ಗುಳ್ಳವ್ವನ ಹಬ್ಬ

ಗುಳ್ಳವ್ವನ ಹಬ್ಬ

ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಆಚರಿಸುವ ವಿಶಿಷ್ಟವಾದ ಹಬ್ಬ ಗುಳ್ಳವ್ವನ ಹಬ್ಬ. ನಮ್ಮ ರೈತರು ಭೂಮಿ ತಾಯಿಯ ಪೂಜಿಸುವ ವಿವಿಧ ಹಬ್ಬಗಳಲ್ಲಿ ಇದು ಕೂಡ ಒಂದು.

ಆಷಾಡ ಮಾಸದ ಪ್ರತಿ ಮಂಗಳವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ಮಂಗಳವಾರ ಹೊಲದಿಂದ ಮಣ್ಣುತಂದು, ಆಯತಾಕಾರದ ಕೆತ್ತನೆಯಿರುವ ಕಟ್ಟಿಗೆ ಬಾಗಿಲನ್ನು ಜೋಡಿಸಿ, ಗುಲಗಂಜಿ ಹಾಗೂ ಕುಸುಬಿಯ ಕಾಳುಗಳಿಂದ ಸಿಂಗರಿಸಿ ಗುಳ್ಳವ್ವನ ಮಾಡಿಟ್ಟು ಪೂಜಿಸಲಾಗುತ್ತದೆ.

 

 

 

 

 

 

 

 

 

ನಂತರ ಪ್ರತಿ ವಾರಕ್ಕೊಂದು ಮನೆ ಹೆಚ್ಚುತ್ತಾ, ಆಕಾರದಲ್ಲಿ ಹೆಚ್ಚಿಸುತ್ತಾ ಕೊನೆಯ ವಾರ ದೊಡ್ಡದಾಗಿ ಮಾಡಿ ಪೂಜಿಸುವುದು ರೂಢಿ.
ಮತ್ತಷ್ಟು ಆಚರಣೆಯ ವಿಶೇಷವೆಂದರೆ ಗುಳ್ಳವ್ವನ ಪಕ್ಕದಲ್ಲಿ ಗೊಗ್ಗವ್ವನ ಮೂರ್ತಿ ಮಾಡಿ, ಸೀರೆ ಉಡಿಸಿ, ಹೂವು ಮುಡಿಸಿ, ವಿವಿಧ ಆಭರಣಗಳನ್ನು ಹಾಕಿ ಅಲಂಕಾರ ಮಾಡುವುದು. ಗುಳ್ಳವ್ವನ ಮುಂದೆ ಮಣ್ಣಿನ ಎತ್ತುಗಳನ್ನು, ವೈವಿಧ್ಯಮಯ ಬಣ್ಣ ಬಣ್ಣದ ಗೊಂಬೆಗಳನ್ನಿಟ್ಟು ನೋಡಲು ಆಕರ್ಷಕವಾಗುವಂತೆ ಮಾಡುವರು.ಹೆಣ್ಣುಮಕ್ಕಳು ಮಣ್ಣಿನಾರತಿಯಿಂದ ಆರತಿ ಬೆಳಗುವುದು ಸಂಪ್ರದಾಯ. ಈ ಹಬ್ಬವನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಇರುವವರು ಹೆಚ್ಚಾಗಿ ಆಚರಿಸುತ್ತಾರೆ.

ಇಂದಿನ ಆಧುನಿಕತೆಯ ತಂತ್ರಜ್ಞಾನದ ಯುಗದಲ್ಲಿ ಈ ಜಾನಪದ ಹಬ್ಬವು ಮರೆಯಾಗುತ್ತಿರುವುದು. ಆದರೂ ಗುಳ್ಳವ್ವನ ಮಾಡುವುದು ಇನ್ನೂ ಕೆಲವು ಹಳ್ಳಿಯ ಮನೆಗಳಲ್ಲಿ ಅಪರೂಪಕ್ಕೆಂಬಂತೆ ಕಂಡುಬರುತ್ತಿದೆ.

 

 

 

 

 

 

 

 

 

ಶಿವಾನಂದ ಉಳ್ಳಿಗೇರಿ

ಕವಿ, ಶಿಕ್ಷಕ

 

 

 

Don`t copy text!