ಭಾವೈಕ್ಯತೆಯ ಭಾರತ

ಭಾವೈಕ್ಯತೆಯ ಭಾರತ

ಏಕತೆಯಲ್ಲಿ ವಿವಿಧತೆ
ಶಾಲಾ ಪುಸ್ತಕದ ನೆನಪು
ಓದುತ್ತೇವೆ ಕೇಳುತ್ತೇವೆ
ಭಾವೈಕ್ಯತೆಯ ಮಂತ್ರ
ಹಿಂದೂ ಮುಸ್ಲಿಂ
ಸಿಖ್ ಪಾರ್ಸಿ
ಬೌದ್ಧ ಜೈನ
ಎಲ್ಲರೂ ಒಂದೇ
ಭಾರತೀಯರು
ಜಾತಿ ಮತ ಧರ್ಮ
ಭೇದವಿಲ್ಲ
ಸಮ ಸಮಾಜದ
ಬೀಜ ಬಿತ್ತಿದ ಮಹನೀಯರು
ಮಾನವ ಕುಲ ಒಂದೇ ಎಂದರು
ಇಂಡಿಯಾ ಎಂದವರಿಗೆ
ತೋರಿಸಬೇಕಿತ್ತು ಭಾರತ
ಭಾರತದ ವೀರರು
ಗಂಡುಗಚ್ಚೆ ಉಟ್ಟು
ತುಂಡಾಗುತ್ತಿದ್ದ ಭಾರತವನ್ನು
ವಿರೋಧಿಸಿದರು
ನನ್ನ ದೇಶ ನನ್ನ ಜನ
ನನ್ನ ಧರ್ಮ ನನ್ನ ಜನಾಂಗ
ನನ್ನ ಸಂಸ್ಕೃತಿ ನನ್ನ ಪರಂಪರೆ
ವೀರ ಸನ್ಯಾಸಿಯ ಸಿಂಹ ಘರ್ಜನೆ
ಎಂಥವರ ಎದೆಯಲ್ಲಿ ನಡುಕ
ಉರುಳಿಗೆ ಕೊರಳು ಕೊಟ್ಟ
ಭಗತ್ ಸಿಂಗ್
ಮೇರಾ ನಾಮ್ ಆಜಾದ್ ಎಂದ
ಚಂದ್ರಶೇಖರ್
ಜಲಿಯನ್ ವಾಲಾಬಾಗ್
ಹತ್ಯಾಕಾಂಡದಲ್ಲಿ
ತನ್ನವರನ್ನು ಕಳೆದುಕೊಂಡ
ನೋವು ಕ್ರೋಧ
ರಕ್ತ ಕಂಗಳಲ್ಲಿ ನೆಲೆಗೊಳಿಸಿ
ಡಯರನ ಗುಂಡಿಕ್ಕಿ ಉರುಳಿಸಿದ
ಉದ್ದಾಮಸಿಂಗ
ಇನ್ ಇನ್ ಕ್ವಿಲಾಬ ಜಿಂದಾಬಾದ್ ಎನ್ನುತ್ತಲೆ ನೇಣುಕುಣಿಕೆಯ ಚುಂಬಿಸಿ
ಸಾವಿಗೆ ಶರಣಾದ
ರಾಜಗುರು ಸುಖದೇವ್
ಕ್ರಾಂತಿಗೆ ಮುನ್ನುಡಿ ಬರೆದ
ಚಾಪೆಕರ್
ಮೀಸೆ ಮೂಡುವ ಮೊದಲೆ
ಬಿಸಿನೆತ್ತರಲಿ ತೊಯ್ದು ಹೋದರು
ಇತ್ತ ತುತ್ತು ಕೊಡಲು ಹೋದವರ
ಕೈಯನ್ನೇ ಕಚ್ಚಿದರು ಖೂಳರು
ಭಾರತವೆಂಬ ಅಸ್ಮಿತೆಯನು
ತಾತ ಹೀಗೆ ಮಾಡಬಹುದೇ
ಅಂದಾಜಿರಲಿಲ್ಲ
ಅಂಗವಿಕಲೆ ಭಾರತ ಮಾತೆ
ಅದೇನು ತುಂಡರಿಸಿ ಮಕ್ಕಳ ಕೈಲಿ ಕೊಡುವ
ಬಿಸ್ಕೆಟ್ಟ

ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

Don`t copy text!