ಗಝಲ್

ಗಝಲ್

ಮಾವಿನ ಚಿಗುರಿಗೆ ಕೋಗಿಲೆ ಕೂಗಲು ಹೊಸತು ರಾಗವು ದಕ್ಕಿದೆ
ಗೋವಿನ ಕರೆಗೆ ಓಗೊಟ್ಟು ಕರುವು ಹಾಲನು ಕುಡಿದು ನೆಕ್ಕಿದೆ

ರಮ್ಯ ವಸಂತ ಮಾಸದ ಮೊದಲ ಸ್ವರವು ಕರ್ಣ ಮಧುರವಲ್ಲವೇ
ಸೌಮ್ಯ ಹಸಿರು ಎಲೆಗಳ ತೋರಣವು ಬಾಗಿಲ ಬಳಿ ನಕ್ಕಿದೆ

ಪ್ರಕೃತಿ ಮಾತೆಯ ಮಡಿಲಲ್ಲಿ.ಚೈತನ್ಯದ ಸಂಚಲನ ಮೂಡಿಸಿದೆ
ಸುಕೃತ ಫಲವು ಮರದ ತುಂಬೆಲ್ಲ ಹಳದಿ ಬಣ್ಣದಿ ಸೊಕ್ಕಿದೆ

ಮನೆಯಂಗಳದಲ್ಲಿ ಅಪರೂಪದ ಚಿತ್ತಾರ ಚಿತ್ತಾಕರ್ಷಕ
ತುಂಬಿದೆಯಲ್ಲ
ಹಣೆಯ ಮೇಲೆ ಹೊಣೆಯ ಬೆವರು ವಿಪರೀತ ಚಿಂತೆಯ
ಕಕ್ಕಿದೆ.

ವರ್ಷದುದ್ದಕ್ಕೂ ದಟ್ಟೆಸುವ ಹಬ್ಬಗಳ ನಿಬ್ಬಣ ಜಯಳಿಗೆ ಖುಷಿ
ಹರುಷದಿ ಒಬ್ಬಟ್ಟು ನೈವೇದ್ಯ ಅರ್ಪಿಸಿ ಮೆತ್ತಗೆ ಮೆದ್ದು ಮಿಕ್ಕಿದೆ

ಜಯಶ್ರೀ.ಭ.ಭಂಡಾರಿ.

Don`t copy text!