ಕಾವ್ಯ ಕುಂತಿ

ಕಾವ್ಯ ಕುಂತಿ

ಹೆಣ್ಣು ಹೆಣ್ಣಲ್ಲ
ಹೆಣ್ಣು ರಕ್ಕಸಿಯಲ್ಲ
ಅಂದು ವೇದಿಕೆಯ ಮೇಲೆ
ನನ್ನ ಅಬ್ವರದ ಭಾಷಣ
ಮನೆಗೆ ಹೆಜ್ಜೆ ಇಟ್ಟ ಕ್ಷಣ
ಮೌನ ಶಾಂತ ಚಿತ್ತ
ಭಯ ಭೀತಿ ನಡುಕು
ನೋಡುವುದು ಅವರತ್ತ
ಸದ್ದಿಲ್ಲದೇ ಹೆತ್ತ
ಭಾವ ಭ್ರೂಣ ಎರಡೆರಡು
ಕವನ ಸಂಕಲನ
ಮುನ್ನುಡಿ ಬೆನ್ನುಡಿ
ವಿಮರ್ಶಕರ ಗೌರವದ ಮಾತು
ಆನಂದಿಸಲು ಅಳುಕು ಆತಂಕ
ಕೊರಿಯರ್ ಪೋಸ್ಟ್ ಮ್ಯಾನ್
ಮನೆಗೆ ಬಂದರೆ ಎದೆ ಢವ ಢವ
ಕದ್ದು ಮುಚ್ಚಿ ಸಂಕಲನಗಳ
ಮೂಟೆ ಹೊತ್ತು ತರಬೇಕು
ಮಕ್ಕಳ ಸೊಸೆಯರ ಸಹಾಯ
ತಂಗಿ ತಮ್ಮ ಬೆನ್ನು ತಟ್ಟಿದರು
ಎಷ್ಟೋ ವರುಷಗಳ ಕನಸು
ಮನೆ ಮುಟ್ಟಿದವು ಹೊತ್ತಿಗೆ
ಅವರಲ್ಲಿದ ಸಮಯದಲ್ಲಿ
ಬಂದ ಕವನ ಕಥೆ ಸಂಕಲನ
ಮುಚ್ಚಿ ಇಡಬೇಕು
ಅವರಿಲ್ಲದ ಸಮಯ
ಬಿಚ್ಚಿ ಓದಬೇಕು
ನಗೆ ಸಂತಸ ಉಕ್ಕಿ ಹರಿದರೂ
ಸಪ್ಪಳ ಮಾಡುವ ಹಾಗಿಲ್ಲ
ಸಂಕಲನಗಳು ಪ್ರಕಟಗೊಳ್ಳಲಿ
ಎನ್ನುವರ ನೂರು ಜನರ ಹರಕೆ
ಟಿವಿ ಮಾಧ್ಯಮಗಳು ಪತ್ರಿಕೆ ಕೃತಿಗಳ ಬಗ್ಗೆ ಬರೆಯುವ ಹಾಗಿಲ್ಲ
ಅಂದೋಮ್ಮೆ ನನ್ನ ತಮ್ಮ
ತನ್ನ ಭಾವನಿಗೆ
ನನ್ನ ಸಾಹಿತ್ಯ ಕೃಷಿ
ಬದುಕಿನ ಬಗ್ಗೆ ತನ್ನ ಮಾವನಿಗೆ
ಅಭಿನಂದನೆಗಳ ಸುರಿಮಳೆ
ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ
ಮನುವಿನ ಕಟ್ಟಳೆ
ಮನೆಗೆ ಬಂದ ಅತಿಥಿ
ಉಪಚಾರ ಚಹಾ ಕಾಫಿ
ಹೋಗುವಾಗ ಅವರು
ಕೇಳ ಬೇಕೇ
ಸುಧಾ ನಿನ್ನ ಹೊಸ
ಪುಸ್ತಕ ಎಲ್ಲಿ?
ಮೌನ ಮುರಿದು ಮಾತನಾಡಲು
ಮುಂದಾದೆ ಆಗ ನನ್ನವರು
ಅವಳೇನು ಬರೆದಿಲ್ಲ ಎನ್ನ ಬೇಕೇ?
ಮಿಸುಗಾಡದೆ ಬೆಚ್ಚಗೆ
ಕಪಾಟಿನ ಒಳಗಡೆ ಬಟ್ಟೆಯಲಿ
ಕುಳಿತು ಬಿಟ್ಟವು
ನನ್ನ ಎರಡು ಕೃತಿಗಳು
ಹೆತ್ತು ಹೊತ್ತು ಮುದ್ದಾಡಲು
ಆಗದ ನಾನು ಒಂಟಿ
ಕನ್ನಡದ ಕಾವ್ಯ ಕುಂತಿ

-ಸುಧಾ ಪಾಟೀಲ ಬೆಳಗಾವಿ

Don`t copy text!