ಗಝಲ್

ಗಝಲ್

ಹರಿವ ಗಂಗೆಯಲಿ ಕಲ್ಮಶ ಹುಡುಕಿ ಅಸೂಯೆ ಮೆರೆದೆ ಏಕೆ
ಉರಿವ ಕೆಂಡದಲಿ ತುಪ್ಪ ಸುರಿವಿ ಜಗಳ ಹಚ್ಚುತ.
ಕರೆದೆ ಏಕೆ..

ಜಗದ ಜಂಜಡ ಬದಿಗೆ ಸರಿಸಿ ಕೂಡಿ ಬದುಕುವ ಕಲೆ ಗೊತ್ತಿಲ್ಲವೆ
ಜಿಗಿದು ಅಂಜದೆ ನದಿಯ ಆಳದಲಿ ಈಜುತ ಮೆರೆದೆ ಏಕೆ

ಕಷ್ಟ ಪಡದೆ ಇಲ್ಲಿ ಎಲ್ಲವನು ಪಡೆಯಬೇಕೆಂಬ ಹಂಬಲವೇ
ನಷ್ಟ ಸಂಭವಿಸಿದರೂ ನಿಷ್ಠೆಯ ನಾಟಕ ಮಾಡುತ ನೆರೆದೆ ಏಕೆ

ಪರರ ಹಿಂಸಿಸಿ ನೋವು ನೀಡಿ ನಗುವುದು ಒಳಿತಲ್ಲ ತಿಳಿದುಕೊ
ನರರ  ಬುದ್ಧಿ ನರಿಯಂತಾಗಿ ಏಗುತ ಕರ್ಮದ ಫಲ  ಬರೆದೆ ಏಕೆ.

ಸುರಿಯುವ ಮಳೆಯ ರಭಸಕೆ ಬಾನು ಭೂಮಿ ಒಂದಾಗಿದೆ ಜಯಾ
ಅರಿಯು ಬಾರದೆ ಭವನೆಯಲಿ ಬೆಂದು ದೂರ ಸಾಗಿ ತೊರೆದೆ ಏಕೆ


ಜಯಶ್ರೀ ಭಂಡಾರಿ.
ಬಾದಾಮಿ.

Don`t copy text!