ಅವಳಿಗೊಂದು ಓಲೆ💐

💐ಅವಳಿಗೊಂದು ಓಲೆ💐

ನೀನು
ನನ್ನೆದೆಯೊಳಗಿನ
ಮೌನ
ಮಾತಲ್ಲ
ಆ ಮೌನದ ತುಂಬ
ಹೃದಯಗಳ
ಪಿಸು ಮಾತು…….

ನೀನು
ನನ್ನೆದೆಯೊಳಗಿನ ಧ್ಯಾನ
ನೆನಪಲ್ಲ
ಆ ಧ್ಯಾನದ ತುಂಬ
ನಿನ್ನದೇ ನೆನಪು……

ನೀನು
ನನ್ನೆದಯೊಳಗಿನ ಭಾವ
ಸ್ವರವಲ್ಲ
ಆ ಭಾವದ ತುಂಬ
ನಿನ್ನದೇ ಸರಿಗಮ ಸ್ವರ….

ನೀನು
ನನ್ನೆದೆಯೊಳಗಿನ ಜೀವ
ಸ್ಪೂರ್ತಿಯಲ್ಲ
ಆ ಜೀವದ ಪ್ರತಿ ಉಸಿರಿಗೂ
ನೀನೇ ಸ್ಪೂರ್ತಿ…..

 

 

 

 

 

 

 

 

 

✍️ ಆದಪ್ಪ ಹೆಂಬಾ ಮಸ್ಕಿ

Don`t copy text!