ಬಯಲು ಸಂಗಮ
ನಿನ್ನ ಹ್ಯಾಂಗ
ಹಿಡಿಯಲಿ
ಕೆಲವು ಸಾಲಿನ ಕವನ
ಕನ್ನಡದ ಮುಡಿಗೆ
ನೀನಾದೆ ದವನ
ಹಳ್ಳಿಯ ಹುಡುಗ
ಸೈಕಲ್ಲಿನ ಜೋಡ
ಮನೆಯ ಮಗನಾದೆ
ಮಧುರ ಚೆನ್ನ
ಅರವಿಂದರ ಅರಿವು
ಶರಣರ ಸೂಳ್ನುಡಿಯು
ಅಕ್ಕ ಸಿದ್ಧರಾಮ
ಬಸವನ ಬೆಳಕು
ಮುಲ್ಕಿ ಶಿಕ್ಷಣ
ಮಾಸ್ತರನ ಪಯಣ
ವಿಶ್ವ ವಿದ್ಯಾಲಯ
ತಲೆ ಬಾಗಿತು
ನಿನ್ನ ನಯನ
ಅಧ್ಯಾತ್ಮ ಚಿಂತನ
ಅನುಭಾವ ಚೇತನ
ಕೈ ಮಾಡಿ ಕರೆಯಿತು
ಧಾರವಾಡ ತಪೋವನ
ಹಲವು ಗರಿಗಳ ಸಾಧನ
ನಿಮಗಿತ್ತ ಸನ್ಮಾನ
ಬಡವಾಯಿತು ಸಾಹಿತ್ಯ
ಬೆಂದ ತನು ಮನ
ಚೆನ್ನಮಲ್ಲರ ಕೃಪೆ
ಗುರು ಲಿಂಗ ಜಂಗಮ
ಬಿಟ್ಟು ಹೋದಿರಿ ಭುವಿಯ
ಬಯಲು ಸಂಗಮ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು