ಲಿಂಗಸೂಗುರಿನಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯ ಮಾಡಲು ಚಾರಣ ಬಳಗದಿಂದ ಮನವಿ

ಲಿಂಗಸೂಗುರಿನಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯ ಮಾಡಲು ಚಾರಣ ಬಳಗದಿಂದ ಮನವಿ

 

e-ಸುದ್ದಿ ಲಿಂಗಸುಗೂರು

ಲಿಂಗಸೂಗುರು ತಾಲೂಕು ಮೌರ್ಯರ ಕಾಲದಿಂದ ನಿಜಾಮರ ಕಾಲದವರೆಗೂ ಬಹಳಷ್ಟು ಐತಿಹಾಸಿಕ ಪ್ರಸಿದ್ಧಿ ಪಡೆದ ಸ್ಥಳವಾಗಿದ್ದು , ತಾಲೂಕಿನಲ್ಲಿ ಹಲವಾರು ಐತಿಹಾಸಿಕ ಕುರುಹುಗಳಿರುವ ಶಾಸನಗಳು, ವೀರಗಲ್ಲುಗಳು, ಪ್ರಾಚ್ಯ ಕಾಲದ ಅವಶೇಷವೆಲ್ಲವು ಭಗ್ನಗೊಂಡು ವಿಗ್ರಹಗಳು ಅನಾಥವಾಗಿ ಬಿದ್ದಿದ್ದು ಅವೆಲ್ಲವುಗಳನ್ನು ಒಂದೆಡೆ ಸಂಗ್ರಹಿಸಿಡುವ ಉದ್ದೇಶದಿಂದ ತಾಲೂಕು ಆಡಳಿತದ ವತಿಯಿಂದ ಪ್ರಾಚ್ಯ ವಸ್ತು ಸಂಗ್ರಹಾಲಯ ಮಾಡುವಂತೆ ಲಿಂಗಸಗೂರು ಮತ್ತು ಮಸ್ಕಿ ಚಾರಣ ಬಳಗದ ಸಮಾನ ಮನಸ್ಕರರು ಲಿಂಗಸೂಗುರಿನ ಉಪವಿಭಾಗದ ಸಹಾಯ ಆಯುಕ್ತರಿಗೆ ಇಂದು ಮನವಿ ಸಲ್ಲಿಸಿದರು.

ಪ್ರಾಚ್ಯ ವಸ್ತು ಸಂಗ್ರಹಾಲಯ ಮಾಡುವದರಿಂದ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ. ಲಿಂಗಸುಗೂರು ತಾಲೂಕಿನ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಇತಿಹಾಸ ಪ್ರಿಯರಿಗೆ , ವಿಧ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ತುಂಬಾ ಅನುಕೂಲವಾಗಲಿದೆ. ಕಾರಣ ತಾಲೂಕು ಆಡಳಿತದ ವತಿಯಿಂದ ಆದಷ್ಟು ಬೇಗ ಪ್ರಾಚ್ಯ ವಸ್ತು ಸಂಗ್ರಹಾಲಯ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ಅಶೋಕ ನಾಯಕ ದಿದ್ದಿಗಿ, ರಾಜೇಶ್ ನಾಯಕ, ವೆಂಕೋಬ ನಾಯಕ, ಬಸವರಾಜ ಬೈಲಗುಡ್ಡ,ಅಜಯ್ ಕುಮಾರ್ ಶಿವಂಗಿ ಸೇರಿದಂತೆ ಇತರರಿದ್ದರು.

 

 

 

 

 

 

 

 

 

ವರದಿ : ವೀರೇಶ ಅಂಗಡಿ

Don`t copy text!