ಇದು ಒಮ್ಮೆ ದಾಟಿಸು ಹೊಳೆಯ ಅಂಬಿಗ

ಇದು ಒಮ್ಮೆ ದಾಟಿಸು
ಹೊಳೆಯ ಅಂಬಿಗ

ಬೆತ್ತಲಾಗುತ್ತಿದೆ ಮಡಿವಾಳ
ತೊಳೆದು ಕೊಡು ಹೊಸ ಬಟ್ಟೆ
ಧರಿಸಲಿ ಮೈ ಉಡುಗೆ
ಬಂದು ಹೋಗುವ ನಡುವೆ
ಇಲ್ಲದ ಈ ತೊಡಿಗೆ
ಹೊಲಿದು ಕೊಡು ಹೊಸ ಬಟ್ಟೆ
ಜಾತಿ ಗೀತಿ ಹೊಸ ಬಾಳು
ಹೊಸ ನೀತಿ
ಜಾರುತ್ತಿದೆ ಮೈ ಮನ
ಆಂತರಿಕ ಬಾಹ್ಯ
ಯವ್ವನದಿ ಉದುರುತ್ತಿವೆ ಹಲ್ಲು
ಜೋತು ಬಿದ್ದ ಗಲ್ಲ
ಗಲ್ಲಕ್ಕೆರಡು ಕಿಂಡಿ
ಮುಚ್ಚಿ ಬಿಡು ಬಡಿಗ
ಜಾರುತ್ತಿವೆ ಹೊತ್ತಿಸಿದ
ಕರಿ ಹಂಚು ಹೊತ್ತು
ಮಾಳಿಗೆಗೆ ಮಳೆರಾಯ
ಸೋರುತ್ತಿವೆ ತನುವ
ಸುಡುವ ಬೇಸಿಗೆಗೆ ಎರಡು
ತೊಗಲು ಪಾದುಕೆ
ಹೊಲಿದು ಕೊಡು ಹರಳಯ್ಯ
ಕೊಳೆತು ನಾರುತ್ತಿವೆ
ಸತ್ತ ಹಸು ಕೋಣಗಳು
ಎಳೆದು ತನ್ನಿ ಮಾದರ ಚೆನ್ನಯ್ಯ
ಸ್ವಚ್ಛವಾಗುವುದಿ ಗುಡಿಯು
ಸೋತು ಸುಣ್ಣವಾಗಿದೆ ತನು
ಕುಂಬಾರ
ತಡಮಾಡದೇ ತಂದು ಬಿಡು
ಮಡಿಕೆ
ಬಿಗಿದ ಕನ್ನಿಗೆ ಜೋಡೆತ್ತು
ಹೊಸೆದು ಬಿಡು ಹಗ್ಗ ಮಿನಿ
ಬಾರುಕೋಲ ಡೋಹರ
ಹದಮಾಡಿದ ಹಸಿ ಚರ್ಮ
ಮರೆಯ ಬೇಡ ಮರುಳೆ
ಕಾಯ ಅಲ್ಲವಿದು ನಿನ್ನದು
ಸೆಳೆದು ಹೋಗುವ ತೆರೆ ಯ
ಮೇಲ್ಗಡೆ ಅಂಬಿಗ
ದಾಟಿಸೋಗು ಇದು ಒಮ್ಮೆ
ಹೊಳೆಯ

 

ಡಾ ಸಾವಿತ್ರಿ ಕಮಲಾಪೂರ

Don`t copy text!