ಅಪರ್ಣಾಗೊಂದು ಅರ್ಪಣೆ
ಕನ್ನಡಕೆ ಹೆಸರಾಗಿ
ಕನ್ನಡವೇ ಉಸಿರಾಗಿ
ಕನ್ನಡತಿ ಎಂಬ
ಹೆಮ್ಮೆಯ ಮಗಳಿವಳು
ಕನ್ನಡಕೆ ಗರಿಯ ಇಟ್ಟವಳು.
ಮೃದು ಮಧುರ ಮಾತಿನಲಿ
ನಗುಮೊಗದಿ ಮಿಡಿಯುತಲಿ
ಅರಳು ಹುರಿದಂತೆ
ನುಡಿವ ನವಿಲಿಗೆ
ದೇವನೆ ಕಂಡು ಮರುಳಾದ.
ಚೆಂಬೆಳಕ ಹಾದಿಯಲಿ
ಹೊಂಬೆಳಕು ನೀನಾಗಿ
ತುಂಬೆ ಹೂವಂತೆ
ಘಮಘಮಿಸಿ ನಡೆದೆ
ಕಂಗಳ ನೋಟ ನಲುಗಿತು.
ಮುದ್ದು ಮುಖದ ಅಪರ್ಣಾ
ನಿನಗಿದು ನಮದೊಂದು
ನುಡಿನಮನದ ಅರ್ಪಣೆ.
– ಸವಿತಾ ಮಾಟೂರ.