ಗೋಹತ್ಯೆ ನಿಷೇದ
ಒಂದು ದಿನ ನಾನಿದ್ದ ನ್ಯಾಷನಲ್ ಕಾಲೇಜ್ ಹಾಸ್ಟೆಲ್ಗೆ ಒಬ್ಬ ಸ್ವಾಮೀಜಿಯವರು ಮತ್ತು ಐದಾರು ಮಂದಿ ಬಂದರು. ಅವರು ಬಂದ ಉದ್ದೇಶವನ್ನು ವಿವರಿಸಿದರು. ಗೋವುಗಳನ್ನ ರಕ್ಷಿಸಬೇಕೆಂದು ಪ್ರಚಾರ ಮಾಡುವುದು ಮತ್ತು ಗೋಹತ್ಯೆಯನ್ನು ವಿರೋಧಿಸುವುದು ಅವರ ಕೆಲಸವಾಗಿತ್ತು. ಅದಕ್ಕೆ ಸಂಬಂಧಿಸಿದ ಹಾಗೆ ಕರಪತ್ರದ ಮೇಲೆ ಒಂದು ಮನವಿ ಇತ್ತು. ಅದನ್ನು ನನಗೆ ಕೊಟ್ಟು “ನೀವು ಗಾಂಧಿವಾದಿಗಳು, ಸಸ್ಯಾಹಾರಿಗಳು ಅಂತ ಕೇಳಿದ್ದೀವಿ. ಅಹಿಂಸೆಯಲ್ಲಿ ನಿಮಗೆ ನಂಬಿಕೆ ಇದೆ. ಆದುದರಿಂದ ಗೋವಧೆಯನ್ನು ನಿಲ್ಲಿಸಬೇಕೆಂದು ನಾವು ಮಾಡುತ್ತಿರುವ ಚಳ ವಳಿಗೆ ನಿಮ್ಮ ಸಹಕಾರ ಬೇಕು” ಅಂತ ಸ್ವಾಮೀಜಿ ಹೇಳಿದರು.
ಆ ಮನವಿಯನ್ನು ಓದಿದೆ. “ಸ್ವಾಮೀಜಿ ಈ ಕರಪತ್ರದ ಮೇಲೆ ಗೋಮಾತೆಗೆ ಜಯವಾಗಲಿ ಅಂತ ಮಾತ್ರ ಮುದ್ರಿಸಿದ್ದೀರಿ. ಎಮ್ಮೆ ಮಾತೆಗೆ ಜಯವಾಗಲಿ ಅಂತ ಏಕೆ ಬರೆದಿಲ್ಲ. ಹಸುವಿಗಿಂತ ಎಮ್ಮೆಯೇ ಹೆಚ್ಚು ಹಾಲು ಕೊಡುವುದು. ಹಸು ಪೂಜ್ಯವಾದರೆ, ಎಮ್ಮೆಯೂ ಕೊನೆಯ ಪಕ್ಷ ಅಷ್ಟೇ ಪೂಜ್ಯವಾಗಬೇಕು” ಅಂತ ಕೇಳಿದೆ. ಸ್ವಾಮಿಜಿಗಳು ತಬ್ಬಿಬಾದರು. ಏನೋ ಹೇಳಲು ಹೋದರು, ಆದರೆ ಸಮಂಜಸವಾಗಿ ಹೇಳಲು ಪದಗಳು ಸಿಗಲಿಲ್ಲ. ಮರು ಮಾತಾಡದೆ ಅವರ ಶಿಷ್ಯರೊಂದಿಗೆ ಹೊರಟು ಹೋದರು.
~ಎಚ್. ನರಸಿಂಹಯ್ಯ
(ಆತ್ಮಕಥೆ ಹೋರಾಟದ ಹಾದಿ ಪುಸ್ತಕದಿಂದ)
—————————_———————
ಕ್ಷಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏