ಸ್ಮರಣೆ
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ
ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರಾದ ಪದ್ಮಶ್ರೀ ಪುರಸ್ಕೃತ ಉಡುಪಿ ಜಿಲ್ಲೆಯ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು ವೈಚಾರಿಕ ನಿಲುವಿನ ಪಂಡಿತರು.
ತಮ್ಮ ಸ್ವಗೃಹ ಅಂಬಲಪಾಡಿಯಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ನಿಧನರಾಗಿದ್ದಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು.
ಬನ್ನಂಜೆ ಗೋವಿಂದಾಚಾರ್ಯ ಅವರು ಹಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಗೋವಿಂದಾಚಾರ್ಯ ಅವರಿಗೆ 4 ಹೆಣ್ಣು ಮಕ್ಕಳು, ಇಬ್ಬರು ಪುತ್ರರಿದ್ದು, ಓರ್ವ ಪುತ್ರ ಇತ್ತೀಚಿಗಷ್ಟೇ ವಿಧವಶರಾಗಿದ್ದರು.
ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ ಬನ್ನಂಜೆ ಗೋವಿಂದಾಚಾರ್ಯ ಅವರು, ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದರು. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಇವರು ವೈದಿಕ ವಿದ್ಯಾರ್ಥಿವೇತನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು, ಈ ವಿಷಯದ ಕುರಿತಾಗಿ ಹಲವಾರು ವ್ಯಾಖ್ಯಾನಗಳು, ಅನುವಾದಗಳು ಮತ್ತು ಮೂಲ ಕೃತಿಗಳನ್ನು ರಚಿಸಿದ್ದಾರೆ. ಭಾರತೀಯ ತತ್ವ ಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನ ನಿಡುವ ಮೂಲಕ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದರು.
ಕೃತಿರಚನೆ:
ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳೀದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು.
ಟಿಪ್ಪಣಿಗಳು:
ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ಆನ೦ದಮಾಲಾ, ತ್ರಿವಿಕ್ರಮ ಪ೦ಡಿತರ ವಾಯುಸ್ತುತಿ, ವಿಷ್ಣುಸ್ತುತಿ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.
ಶ್ರೀಯುತರು ನೇರ ನಡೆ ನುಡಿಯ ಶ್ರೇಷ್ಠ ಜ್ಞಾನಿ. ವೈಚಾರಿಕ ಚಿಂತಕ, ಸರಳ ಸಹೃದಯಿಯಾಗಿದ್ದರು. ಅಪಾರ ವಿದ್ವತ್ವಿನ ಜ್ಞಾನ ಸೂರ್ಯರಾಗಿದ್ದರು. ಆಧ್ಯಾತ್ಮಿಕ ವಿಷಯಗಳನ್ನು ವೈಜ್ಞಾನಿಕ ಚಿಂತನೆಗಳಿಗೆ ಸಮೀಕರಿಸಿ ತಿಳಿ ಹೇಳುವ ಕೌಶಲ್ಯ ಕರಗತವಾಗಿತ್ತು.
ಶ್ರೇಷ್ಠ ವಿದ್ವಾಂಸರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಜ್ಞಾನ ಸಂಪತ್ತಿನ ಮೂಲಕ ಕೊಟ್ಡ ಕೊಡುಗೆ ಶಾಶ್ವತವಾಗಿದೆ.
ಶ್ರದ್ಧಾಂಜಲಿ
ಮಸ್ಕಿ ಪಟ್ಟಣದ ಬ್ರಾಹ್ಮಣ ಸಮಾಜದ ಮುಖಂಡರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಹಾಗೂ ಸಾಹಿತಿಗಳು, ಚಿಂತಕರು ಸಂತಾಪ ಸೂಚಿಸಿದ್ದಾರೆ.
——_———-
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏