ನಾರಿ ದಿನ

ನಾರಿ ದಿನ

ಅವಳೀಗ ಮೌನವಾಗಿದ್ದಾಳೆ
ವರುಷ ಪೂರ್ತಿ ದುಡಿದ ಗಾಣದೆತ್ತು
ಮಲಗಿ ವಿರಮಿಸುವ ಈ ಹೊತ್ತು
ಅದೇಷ್ಟು ಭಾರ ಎತ್ತಿ ಎಳೆದಿದ್ದಾಳೆ
ಬದುಕಿನ ಬಂಡಿ
ನೂರೆಂಟು ನೋವುಗಳ ಮಡಿಲ ಹೊತ್ತು ತುಳಿದ
ಸವೆದ ಹಾದಿಗಳೆಷ್ಟೋ ?
ಹಾಸಬೇಡಿ ಹೂ ಈ ದಿನ ವಷ್ಟೇ
ನೆನಪಿಸುವ ಸಂತೈಸುವ
ನಿಮ್ಮ ಬಯಕೆಗೆ
ಮೌನವಾಗಿದ್ದಾಳೆ ಅವಳು
ಅದೆಷ್ಟೋ ?ಅವಮಾನ ಕಿತ್ತುಕೊಳ್ಳುವ ಅಧಿಕಾರ
ನಾರಿಗೆ ನಾರಿಯೇ ಮುಳುವಾಗುವಳೇ ?
ಸಂಚು ಹೊಂಚಿನ
ಸಿಡಿಯುವ ಸಿಡಿಮದ್ದನು
ಸಿಡಿಸಿ ಸಾಯಿಸಬೇಡಿ
ಸತ್ತು ಬದುಕಿದ! ದೇಹವಿಂದು
ಜೀವಂತ ಶವ
ಶವದೊಂದಿಗೆ! ನಿತ್ಯ
ಸುಖ ಕೊಡುವ
ನಿಮ್ಮ ಮನೆಯ ನಾರಿಯಲ್ಲವೇ ?
ಮಗಳಲ್ಲವೇ? ಹೆಂಡತಿಯಲ್ಲವೇ ?
ತಾಯಲ್ಲವೇ ?
ಪರನಾರಿಯಾದರೇನು ?
ಕೈ ಮುಗಿದು ಬೇಡಿಕೊಳ್ಳುವ
ಸರಸ್ವತಿ,ಲಕ್ಷ್ಮೀ,ಪಾರ್ವತಿ,ಅನ್ನಪೂರ್ಣೆ, ಗಂಗೆ,ಯಮುನೆ ಸಿರಿದೇವಿ,ಶ್ರೀದೇವಿ
ವಿದ್ಯೆ,ಬುದ್ಧಿ,ಸಿದ್ಧಿ
ಅನ್ನ,ನೀರು ,ಧನ ಕನಕ ,
ವಲಿಯುವ ದೇವತೆ
ಹೊತ್ತು ಹೊತ್ತಿಗೂ
ಕಾಯುವ ಮಾತೃ
ಚಂಡಿ ಚಾಮುಂಡಿ
ಬೇಡ ಕಾಳಿ
ಮಾಡಬೇಡಿ ಕೆರಳಿ
ಬೇಡ ಈ ದಿನವಷ್ಟೇ
ನಿಮ್ಮ ಅನುಕಂಪ ಕಳಕಳಿ
ಕಿತ್ತು ಕೊಂಡ ಸಂತಸದ ನಗೆ ದಿನಗಳನು ಬರೆದಿಟ್ಟ ಲೆಕ್ಕ ತೀರಿಸಲಾಗದು ನಿಮಗೆ
ಮಾತಿಗೊಂದಿಷ್ಟು ಮೌನ ಮಾತಿಗೊಂದಿಷ್ಟು ಮುನಿಸು
ವಲಿಸುವ ಪರಿ
ಸಂತಸದಿ ಹೆಚ್ಚಲಿ ದಿನ ದಿನ
ಆಚರಿಸುವ ನಾರಿ
ದಿನ ಶುಭ ತರಲಿ
ಅನು ಅನು ದಿನ ..

ಡಾ ಸಾವಿತ್ರಿ ಕಮಲಾಪೂರ🙏🏻🙏🏻

Don`t copy text!