ಬಾಡದಿರಲಿ ಚಿಗುರು
ಬೀಜ ಮೊಳೆತು
ಸಸಿಯ ಚಿಗುರು
ತಳಿರಿನ ಸಂಭ್ರಮ
ಬರಡು ನೆಲದ
ಹಸಿರು ಉಸಿರು
ಪ್ರೀತಿಯ ಬಂಧನ
ಹೂವು ಮಾವಿನ
ಕೊರಳ ಕೊಳಲಿನ
ಇಂಪು ಗಾಯನ
ಬಾನು ಭೂಮಿಯ
ಬೆಸೆವ ಬಂಧನ
ಒಲವ ತೋರಣ
ಎದೆಯ ಮಿಡಿತ
ಸ್ನೇಹ ಚಿಗುರು
ನಗಲಿ ಅನುದಿನ
ಜೀವ ಭಾವ
ಬೆರೆತ ಪರಿಮಳ
ಬುಗ್ಗೆ ಪ್ರತಿಕ್ಷಣ
ನೆಲದ ಚಿಗುರು
ಹಬ್ಬಿ ಹಾಡಲಿ
ತಬ್ಬಿ ಮುಗಿಲನು
ದೂರು ದುಮ್ಮಾನ
ಅಳಿದು ಅರಳಲಿ
ಚಿಗುರ ಕನಸದು
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ