ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಗುಂಡಲಬಂಡಾ ಜಲಪಾತ

 

 

 

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಗುಂಡಲಬಂಡಾ ಜಲಪಾತ

ಬಿಸಿಲ ನಾಡು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಲವಾರು ಪ್ರವಾಸಿ ತಾಣಗಳಲ್ಲಿ ಗುಂಡಲಬಂಡಾ (ಗೋಲಪಲ್ಲಿ ಫಾಲ್ಸ್) ಜಲಪಾತವೂ ಕೂಡ ಒಂದು.

ಲಿಂಗಸುಗೂರು ತಾಲೂಕು ಕೇಂದ್ರದಿಂದ ಕೇವಲ 24 ಕೀ.ಮಿ ಅಂತರ ದೂರದಲ್ಲಿ ಅಂದರೆ ಕಲಬುರ್ಗಿ ಕಡೆ ಹೊರಡುವ ಹಾದಿಯಲ್ಲಿ ಗುರುಗುಂಟಾ ಹೋಬಳಿ ಕೇಂದ್ರದಿಂದ 3 ಕೀ.ಮಿ ಅಂತರದಲ್ಲಿ ಈ ಜಲಪಾತವಿದೆ.

 

ಮಲೆನಾಡಿನ ಸೋಬಗನ್ನು ನೆನಪಿಸುವಂತೆ ಕಲ್ಲು ಬಂಡೆಗಳ ಮೇಲೆ ಸುಮಾರು 90 ಅಡಿ ಮೇಲಿಂದ ರಮಣಿಯವಾಗಿ ಇಳಿಜಾರುವಿನಲ್ಲಿ ಹರಿಯುವಂತಹ ನೀರಿನ ದೃಶ್ಯ ಮನ ಮೋಹಕವಾಗಿ ಕಾಣಿಸುತ್ತದೆ.

ಒಂದು ದಶಕದಿಂದ ಈ ಜಲಪಾತವು ಬೆಳಕಿಗೆ ಬಂದು ಪ್ರಖ್ಯಾತ ಪಡೆದುಕೊಂಡಿದೆ.
ಮಳೆಗಾಲದಲ್ಲಂತು ಮೈದುಂಬಿ ಹರಿಯುತ್ತದೆ.
ಜರಿಯಂತೆ ಹರಿಯುವ ಜಿಲ್ಲೆಯ ಏಕೈಕ ಜಲಪಾತ ಗುಂಡಲಬಂಡಾ ಜಲಪಾತ. ಒಂದು ದಿನದ ಮಟ್ಟಿಗೆ  ಪ್ರವಾಸಕ್ಕೆ ಹೋಗಬೇಕು ಎನ್ನುವವರಿಗೆ ತುಂಬಾ ಸುಂದರವಾದ ಸ್ಥಳವಾಗಿದೆ.
ಜಲಪಾತಕ್ಕೆ ತೆರಳಲು ರಸ್ತೆಯದ್ದೆ ಸ್ವಲ್ಪ ಸಮಸ್ಯೆಯಿದೆ.

 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಈ ಜಲಪಾತವನ್ನು ಪ್ರವಾಸಿ ತಾಣವಾಗಿ ಮಾಡಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ವೀರೇಶ ಅಂಗಡಿ ಗೌಡೂರು

Don`t copy text!