ಮೆದಕಿನಾಳ ಪ್ರೌಢಶಾಲೆಯಲ್ಲಿ ಅಟೋಮೊಬೈಲ್ ಕೊರ್ಸ ಆರಂಭ

ಮೆದಕಿನಾಳ ಪ್ರೌಢಶಾಲೆಯಲ್ಲಿ ಅಟೋಮೊಬೈಲ್ ಕೊರ್ಸ ಆರಂಭ

 

e-ಸುದ್ದಿ   ಮಸ್ಕಿ

ಪ್ರೌಢಶಾಲಾ ಹಂತದದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ೯ ತರಗತಿಯಲ್ಲಿ ೧೦ ಕೌಶಲ ಸೆಕ್ಟರ್ ಪರಿಚಯಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮಸ್ಕಿ ತಾಲ್ಲೂಕಿನ ಮೆದಕಿನಾಳ ಗ್ರಾಮದಲ್ಲಿ ಪ್ರಸಕ್ತ ವರ್ಷದಿಂದ ೯ ನೇ ತರಗತಿ ಮಕ್ಕಳಿಗೆ ಕೌಶಲ ಸೆಕ್ಟರ್ ಅಳವಡಿಸಲಾಗುತ್ತಿದೆ. ರಾಷ್ಟೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು [ನ್ಯಾಷನಲ್ ಸಸ್ಕಕಿಲ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ-ಎನ್.ಎಸ್.ಕ್ಯೂ.ಎಫ್] ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣ ನೀಡಲಾಗುತ್ತದೆ.
ಇದರಡಿಯಲ್ಲಿ ೧೦ ಸೆಕ್ಟರ್‌ಗಳಿವೆ. ಮಾಹಿತಿ ಮತ್ತು ತಂತ್ರಜ್ಞಾನ, ಅಟೋಮೊಬೈಲ್, ಬ್ಯೂಟಿ ಮಮತ್ತು ವೆಲ್‌ನೆಸ್, ಎಲೆಕ್ಟಾçನಿಕ್ಸ್, ಹಾರ್ಡವೇರ್, ರಿಟೇಲ್ ಕೃಷಿ, ಪತ್ರಿಕೊದ್ಯಮ, ಮನೊರಂಜ£, ಹೆಲ್ತ ಕೇರ್, ಅಪ್ಯಾರಲ್ಸ್ ಮೇಡ್ ಆಫ್ ಹೋಮ್ ಫರ್ನಿಶಿಂಗ್ ಗಳಿಗೆ ಸರ್ಕಾರ ಕಲಿಕೆಗೆ ಅನುಮತಿ ನೀಡಲಾಗಿದೆ.
ಮೆದಕಿನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಅಟೋಮೊಬೈಲ್ ಕೊರ್ಸ ಆರಂಭಿಸಲಾಗುತ್ತದೆ. ಎರಡು ಕೊರ್ಸಗಳಿಗೆ ತಲಾ ೨೫ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶವಿದೆ ಎಂದು ಮುಖ್ಯೋಪಾಧ್ಯಯ ಬಸಪ್ಪ ಮುಳ್ಳುರು ತಿಳಿಸಿದ್ದಾರೆ.
———————
ಹಿಂದುಳಿದ ಪ್ರದೇಶದಲ್ಲಿ ಪ್ರೌಢಶಾಲ ಹಂತದಲ್ಲಿ ಮಕ್ಕಳಿಗೆ ಕೌಶಲ ಸೆಕ್ಟರ್ ಅಳವಡಿಸುವದರಿಂದ ಶಾಲೆ ಬಿಟ್ಟ ಮೇಲೆ ಸ್ವಂತ ಉದ್ಯೋಗ ಪ್ರಾರಂಭಿಸಲು ಅನುಕೂಲವಾಗುತ್ತದೆ ಇದರಿಂದಾಗಿ ನಿರುದ್ಯೋಗ ಸಮಸ್ಯೆ ನಿವಾರಣಣೆ ಆಗುತ್ತದೆ.
– ಬಸಪ್ಪ ಮುಳ್ಳುರು, ಮುಖ್ಯೋಪಾಧ್ಯಯ ಸರ್ಕಾರಿ ಪ್ರೌಢಶಾಲೆ ಮೆದಕಿನಾಳ
———————————————-

Don`t copy text!