ಕಾಮಾಖ್ಯ ದೇವಾಲಯ…..
ಭಾರತದ ಅನೇಕ ಶಕ್ತಿ ಪೀಠಗಳನ್ನು ಸಂದರ್ಶಿಸಿ ಪುನೀತಳಾದ ನನಗೆ ಕಾಮಾಖ್ಯ ಮಂದಿರ ಕೂಡ ನೋಡಲು ಬಯಸಿದ್ದೆ. ಆದರೆ ಆ ಬಯಕೆ ಯಾವುದೇ ಪೂರ್ವ ತಯಾರಿ ಇಲ್ಲದೇ ಇಷ್ಟು ಬೇಗ ಕೈಗೂಡುತ್ತದೆ ಎಂದು ಕೊಂಡಿರಲಿಲ್ಲ.
ಗೌಹಾತಿ ಶಿಲಾಂಗ್, ಚಿರಾಪುಂಜಿ ನೋಡಿ ಬರುವಾಗ ಅಯೋಧ್ಯಾ ಹೋಗುವದೆಂದು ಪ್ರವಾಸ ಸಿದ್ಧವಾಯಿತು. ನಮ್ಮ್ ಮಕ್ಕಳೂ ಕೂಡ ತಮ್ಮ ಗೆಳೆಯರ ಜೊತೆ ಶಿಲಾಂಗ್. ಚಿರಾಪುಂಜಿ trecking ಹೋಗಲು ನಿರ್ಧರಿಸಿದ್ದು.. ನಮ್ಮ್ ಈ ಪ್ರವಾಸಕ್ಕೆ ಕಾರಣವಾಗಿತ್ತು.
ಬೆಳಗಾವಿಯಿಂದ ದೆಹಲಿ ಮಾರ್ಗವಾಗಿ ಅಸ್ಸಾಂನ ರಾಜಧಾನಿ ಗೌಹಾತಿಗೆ ತಲುಪಿದೆವು. ಮಾರನೇ ದಿನ online ನಲ್ಲಿ ಕಾಮಾಖ್ಯ ದೇವಾಲಯಕ್ಕೇ ಹೋಗಲು ticket book ಮಾಡಿದ್ದೆವು. ಒಬ್ಬರಿಗೆ 500rs. ಜೊತೆಗೆ ಒಬ್ಬ ಪಾಂಡಾ (ಅರ್ಚಕರು )book ಮಾಡಬೇಕಿತ್ತು.
ಅಂದು ಮಂಗಳವಾರ. ದೇವಿ ವಾರ. ಬೆಳಿಗ್ಗೆ ಪಾಂಡಾ ಗೆ ಫೋನ್ ಮಾಡಿದಾಗ ಅವರು ಆನಂದಿ ಸ್ಟೋರ್ ಕಡೆ ಇರುವ ಆಫೀಸ್ಗೆ (ಸರ್ಕಾರದ) ಬರಲು ಹೇಳಿದರು. ಅದರಂತೆ ಅಲ್ಲಿ ಹೋದಾಗ.. ಪಾoಡಾ ಫೋನಿಗೆ oTp ಬಂದಿತ್ತು. ಅದನ್ನೂ ಹೇಳಿ ticket ಪಡೆದೆವು. ಒಂದು ಗಂಟೆ ಕಾದ ಮೇಲೆ q ಪ್ರಾರಂಭವಾಯಿತು. ಅಲ್ಲಿ ಮೂರು line. ಒಂದು ಸಾಮಾನ್ಯ ದರ್ಶನ್.. ಬೆಳಿಗ್ಗೆ 2ಕ್ಕೇ ಬಂದು ನಿಂತಿದ್ದರು. ಇನ್ನೊಂದು on line book ಮಾಡಿದವರು. ಮತ್ತೊಂದು ಮಿಲಿಟರಿ ಜನ ಹಾಗೂ ವಿಶೇಷ ಚೇತನ ವ್ಯಕ್ತಿ ಗಳಿಗಾಗಿ..
ಒಂದೊಂದೇ ಲೈನಿನ 25ಜನರನ್ನು ಒಳಗೆ ಬಿಡುತ್ತಿದ್ದರು. ದೇವಸ್ಥಾನ ಕಡಿದಾಗಿದೆ. ಗುಹೆ. ಮೆಟ್ಟಲಿಳಿದು ಪ್ರವೇಶಿಸಿಬೇಕು. ಕೇವಲ ದೀಪದ ಬೆಳಕು. ಪ್ರವೇಶಿಸಿದ ತಕ್ಷಣ ಕಾಮೇಶ್ವರ. ಕಾಮಾಖ್ಯ ಇರುವ ಮೂರ್ತಿ. ಕೆಳಗಿಳಿದು ಹೋದಾಗ ಅಲ್ಲಿ ದೇವಿಯ ಯೋನಿ ಇರುವ ಪವಿತ್ರ ಸ್ಥಳ. ಖಾಯಂ ನೀರು ಒಸರುತ್ತದೆ. ಬಗ್ಗಿ ನಮಸ್ಕರಿಸಬೇಕು. ಅದೇ ತೀರ್ಥ. ನಮಗಾಗಿ ನಿಯೋಜಿತಗೊಂಡ ಪಾoಡಾ ಅಲ್ಲಿ ನಮ್ಮಿಂದ ಪೂಜೆ ಮಾಡಿಸುತ್ತಾರೆ.
ಭಾರತೀಯ ಪರಂಪರೆಯಲ್ಲಿ ಹೆಣ್ಣನ್ನು ದೇವತೆ ಎಂದು ಪೂಜಿಸಿದರೂ ಆಕೆ ರಜಸ್ವಲೆ ಆದಾಗ ಅಪವಿತ್ರ ಎಂದು ಪರಿಗಣಿಸಿ ಪವಿತ್ರ ಕಾರ್ಯಗಳಿಂದ ಹೊರಗಿಡುತ್ತಾರೆ. ಆದರೆ ಇಲ್ಲಿ ದೇವಿ ಪ್ರತಿ ವರ್ಷ್ ಆಷಾಡ ಮಾಸದಲ್ಲಿ ಮೂರು ದಿನ ದೇವಿ ಋತುಮತಿ ಯಾಗುತ್ತಾಳೆ. ಇದು ಫಲವತ್ತತೆಯ ಸಂಕೇತ ಎಂದು ಪೂಜಿಸಲ್ಪಡುತ್ತಾಳೆ. ಆಗ ಮೂರು ದಿನ ದೇವಸ್ಥಾನ ಮುಚ್ಚಲಾಗುತ್ತದೆ. ಆಗ ಅಲ್ಲಿ ಒಸರುವ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ ಅಂತೆ. ದೇವಿಯ ಅಂಗದ ಮೇಲೆ ಬಿಳಿ ಬಟ್ಟೆ ಹೊದಿಸುತ್ತಾರೆ. ದೇವಸ್ಥಾನ ಮೂರು ದಿನಗಳ ಕಾಲ ಮುಚ್ಚಲಾಗುತ್ತದೆ. ಆಗ…..ಅಂಬು ಬಾಚಿ….. ಎನ್ನುವ ಉತ್ಸವ ಜರಗುತ್ತದೆ. ಮೂರೂ ದಿನ ಹಗಲು -ರಾತ್ರಿ ದೇವಸ್ಥಾನದ ಹೊರಗೆ ಭಜನೆ ನಡೆಯುತ್ತದೆ. ಲಕ್ಷಗಟ್ಟಳೆ ಜನ ಸೇರುತ್ತಾರೆ.
ಈ ಸಂಧರ್ಭದಲ್ಲಿ ದೇವಿಗೆ ಅಪಾರ ಶಕ್ತಿ. ಭಕ್ತರ ಕೋರಿಕೆಯೆಲ್ಲ ಈಡೇರುತ್ತದೆ ಎನ್ನುವ ಪ್ರತೀತಿ. ದೇವಿ ರಜಸ್ವಲೆ ಆದಾಗ ಅಲ್ಲಿ ಹರಿಯುತ್ತಿರುವ ಬ್ರಹ್ಮಪುತ್ರ ನದಿ ನೀರು ಕೂಡ ಕೆಂಪಾಗಿರುತ್ತದೆ ಅಂತೆ.
ನಾಲ್ಕನೇ ದಿನ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತದೆ. ಆಗ ದೇವಿಯ ಅಂಗದಮೇಲೆ ಹೊದಿ ಸಿದ ಬಿಳಿ ಬಟ್ಟೆ ಕೆಂಪಾಗಿರುತ್ತದೆ ಅಂತೆ. ದೇವಿಯನ್ನು ಮಾತೃ ಸ್ವರೂಪದಲ್ಲಿ ಪೂಜಿಸಿ ಧನ್ಯರಾಗುವ ಉತ್ಸವ. ದೇವಿಗೆ ಬಲಿ ಕೊಡುವ ಆಚರಣೆ ಕೂಡ ಇದೆ. ಕಾಮಾಖ್ಯ ದೇವಾಲಯ ಮಂತ್ರ -ತಂತ್ರಗಳಿಗೂ ಪ್ರಸಿದ್ಧಿ. ಸಾವಿರಾರು ಸಾಧುಗಳು, ಅಘೋರಿಗಳು ಮಾಟ -ಮಂತ್ರ ಕಾರ್ಯದಲ್ಲಿ ತೊಡಗಿರುತ್ತಾರೆ.
ತಾಯಿಯಾಗುವ ಹoಬಲವುಳ್ಳ ಮಹಿಳೆಯರು ವರ್ಷವಿಡೀ ದೇವಿಯನ್ನು ಸಂದರ್ಶಸಿ ಪೂಜಿಸುತ್ತಾರೆ. ದೇವಿ ಅವರ ಆಸೆ ನೇರವೆರಿಸುತ್ತಾಳೆ ಎನ್ನುವ ಅಚಲ ನoಬಿಕೆ. ಶ್ರದ್ಧೆ.
ಕಾಮಾಖ್ಯ ದೇವಾಲಯ ನೀಲಾ ಚಲ ಬೆಟ್ಟದ ಮೇಲಿರುವ ಪುರಾತನ, ಮಹಾನ ಶಕ್ತಿಪೀಠ. ನರಕಾಸುರ ಎಂಬ ರಾಕ್ಷಸ ಕಾಮಾ ಖ್ಯ ದೇವಿಯನ್ನು ಪ್ರೀತಿಸಿ ಮದುವೆಯಾಗಲು ಪೀಡಿಸುತ್ತಾನೆ. ಆಗ ದೇವಿ ನೀಲಾಚಲ ಬೆಟ್ಟಕ್ಕೆ ಮೆಟ್ಟಿಲು ಬೆಳಗಾಗುವದರೊಳಗಾಗಿ ನಿರ್ಮಿಸು ನಂತರ ಮದುವೆಯೋಗೋಣ ಎನ್ನುತ್ತಾಳೆ. ಅದರಂತೆ ನರಕಾಸುರ ಮೆಟ್ಟಿಲು ನಿರ್ಮಿಸುತ್ತಾನೆ. ಮೇಲೆ ಬಂದಾಗ ದೇವಿ ಕೋಳಿಯೊಂದು ಕೂಗುವಂತೆ ಮಾಡುತ್ತಾಳೆ. ಆಗ ರಾಕ್ಷಸ ಬೆಳಗಾಯಿತೆoದು ಬಿಟ್ಟು ಹೋಗುತ್ತಾನೆ. ಈಗಲೂ ಅಲ್ಲಿ ಅಪೂರ್ಣ ಮೆಟ್ಟಲುಗಳಿವೆ.
ಭಾರತದಲ್ಲಿ ವಿಶಿಷ್ಟ ಪರಂಪರೆಯುಳ್ಳ 51ಶಕ್ತಿ ಪೀಠಗಳಿವೆ. ಪ್ರತಿಯೊಂದೂ ಪ್ರದೇಶ ತನ್ನದೇ ಆದ ವಿಶಿಷ್ಟ ಇತಿಹಾಸ. ಶಕ್ತಿ ಹೊಂದಿದೆ.ದೇವಿ ಕೃಪೆ ಎಲ್ಲರಿಗೂ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
✍️ಶ್ರೀಮತಿ. ವಿದ್ಯಾ. ಹುಂಡೇಕರ.