ಕವಿತೆ
ಸಾಧನೆ ಸಂಪತ್ತು
ಬಾಳೊಂದಿದ್ದರೆ ನೂರು ವರ್ಷ
ಸಾರ್ಥಕ ಬದುಕು ಎಷ್ಟು ವರ್ಷ!
ನೋವು ಮರೆತು ನಗುವನೆ ಹರಿಸು
ಎಲ್ಲರ ಬದುಕಲು ಬೆಳಕನು ಹರಿದು! !
ಕಷ್ಟ ನಷ್ಟಗಳು ಅದೆಷ್ಟಾದರು ಬರಲಿ
ಮುಂದೆ ಸಾಗುವ ಹುಮ್ಮಸ್ಸಿರಲಿ!
ನೋವು ನಲಿವು ಎರಡು ಅಲೆಗಳು
ಜೀವನದೊಳು ಸ್ಥಿರವಲ್ಲವುಗಳು!
ನೆನ್ನೆ ಮೊನ್ನೆ ಕಳೆಯಿತು ಬಾಲ್ಯ
ಯೌವನ ಕಾಲ ಅತ್ಯ ಅಮೂಲ್ಯ!
ಮುಂದೆ ಕಾಡುವುದು ಮುಪ್ಪಿನ ಮುದಿತನ
ಈಗಲೆ ಎಲ್ಲ ಸುಖಪ್ರದ ಜೀವನ. !!
ಮೂರೊತ್ತು ತುಂಬುವುದು ತುತ್ತಿನಚೀಲ ಒಂದಕ್ಕೆ
ಅದರದೇ ಚಿಂತೆಯಲ್ಲಿ ಲೋಕದ ಜನತೆ!
ಮಾಡಿದ ಸಾಧನೆ ಸಂಪತ್ತೆಷ್ಟು
ತಿಂದು ತಂಗಿದ್ದು ಬರೇ ವೇಷ್ಟು!!
ಕಾಲವು ಎಂದೂ ಕಾಯದು ನಮಗ
ವ್ಯರ್ಥ ಕಾಲವ ಕಳೆ ಯದೆ ನಾವು!
ಕಾಲನ ಕರೆಯು ಬರುವ ಮುನ್ನ
ಕಳಚಿಕೋ ಬೇಕು ನೀನೆಲ್ಲವನ್ನ!!
ಕ್ಷಣ ಬಿಡನು ಯಮ ಧರ್ಮ
ಬೆನ್ನು ಬಿಡದು ಸಾವು ನಿನ್ನ!!
ಎಷ್ಟು ದಿನದ ಜೀವನಾ. ?
ಮರಣ ಇದ್ದೇ ಇದೆ ಒಂದು ದಿನ!!
ಒಳಿತು ಮಾಡು ಆದಷ್ಟು ಮನುಜ
ನೀ ನಿರೋದು ಒಂದಷ್ಟು ದಿನ!!
–ಸ್ಮಿತವಾಣಿ ಸೀತಮ್ಮಕೃಷ್ಣಪ್ಪ, ಚಿಂತಾಮಣಿ
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏
ಬಹಳ ಚೆನ್ನಾಗಿದೆ🙏