ಮಕ್ಕಳನ್ನು ನಮ್ಮ ದೇಶದ ಅಸ್ತಿಯನ್ನಾಗಿಸುವಲ್ಲಿ ನಮ್ಮ ಪ್ರಯತ್ನ ಸಾಗಲಿ – ಶ್ರೀ ಬಸವರಾಜ ಪಾಟೀಲ್ ಸೇಡಮ್
e-ಸುದ್ದಿ ಕಲಬುರ್ಗಿ
ವಿದ್ಯಾಭಾರತಿ ಕರ್ನಾಟಕ ಕಲಬುರ್ಗಿ ಜಿಲ್ಲೆ ಆಯೋಜಿತ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂರಕ್ಷಕರಾದ ಬಸವರಾಜ್ ಪಾಟೀಲ್ ಸೇಡಮ್ ಮಾತನಾಡುತ್ತಾ,
ಜೀವನಕ್ಕೆ ಉತ್ತಮ ಮಾರ್ಗದರ್ಶಿಯಾದ ಉಪನಿಷತ್ತಿನ ಪಾಠಗಳು ಕೇಳುವ ಹವ್ಯಾಸ ಬೆಳೆಸಿಕೊಳ್ಳುವವರು ನಾವಾಗಬೇಕು, ಜೊತೆಗೆ ನಮ್ಮ ಮಕ್ಕಳನ್ನು ದೇಶದ ಒಳ್ಳೆಯ ಆಸ್ತಿಯನ್ನಾಗಿಸಬೇಕಾದರೆ ಉತ್ತಮ ಸಾಹಿತ್ಯ ಓದುವ ಶಿಕ್ಷಕರು ನಾವಾಗಬೇಕೆಂದರು.
ನಮ್ಮ ಮಕ್ಕಳು ಉತ್ತಮ ಸಾಹಿತ್ಯ ಖರೀದಿಸುವ ಮತ್ತು ಓದುವ ಪರಂಪರೆ ಬೆಳೆಸುವ ಪ್ರಯತ್ನ ನಮ್ಮದಾಗಲಿ ಎಂದರು.
ಶಿಕ್ಷಕರಾದವರು ಹಠಮಾರಿತನ, ಜಿದ್ದು, ಅಹಂಕಾರಗಳನ್ನು ಬಿಟ್ಟು ಮೌನ, ತಾಳ್ಮೆ, ಸಹನೆಗಳನ್ನು ಬೆಳೆಸಿಕೊಂಡು ಶಿಕ್ಷಣ ವ್ಯವಸ್ಥೆಗೆ ಪೂರಕವಾಗಬೇಕೆಂದರು.
ಕೇವಲ ಅಂಕಗಳಿಗೆ ಮಾತ್ರ ಆದ್ಯತೆ ಕೊಡದೆ, ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಮುಕ್ತ ಅವಕಾಶ ನೀಡಿ ದೊಡ್ಡ ಕನಸುನ್ನು ಹೊಂದುವಂತೆ ಮಾರ್ಗದರ್ಶನ ಮಾಡಬೇಕೆಂದರು.
ಮಿತಿಮೀರಿದ ಕನಸುಗಳು ಕೆಲವೊಮ್ಮೆ ದುರಂತಕ್ಕೆ ತಳ್ಳುತ್ತವೆ. ಸಾರ್ವಕಾಲಿಕ ಸತ್ಯದ ಮೇಲೆ ನಿಂತಿರುವ ಕೆಲಸಕ್ಕೆ ನಮ್ಮ ಮಕ್ಕಳನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ಶಾಲೆ ಮತ್ತು ಮನೆಯಾಗಿವೆ ಎಂದರು