ದಿಟ್ಟ ಕವಿ ವಾಸ್ತವವಾದಿ ಸರ್ವಜ್ಞ
ಇವತ್ತು ಸರ್ವಜ್ಞನ ಜಯಂತಿ
ಸರ್ವಜ್ಞ ಹಿರೇಕೆರೂರ
ತಾಲೂಕಿನ ಅಂಬಲೂರಿನಲ್ಲಿ ಹದಿನಾರನೆಯ ಶತಮಾನದಲ್ಲಿ ಜನಿಸಿದವ ಕುಂಬಾರ ಕುಟುಂಬದಲ್ಲಿ ಜನಿಸಿದ ಇವನ ಹುಟ್ಟಿನ ಬಗ್ಗೆ ಅನೇಕ ಕಟ್ಟು ಕಥೆಗಳು ನೋಡುತ್ತೇವೆ.
ಮಕ್ಕಳಿಲ್ಲದ ಬ್ರಾಹ್ಮಣ ಬಸವರಸ ಕಾಶಿಗೆ ಹೋಗಿ ತೀರ್ಥ ಪ್ರಸಾದ ತಂದು ಹೆಂಡತಿಗೆ ಕೊಟ್ಟು ಸಂಬಂಧ ಬೆಳೆಸಿದರೆ ಶ್ರೇಷ್ಠ ಮಗ ಹುಟ್ಟುತ್ತಾನೆ ಎಂದು ಕಾಶಿ ಪಂಡಿತರು ಹೇಳುತ್ತಾರೆ. ಅದರಂತೆ ಮರಳಿ ಬರುವಾಗ ವರದಾ ನದಿ ತುಂಬಿ ಹರಿಯುತ್ತಿತ್ತು ದಡದ ಈಚೆಗೆ ಚಿಂತೆಯಲಿ ಇದ್ದಾಗ ಅಂಬಲೋರಿನ ಕುಂಭಾರ ಮಾಳವ್ವೆ ಅಂತಹ ಪುತ್ರನಿಗೆ ಜನ್ಮ ಕೊಡಲು ತಾನು ಸಿದ್ಧ ಎಂದು ಹೇಳಿ ಅವನ ಜೊತೆ ಕೂಡಿದ ಮೇಲೆ ಒಂಬತ್ತು ತಿಂಗಳ ಕೊನೆಗೆ ಸರ್ವಜ್ಞ ಹುಟ್ಟಿದನು ಎಂದು ಕಟ್ಟು ಕಥೆ ಬರುತ್ತವೆ. ಇದು ಶುದ್ಧ ಸುಳ್ಳು.
ತಂದೆ ಕುಂಬಾರ ಮಲ್ಲ
ತಾಯಿ ಮಳಲಾದೆವಿ ಇಂದು ಧರೆಗೆ ಚಂದ್ರಶೇಖರ ಉದಯಿಸಿದನು ಸರ್ವಜ್ಞ. ಎಂದು ಹೇಳಿದ್ದಾನೆ.
ಹಾಗಿದ್ದರೆ ಇಂತಹ ಕಟ್ಟು ಕಥೆಗಳ ಹುಟ್ಟಿಗೆ ಕಾರಣ ತಾ ನು ರಚಿಸಿದ ಕೆಲ ತ್ರಿಪದಿಗಳಲ್ಲಿ ಇಂತಹ ಕೆಲ ಪ್ರಸಂಗ ಹೇಳಿದ್ದಾನೆ.
ಎರಡನೆಯ ಮುಖ್ಯ ಕಾರಣ ಸರ್ವಜ್ಞನು ಬ್ರಾಹ್ಮಣರ ಬಗ್ಗೆ ಅತಿಯಾಗಿ ಟೀಕಿಸಿದ ಕಾರನವು ಇರಬಹುದು.
ಕನ್ನಡದ ಸರ್ವಜ್ಞ ತಮಿಳು ತಿರುವಳ್ಳರ ಮತ್ತು ತೆಲುಗಿನ ವೇಮನ ಸಮಾನ ವಿಚಾರ ಉಳ್ಳ ಸಮಕಾಲಿನ ಕವಿಗಳು ದಾರ್ಶನಿಕರು.
ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ.
ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.
ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು:
ಮಾಸೂರ ಬಸವರಸ । ಕೂಸನೀಶನ ಕೇಳೆ।
ಕಾಶಿಯ ಅಭವನೊಳು । ಪಡೆದ ವರವದುವೇ ।
ಸೂಸಿತೆಂತೆನಲು ಸರ್ವಜ್ಞ ॥
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ
ಆಕಲ್ಲು ನೀರುಕುಡಿವುದೆ ಸರ್ವಜ್ಞ?
ತನ್ನ ಒಂದು ತ್ರಿಪದಿಯಲ್ಲಿ
ತಾನು ೭೦೭೦ ತ್ರಿಪದಿ ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಇವನ ಹೆಸರಲ್ಲಿ ಹಲವು ಕೃತಕ ಖೋಟಾ ವಚನ ಸೇರ್ಪಡೆ ಆಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಸರ್ವಜ್ಞನ ವಚನಗಳಲ್ಲಿ ಆಹಾರ ಪದ್ಧತಿ ನೀತಿ ಸಂಹಿತೆ ಸಂಸಾರ ಕುಟುಂಬ ಮುಖ್ಯವಾಗಿ ಕಾಣುತ್ತೆವೆ
ಸರ್ವಜ್ಞನ ಬಗ್ಗೆ ರೆವ್ ಉತ್ತ೦ಗಿ ಚೆನ್ನಪ್ಪನವರ ಸಂಶೊಧನಾ ಮೆಚ್ಚುವಂತದ್ದು.
ಸರ್ವಜ್ಞ ಬಸವಣ್ಣನವರ ಕಟ್ಟಾ ಅನುಯಾಯಿ. ಗುರು ಲಿಂಗ ಜಂಗಮ ಕಾಯಕ ದಾಸೋಹದ ಬಗ್ಗೆ ಅನೇಕ ವಚನಗಳಲ್ಲಿ ಅವನ ಕಳಕಳಿ ಹೊಂದಿದ್ದು ಕಂಡು ಬರುತ್ತದೆ.
ಜಾನಪದ ಕಣಜ ಸರ್ವಜ್ಞನ ವಚನ ಕನ್ನಡ ಸಾಹಿತ್ಯ ಶ್ರೀಮಂತ ಮಾಡಿದೆ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ