ಜು.೨೪ ರಂದು ಬಣಜಿಗ ಸಮಜದ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ
e- ಸುದ್ದಿ ಮಸ್ಕಿ
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಮಸ್ಕಿ ತಾಲ್ಲೂಕು ಘಟಕದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ನೂತನ ಪದಾಧಿಕಾಗಳ ಪದಗ್ರಹಣ ಸಮಾರಂಭ ಜು.೨೪ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀಭ್ರಮರಾಂಬ ದೇವಸ್ಥಾನದ ಸಭಾ ಭವನದಲ್ಲಿ ಜರುಗಲಿದೆ ಎಂದು ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟಿಲ ಮುಖ್ಯ ಅತಿಥಿಗಳಾಗಿ ಆಗಮಮಿಸಲಿದ್ದಾರೆ.
ರಾಜ್ಯ ಅತ್ಯೂತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಶರಣ ಸಾಹಿತ್ಯ ಪರಿಷತ್ತ ತಾಲ್ಲೂಕು ಅಧ್ಯಕ್ಷ , ನಿವೃತ್ತ ಮುಖ್ಯೋಪಾಧ್ಯಯ ಎ.ಕೆ.ಬಳಿಗೇರ ಅವರು ಸಮಾಜ ಬೆಳೆದು ಬಂದ ಬಗೆಯ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೀರೇಶ ಸೌದ್ರಿ ಮತ್ತು ಗೌರವ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ನಾಗರಾಜ ಚೌಶಟ್ಟಿ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.೮೦ ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸಮಾಜದ ಹಿರಿಯ ನಾಗರಿಕರನ್ನು, ನಿವೃತ್ತ ನೌಕರರನ್ನು, ವೈದ್ಯರನ್ನು ಸತ್ಕಕರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರಕ್ಕಾಗಿ ವಿದ್ಯಾರ್ಥಿಗಳ ಹೆಸರುಗಳನ್ನು ಪಂಪಣ್ಣ ನಂದಾ, ಶಿವರಾಜ ಇತ್ಲಿ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ ಅವರಲ್ಲಿ ಹೆಸರು ನೊಂದಾಯಿಸುವಂತೆ ಮನವಿ ಮಾಡಿದ್ದಾರೆ.
ತಾಲ್ಲೂಕು ಘಟಕದ ಕಾರ್ಯದರ್ಶಿ ಅಮರೇಶ ಬ್ಯಾಳಿ, ನಗರ ಘಟಕದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಇತ್ಲಿ, ನಗರ ಘಟಕದ ಕಾರ್ಯದರ್ಶಿ ಬಸವಲಿಂಗ ಶಟ್ಟಿ, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಸುಗಣ್ಣ ಬಾಳೆಕಾಯಿ ಮತ್ತು ಶಿವರಾಜ ಇತ್ಲಿ ಇದ್ದರು.