ವಚನ ನಿಧಿಯನ್ನು ನಾಡಿಗೆ ನೀಡಿದ ಆಧುನಿಕ ಶರಣ ಡಾ. ಫ.ಗು ಹಳಕಟ್ಟಿ

 

 

 

 

 

 

 

 

ವಚನ ನಿಧಿಯನ್ನು ನಾಡಿಗೆ ನೀಡಿದ ಆಧುನಿಕ ಶರಣ ಡಾ. ಫ.ಗು ಹಳಕಟ್ಟಿ

e-ಸುದ್ದಿ ರಾಯಚೂರು

ದೀಪದ ಬತ್ತಿಯಂತೆ ತಮ್ಮನ್ನು ತಾವು ಸುಟ್ಟುಕೊಂಡು ಇಡೀ ಸಮಾಜಕ್ಕೆ ಬೆಳಕಾದ ಹಳಕಟ್ಟಿಯವರನ್ನು ಪ್ರತಿನಿತ್ಯ ಸ್ಮರಿಸಬೇಕಿದೆ. ಅವರ ಜೀವನದ ಆದರ್ಶ ತತ್ವಗಳು ತ್ಯಾಗ, ಸೇವೆ, ನಿರಂತರ ಪರಿಶ್ರಮ, ಪ್ರಸ್ತುತ ಸಮಾಜಕ್ಕೆ ಮಾದರಿ. ಕಾಯಕ ತತ್ವವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡ ಆಧುನಿಕ ಶರಣರು. ಇವರ ಬದುಕೇ ಒಂದು ಮಾದರಿ. ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ ಪ್ರಕಟಿಸಿದ ಇವರ ಸೇವೆ ಅನನ್ಯವಾದದುಎಂದು ಉಪನ್ಯಾಸಕಿ ರೇಖಾ ಪಾಟೀಲ ಹೇಳಿದರು.

ನಗರದ ಬಸವ ವಿದ್ಯಾನಿಕೇತನ ಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ವಚನ ಪಿತಾಮಹ ಹಾಗೂ ಹಳಕಟ್ಟಿಯವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಮಾತನಾಡಿದರು.

 

 

ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಸವ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷರಾದ ಡಾ. ಶಿವಪ್ಪ ಮಾಲಿಪಾಟೀಲ ತಮ್ಮ ಉದ್ಘಾಟನಾ ಮಾತುಗಳಲ್ಲಿ ಬಸವಾದಿ ಶರಣರ ವಚನಗಳು ಎಲ್ಲರ ಬದುಕಿಗೆ ದಾರಿದೀಪ. ಜಾತಿ ಭೇದವಿಲ್ಲದೆ ಸರ್ವರಿಗೂ ಸಮಾನತೆಯನ್ನು ಕೊಟ್ಟವರು. ಬಸವಣ್ಣನವರ ಕಳಬೇಡ, ಕೊಲಬೇಡ ಸಪ್ತ ಸೂತ್ರಗಳು ಸಮಾಜಕ್ಕೆ ದಾರಿ ದೀಪ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಬಸಪ್ಪ ತಿಪ್ಪಾರೆಡ್ಡಿ ರವರು ಮಾತನಾಡಿ ಹಳಕಟ್ಟಿಯವರು ವಚನ ಕಟ್ಟುಗಳ ಸಂಗ್ರಹಣೆ ಮಾತ್ರವಲ್ಲ ಅವುಗಳ ಮುದ್ರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ತಮ್ಮ ಮುದ್ರಣಾಲಯದಿಂದ ಸಾಕಷ್ಟು ಕೃತಿಗಳು ಪತ್ರಿಕೆಗಳನ್ನು ಹೊರ ತರುವಲ್ಲಿ ಅವರು ಯಶಸ್ವಿಯಾದರು. ಇಂದು ಅವರ ಕೊಡುಗೆ ವಚನ ಸಂಪತ್ತು ನಮ್ಮೊಂದಿಗೆ ಇದೆ. ಹಳಕಟ್ಟಿಯವರ ಜೀವನ ಆದರ್ಶಗಳು ಇಂದಿನ ಯುವ ಜನತೆಗೆ ಸ್ಪೂರ್ತಿದಾಯಕ ಎಂದುರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಮತ್ತು ಬಸವ ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ನಾಗರಾಜ ಮಸ್ಕಿ ಮಾತನಾಡಿ ಹಳಕಟ್ಟಿಯವರು ಕನ್ನಡ ಸಾಹಿತ್ಯ ಮತ್ತು ಶರಣ ಸಂಸ್ಕೃತಿಗೆ ಅವರ ಸೇವೆ ಅಪಾರವಾದದ್ದು. ಹಳಕಟ್ಟಿಯವರು ನಿತ್ಯ ಸ್ಮರಣೀಯರು. ಅವರ ವ್ಯಕ್ತಿತ್ವವನ್ನು ಮಕ್ಕಳಿಗೆ ಮನದಟ್ಟು ಮನದಟ್ಟು ಮಾಡಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಮಕ್ಕಳಲ್ಲಿ ವಚನ ಸಂಸ್ಕೃತಿಯಿಂದ ನಾಡಿನ ಉತ್ತಮ ಪ್ರಜೆಗಳಾಗುವಲ್ಲಿ ಯಾವ ಸಂಶಯವಿಲ್ಲ ಎಂದರು.

ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಎಂ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಕ್ರಮದ ಮುಖ್ಯ ಉದ್ದೇಶ ಶಾಲೆಯ ಪ್ರಾಂಗಣಕ್ಕೆ ಶರಣ ಸಂಸ್ಕೃತಿಯನ್ನು ಹರಡುವ ಘನ ಉದ್ದೇಶ ಹೊಂದಿದೆ.ಈ ಕಾರ್ಯಕ್ರಮ ಅರಳುವ ಹೂವಿನಂತ ಮಕ್ಕಳಲ್ಲಿ ಶರಣ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಹಳಕಟ್ಟಿಯವರ ಜೀವನ ಮತ್ತು ಆದರ್ಶಗಳು ವಿಷಯದ ಮೇಲೆ ಪ್ರಾಥಮಿಕ ಮತ್ತು ಪ್ರೌಢ ಹಂತದ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮವು ಶಾಲೆಯ ಮಕ್ಕಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡಿತು. ಶಾಲೆಯ ಶಿಕ್ಷಕರು ಸ್ವಾಗತ ವಂದನಾರ್ಪಣೆ ಮತ್ತು ನಿರೂಪಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಸವ ವಿದ್ಯಾನಿಕೇತನ ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಅಧಿಕಾರಿಗಳು, ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು.

Don`t copy text!