ ನೂತನ ಮಹಾರಥಕ್ಕೆ ಶ್ರೀದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉಡಿತುಂಬುವುದು. ಫೆ.೨೪ ರಂದು ಬೆಳಿಗ್ಗೆ ನೂತನ ರಥಕ್ಕೆ ಕಳಸಾರೋಹಣ ಸಂಜೆ ೫ ಗಂಟೆಗೆ ಮಹಾರಥೋತ್ಸವ ಜರುಗುತ್ತದೆ.
——————————————

Don`t copy text!