ಸ್ವಯಂ ಸಂಜೀವಿನಿ

ನಾ ಓದಿದ ಪುಸ್ತಕ

 

 

 

 

 

 

 

 

 

 

 

 

 

ಹನುಮಂತ ಮಳಲಿ ಅವರ

ಸ್ವಯಂ ಸಂಜೀವಿನಿ”

ಪ್ರಕಾಶಕರು- ಸ್ವಯಂ ಸಂಜೀವಿನಿ ಪ್ರಕಾಶನ
ಸಾ.ಮಳಲಿ- 582206
6ನೇ ಮುದ್ರಣ-2023
ಪುಟಗಳು -30+ 96
ಬೆಲೆ-150

ಸ್ವಯಂ ಸಂಜೀವಿನಿ ಬರಿ ಪುಸ್ತಕವಲ್ಲ. ಸದಾ ನಮ್ಮೊಡನೆ ಇರುವ ಒಬ್ಬ ಆಪ್ತ ವೈದ್ಯ. ಹೆಸರೇ ಸೂಚಿಸುವಂತೆ ನಮಗೆ ನಾವೆ ವೈದ್ಯರಾಗುವ ಬಗೆಯನ್ನು ತಿಳಿಸುವ ಉತ್ತಮ ಗ್ರಂಥ.
ನಮ್ಮ ಆಹಾರವೇ ಔಷಧಿ ಎಂಬುದನ್ನು ತಿಳಿಸುತ್ತ ಯಾವುದನ್ನು ತಿನ್ನಬೇಕು. ಯಾವುದನ್ನು ತಿನ್ನಬಾರದು ಎಂಬುದನ್ನು ಹೇಳುವ ಅತ್ಯೂತ್ತಮ ಪುಸ್ತಕ.
ನಮ್ಮ ಅಡುಗೆ ಮನೆಯಲ್ಲಿ ಆಹಾರ ತಯಾರಿಸಲು ಬಳಸವು ವಸ್ತುಗಳನ್ನೆ ಔಷಧವನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ಈ ಗ್ರಂಥ ನಮಗೆ ಕಲಿಸುತ್ತದೆ.
ವಿಶೇಷವಾಗಿ ನಮ್ಮ ದಿನಚರಿ ಹೇಗಿರಬೇಕು. ನಮ್ಮ ಕುಟುಂಬವನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು. ನಿಸರ್ಗದ ಜತೆ ನಮ್ಮ ಹೊಂದಾಣಿಕೆ ಹೇಗಿರಬೇಕು ಎಂಬುದನ್ನು

ಸ -ವಿವರವಾಗಿ ಲೇಖಕರೂ ಸ್ವತ್ಹ ಪಾರಂಪರಿಕ ವೈದ್ಯರಾಗಿರುವ ಹನುಮಂತ ಮಳಲಿಯವರು ಚನ್ನಾಗಿ ತಿಳಿಸಿದ್ದಾರೆ.
ತಲೆನೋವು, ಕಿವಿ, ಮೂಗು, ಕಣ್ಣು, ಮೆದುಳು, ಗಂಟಲು ಹಾಗೂ ಧ್ವನಿ ಸಮಸ್ಯೆ, ಹಲ್ಲು, ಕೆಮ್ಮು, ಜ್ವರ, ಹೊಟ್ಟೆನೋವು, ಸಕ್ಕರೆ ಕಾಯಿಲೆ, ಸೊಂಟ ನೋವು, ಬೆನ್ನು ನೋವು, ಸಂದುಗಳ ಸೆಳೆತ, ಮೂಲವ್ಯಾಧಿ, ಅಜೀರ್ಣ ಹೀಗೆ ನೂರಾರು ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರ ಮಾಡಿಕೊಳ್ಳುವ ಬಗೆಯ ಕುರಿತು ಚನ್ನಾಗಿ ವಿವರಿಸಿದ್ದಾರೆ.
ಈ ಪುಸ್ತಕ ಪ್ರತಿಯೊಬ್ಬರ ಮನೆಯಲ್ಲಿದ್ದರೆ ಒಬ್ಬ ವೈದ್ಯ ನಿಮ್ಮ ಮನೆಯಲ್ಲಿದ್ದಂತೆ.

ವೀರೇಶ ಸೌದ್ರಿ, ಮಸ್ಕಿ

Don`t copy text!