ಕೈ ಬರಹ ವ್ಯಕ್ತಿತ್ವ ತಿಳಿಸುತ್ತದೆ
e-ಸುದ್ದಿ ಗಂಗಾವತಿ
ಕೈ ಬರಹ ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂದು ತಾಲೂಕಿನ ಕೇಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಘವೇಂದ್ರ ದಂಡಿನ್ ಅಭಿಪ್ರಾಯಪಟ್ಟರು.
ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹ್ಯಾಂಡ್ ರೈಟಿಂಗ್ ಕಾಂಪಿಟಿಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈಬರಹ ಸ್ಫುಟವಾಗಿ, ಸುಂದರವಾಗಿ, ನಿಖರವಾಗಿ ಇರಬೇಕು. ವಿದ್ಯಾರ್ಥಿ ದೆಸೆಯಿಂಲೇ ಉತ್ತಮ ಕೈಬರಹವನ್ನು ರೂಢಿಸಿಕೊಳ್ಳಬೇಕು. ಸ್ಟುಡೆಂಟ್ ಲೈಫ್ ಮುಗಿದ ಮೇಲೆ ಬರವಣಿಗೆ ಸುಧಾರಿಸಿಕೊಳ್ಳುವುದು ಕಷ್ಟ ಎಂದರು.
ಕೇವಲ ಸ್ಪರ್ಧೆಗಾಗಿ ಅಕ್ಷರಗಳನ್ನು ದುಂಡಾಗಿ ಬರೆಯುವ ಮಾನಸಿಕ ಸ್ಥಿತಿಯಿಂದ ಹೊರಬಂದು, ನಿತ್ಯದ ಹೋಮ್‌ವರ್ಕ್, ಕ್ಲಾಸ್ ವರ್ಕ್, ಫೇರ್ ಬರೆಯುವಾಗಲೂ ಉತ್ತಮ ಹ್ಯಾಂಡ್ ರೈಟಿಂಗ್ ಕಾಪಾಡಿಕೊಳ್ಳಬೇಕು. ಈ ಜಾಗೃತಿ ಮೂಡಿಸಲೆಂದೇ ನಮ್ಮ ಶಾಲೆಯಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ಶಿಕ್ಷಕಿಯರಾದ ಹಸೀನಾ ಮುಲ್ಲಾ, ಅಮೃತಾ ಕೋರಿ, ಶಿಕ್ಷಕರಾದ ಬೆಟ್ಟದಗೌಡ, ಶಿವರಾಜಕುಮಾರ್, ಬಿ.ಮಂಜುನಾಥ ಇದ್ದರು. ಶಿಕ್ಷಕ ಅಭಿಷೇಕ ಆಚಾರ್ಯ ಸಂಯೋಜನೆ ಮಾಡಿದರು.