ದೇವನಲ್ಲ ನೀನು
ನೀನು ಒಂಟಿ
ದೇವ ನಿನಗೆ
ಏಕೆ ದೊಡ್ಡ
ಗುಡಿ ಬಂಗ್ಲೆಯು
ದೇವನೊಬ್ಬ
ನಾಮ ಹಲವು
ಗುಡಿಗೆ ನಾಮ
ಹಾಕುವ ಪುಂಡರು
ಸೂರಿಲ್ಲದೆ ಬಿದ್ದಿಹರು
ಮುಗಿಲು ಮೋಡ ಚಪ್ಪರ
ಕೊಳ್ಳೆ ಹೊಡೆದ ಧನ ಚಿನ್ನ
ಕೊಳೆಯುತಿದೆ ಹುಂಡಿಯು
ಕಾಳ ಧನಿಕರು
ಲೂಟಿಕೋರರು
ರಾಜಕಾರಣಿ ನಿನ್ನ
ಭಕ್ತರ ಸಾಲು ಸಾಲು
ಮಳೆ ಇರದೆ ಬಿಕ್ಕುತಿದೆ
ಸಕಲ ಪ್ರಾಣಿ ಜೀವ ರಾಶಿ
ನೀನು ಮೌನಿ ಮಹಾಕ್ರೂರಿ
ಇಲ್ಲ ಕರುಣೆ ದಯೆ ಪ್ರೀತಿ
ದೇವನಲ್ಲ ನೀನು ಕೇಳು
ಕಲ್ಲು ಕೆತ್ತನೆ ಮೂರ್ತಿಯು
ನಿನ್ನ ಹೆಸರಲಿ ದುರಳ ಜನ
ಮೆರೆಯುತಿಹ ಕೀರ್ತಿಯು
–ಡಾ ಶಶಿಕಾಂತ ಪಟ್ಟಣ ರಾಮದುರ್ಗ