ಮೂಕ ಪ್ರೀತಿಗೆ ಮಾತು ಕಲಿಸು

ಗಝಲ್

ಮೂಕ ಪ್ರೀತಿಗೆ ಮಾತು ಕಲಿಸು

ನೋಟ ಬೆರೆಯಲು ಎದೆಗೆ ಹತ್ತಿರ ಬಂದೆಯಲ್ಲ ನೀನು
ಮಾಟ ಮಾಡಿ ಒಲವ ಗುಡಿಯಲಿ ನಿಂದೆಯಲ್ಲ ನೀನು

ಪ್ರಣಯ ಪೂಜೆಗೆ ಮೌನವ ಮಂತ್ರವಾಗಿಸುತ ಉಲಿದೆ
ಮೂಕ ಪ್ರೀತಿಗೆ ಮಾತು ಕಲಿಸುತ ನಲಿದೆಯಲ್ಲ ನೀನು

ಮಂದಹಾಸದಿ ಮೊಗವರಳಿಸಿ ತುಂಟ ನಗೆಯ ಬೀರಿದೆ
ಶೋಕ ನೀಗಿಸಿ ಮನಕೆ ಸಾಂತ್ವನ ನೀಡಿದೆಯಲ್ಲ ನೀನು

ಮುದದಿ ನುಡಿಯಲು ಬಿರಿದಿವೆ ಮಮತೆಯ ಮಲ್ಲಿಗೆ
ಎದೆಗೂಡಲಿ ಅನುರಾಗ ದೀಪ ಬೆಳಗಿದೆಯಲ್ಲ ನೀನು

ಉಷೆಯ ಬಾಳಲಿ ಭಾವ ಬೆಸುಗೆಯಾಗಿ ಬಂದೆ ಇಂದು
ಅಭಯ ನೀಡುತ ಪ್ರೀತಿ ತೋರುತ ನಡೆದೆಯಲ್ಲ ನೀನು

_ಉಷಾಜ್ಯೋತಿ, ಮಾನ್ವಿ

Don`t copy text!