ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಂಬಲ 5 ಎ ಕಾಲುವೆ ಹೊರಾಟ 23ನೇ ದಿನ ಪೂರೈಸಿದ ಧರಣಿ ಸತ್ಯಗ್ರಹ

e-ಸುದ್ದಿ, ಮಸ್ಕಿ

ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಎನ್ನಾರ್ಬಿಸಿ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಗ್ರಹ ಶನಿವಾರ 23 ನೇ ದಿನ ಪೂರೈಸಿತು.
ಸರ್ಕಾರ ಬಹು ವರ್ಷಗಳ ಬೇಡಿಕೆಯನ್ನು ಈಢೇರಿಸುವಂತೆ ಒತ್ತಾಯಿಸಿ ಸುಮಾರು 50 ಹಳ್ಳಿಗಳ ಜನರು ಸರದಿಯಂತೆ ಧರಣಿಯಲ್ಲಿ ಭಾಗವಹಿಸುವ ಮೂಲಕ ಸರ್ಕಾರಕ್ಕೆ ಚಳಿಯಲ್ಲಿ ಬಿಸಿ ಮುಟ್ಟಿಸ ತೊಡಗಿದ್ದಾರೆ.
ಎನ್ನಾರ್ಬಿಸಿ 5ಎ ಕಾಲುವೆ ಜಾರಿಗಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ಕಾಲುವೆ ವ್ಯಾಪ್ತಿಯ ಗ್ರಾಮಸ್ಥರು 1 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಪಾಮನಕಲ್ಲೂರು ಗ್ರಾಮದಿಂದ ಧರಣಿ ಸ್ಥಳಕ್ಕೆ ರೈತರು, ಮಹಿಳೆಯರು ಕಾಲ್ನಡಿಗೆ ಮೂಲಕ ಆಗಮಿಸಿ ಹೋರಾಟಕ್ಕೆ ಬೆಂಬಲಿಸಿದರು.
ಹೋರಾಟ ತೀವ್ರ ಸ್ವರೂಪಕ್ಕೆ ಕೊಂಡೊಯ್ಯಬೇಕು: ಸುಮಾರು 12 ವರ್ಷಗಳಿಂದ ನಾರಾಯಣಪುರು ಬಲದಂಡೆ 5ಎ ಶಾಖಾ ಕಾಲುವೆಯನ್ನು ಅನುಷ್ಠಾನಗೊಳಿಸಬೇಕೆಂದು ವ್ಯಾಪ್ತಿಯ ರೈತರು, ಮಹಿಳೆಯರು ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಕೆಬಿಜಿಎನ್‍ಎಲ್ ಇಲಾಖೆ ಅಧಿಕಾರಿಗಳಿಗೆ ರೈತರ ಕೂಗು ಕೇಳಿಸುತ್ತಿಲ್ಲ. ಆದ್ದರಿಂದ ತೀವ್ರ ಸ್ವರೂಪದ ಹೋರಾಟ ಮಾಡಿದರೆ ಮಾತ್ರ ಸಂಬಂಧಪಟ್ಟವರಿಂದ ಪ್ರತಿಕ್ರಿಯೆ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಹೇಳಿದರು.
ಮಠಾಧೀಶರ ಬೆಂಬಲ: ಬಸವಲಿಂಗಮ್ಮ ಅಮ್ಮನವರು ಗಂಗಾಂಭೀಕ ಮಠ ಅಮೀನಗಡ, ಮಹಾಲಿಂಗ ಮಹಾಸ್ವಾಮಿಗಳು ಯದ್ದಲದೊಡ್ಡಿ, ಸಿದ್ದಬಸವ ಮಹಾಸ್ವಾಮಿಗಳು ಹಳೆಕೋಟೆ ಬಳಗಾನೂರು, ಸಿದ್ದರಾಮನಂದಪುರಿ ಸ್ವಾಮಿಗಳು ತಿಂಥಿಣಿ ಬ್ರೀಡ್ಜ್, ಬಸವಭೂಷಣ ಮಹಾಸ್ವಾಮಿಗಳು (ಉದ್ಬಾಳ) ಸಿರಗುಪ್ಪ, ಶರಣಯ್ಯ ತಾತಾನವರು ಹುನಕುಂಟಿ, ಪರಮನಂದ ಸ್ವಾಮಿ ಆನಂದಗಲ್, ದೇವಯ್ಯ ಸ್ವಾಮಿ ಹಿರೇಮಠ ಅಮೀನಗಡ, ಚನ್ನಮಲ್ಲಯ್ಯ ಸ್ವಾಮಿಗಳು ಮೆದಿಕಿನಾಳ ಸೇರಿದಂತೆ ರೈತರು ಮುಖಂಡರು ಭೇಟಿ ನೀಡಿ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
——————-
ನಮಗೆ ನಂದವಾಡಗಿ ನೀರಾವರಿ ಯೋಜನೆ ಈ ಭಾಗದ ರೈತರಿಗೆ ಉಪಯೋಗವಿಲ್ಲ. ಎನ್ನಾರ್ಬಿಸಿ 5ಎ ಕಾಲುವೆ ಹೋರಾಟವನ್ನು ದಾರಿ ತಪ್ಪುಸುವ ಸಲುವಾಗಿ ನಂದವಾಡಗಿ 2ನೇ ಹಂತದ ಯೋಜನೆಯ ಅನುದಾನಕ್ಕೆ ಸರ್ಕಾರ ಅನುಮೋಧನೆ ದೊರೆತಿದೆ ಎಂದು ಹೇಳುತ್ತಿದ್ದಾರೆ. ಎನ್ನಾರ್ಬಿಸಿ ಜಾರಿಯಾಗುವ ತನಕ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ.
-ನಾಗರಡ್ಡೆಪ್ಪ ದೇವರಮನಿ 5ಎ ಹೋರಾಟ ಸಮಿತಿಯ ಸಂಚಾಲಕ
—————–

Don`t copy text!