ಪುಸ್ತಕ ಬಂಡಾರಕ್ಕೆ ಬನ್ನಿ
ಪುಸ್ತಕ ಓದುವುದು (Books Reading) ಒಬ್ಬ ವ್ಯಕ್ತಿಗೆ ಜ್ಞಾನವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಕೆಲವೊಮ್ಮೆ ಮನಸ್ಸಿಗೆ ಶಾಂತಿಯನ್ನು ಸಹ ನೀಡುತ್ತದೆ. ಜೀವನದ ಒತ್ತಡಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಪುಸ್ತಕಗಳಿಂದ ತುಂಬಿದ ಕೋಣೆಯಲ್ಲಿ ಯಾರೂ ಏಕಾಂಗಿತನವನ್ನು ಅನುಭವಿಸಲು ಸಾಧ್ಯವಿಲ್ಲ. ಹೀಗಾಗಿ, ಗ್ರಂಥಾಲಯಗಳು (Library) ಶತಮಾನಗಳ ಕಥೆಗಳು, ಕಾಲ್ಪನಿಕ ಕಥೆಗಳು ಮತ್ತು ವಾಸ್ತವದಿಂದ ತುಂಬಿದ ಮಾಂತ್ರಿಕ ಸ್ಥಳವಾಗಿದ್ದು, ಎಲ್ಲಾ ಸಮಯದಲ್ಲೂ ನಿಮ್ಮ ಓದಿನ ಬಾಯಾರಿಕೆಯನ್ನು ನೀಗಿಸುತ್ತದೆ. ಆದ್ದರಿಂದ ನೀವು ಕೂಡ ಪುಸ್ತಕ ಓದಲು ಮತ್ತು ಸಂಗ್ರಹಿಸಲು ಇಷ್ಟಪಡುವವರಾಗಿದ್ದರೆ ಮತ್ತು ಯಾವಾಗಲೂ ಉತ್ತಮ ಪುಸ್ತಕಗಳನ್ನು ಓದಲು ಗ್ರಂಥಾಲಯಕ್ಕೆ ಬನ್ನಿ.
ಬೃಹತ್ ಗ್ರಂಥಾಲಯಕ್ಕೆ ಪುಸ್ತಕ ದಾನ ಮಾಡಿ
ಮಸ್ಕಿ ಪಟ್ಟಣದಲ್ಲಿ ಬೃಹತ್ ಗ್ರಂಥಾಲಯ ಸ್ಥಾಪನೆಯಾಗಲಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಸ್ಪರ್ಧಾತ್ಮ ಕ ಪುಸ್ತಗಳು, ಆಸಕ್ತ ಓದುಗರಿಗಾಗಿ ಕತೆ, ಕಾದಂಬರಿ, ಕವನ ಸಂಗ್ರಹ, ವೈಚಾರಿಕ ಲೇಖನಗಳ ಸಂಗ್ರಹ ಪುಸ್ತಕ, ವ್ಯಕ್ತಿತ್ವ ವಿಕಸನದ ಪುಸ್ತಕ ಅಥವಾ ಯಾವುದೇ ಧರ್ಮದ ಧಾರ್ಮಿಕ ಗ್ರಂಥಗಳನ್ನು ದಾನಮಾಡಿ.
ದಾನಗಳಲ್ಲಿ ಅನ್ನದಾನ, ಸಂಪತ್ತು ದಾನ , ಸಮಯದಾನ, ಗೋದಾನ ಪ್ರಮುಖವಾಗಿದ್ದವು. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಪುಸ್ತಕದಾನ ಮುಖ್ಯವಾಗಿದೆ.
ಪುಸ್ತಕಗಳನ್ನು ಮಕ್ಕಳ ಹುಟ್ಟುಹಬ್ಬ, ವಿವಾಹ ಸಂದರ್ಬಕ್ಕೆ, ಗೃಹಪ್ರವೇಶಕ್ಕೆ ಇನ್ನಿತರ ಸಭೆ ಸಮಾರಂಭಗಳಲ್ಲಿ ಪುಸ್ತಕ ಕೊಡುವ ಮೂಲಕ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸೋಣ.
ನಿಮ್ಮ ಮನೆಯಲ್ಲಿರುವ ಉಪಯುಕ್ತ ಪುಸ್ತಕಳನ್ನು ಗೆದ್ದಲು ಹತ್ತದಂತೆ ಜೋಪಾನವಾಗಿ ಸಂರಕ್ಷಿಸಿ. ನಿಮಗೆ ಬೇಡವಾದ ಪುಸ್ತಗಳನ್ನು ಗುಜರಿ ಅಂಗಡಿಗೆ ಪೊಟ್ಟಣ ಕಟ್ಟಲು ಕಿರಾಣಿ ಅಂಗಡಿಗೆ ಮಾರಾಟ ಮಾಡಬೇಡಿ.
ನಮಗೆ ಕೊಡಿ ನಾವು ಸಂರಕ್ಷಿಸುತ್ತೇವೆ. ಇತರರಿಗೆ ಓದಲು ಕೊಡುತ್ತೇವೆ.
ತಡಮಾಡಬೇಡಿ
ನಿಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ನಮಗೆ ಕೊಡಿ. ಗ್ರಂಥಾಲಯ ಸ್ಥಾಪನೆಯಲ್ಲಿ ನಿಮ್ಮ ಸೇವೆ ಅಮುಲ್ಯವಾಗುತ್ತದೆ.
ನಮ್ಮ ದೂರವಾಣಿ ಸಂಖೆಗೆ ಕರೆ ಮಾಡಿ ನಾವೇ ಖುದ್ದಾಗಿ ಬಂದು ಪುಸ್ತಕ ಪಡೆಯುತ್ತೇವೆ.
ನಮ್ಮ ಸಂಪರ್ಕ ವಿಳಾಸ
ವೀರೇಶ ಸೌದ್ರಿ
“ಪುಸ್ತಕ ಬಂಡಾರ”
ಸೌದ್ರಿ ಆಫ್ ಸೆಟ್ ಪ್ರಿಂಟರ್ಸ ಮಸ್ಕಿ, ರಾಯಚೂರು ಜಿಲ್ಲೆ.
9448805067