e-ಸುದ್ದಿ, ಮಸ್ಕಿ
ಸಮಾಜದಲ್ಲಿ ಅಪರಾಧಗಳನ್ನು ನಡೆಯದಂತೆ ತಡೆಗಟ್ಟುವಲ್ಲಿ ಯುವಕರು ಮುಂದಾಗಬೇಕು. ಮತ್ತು ಅಪರಾಧ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಪಿಎಸ್‍ಐ ಸಣ್ಣ ಈರೇಶ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಸ್ಕಿ ಪೊಲೀಸ್ ಠಾಣೆ ಮತ್ತು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಭಾನುವಾರ ಜಂಟಿಯಾಗಿ ಆಯೋಜಿಸಿದ್ದ ಅಪರಾಧ ತಡೆ ಮಾಸಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಟುಂಬ ಕಲಹ, ಹದಿಹರೆಯದ ಯುವಕ ಯುವತಿಯರು ತಪ್ಪು ದಾರಿ ತುಳಿಯುತ್ತಿರುವದು, ಅಪರಿಚಿತರೊಂದಿಗೆ ಮೊಬೈಲ ಚಾಟ್ ಮಾಡುವದು, ಬಂಗಾರ ಆಭರಣಗಳ ಪ್ರದರ್ಶನ , ಹಣ ಅಪಹರಿಸುವದು, ಹೀಗೆ ನಾನ ರೀತಿಯಲ್ಲಿ ಅಪರಾಧ ಪ್ರಕರಣಗಳು ಜರುಗುತ್ತವೆ. ಅಪರಾಧ ನಡೆಯದಂತೆ ಮುನ್ನಚ್ಚರಿಕೆ ವಹಿಸುವಂತೆ ವಿವರಿಸಿದರು.
ಉಪನ್ಯಾಸಕ ಮಹಾಂತೇಶ ಮಸ್ಕಿ ಮಾತನಾಡಿ ಕರೊನಾ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ವಿಮುಖರಾಗಿದ್ದಾರೆ. ರಾಮಣ್ಣ ಹಂಪರಗುಂದಿಯವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೊಬೈಲ್ ಮೂಲಕ ಅನೇಕ ರೀತಿಯ ಚಟುವಟಿಕೆ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳನ್ನು ತಯಾರು ಮಾಡಿ ಡಿಜಿಟಲ್ ಹಿರೋಗಳನ್ನಾಗಿ ಮಾಡುತ್ತಿದ್ದಾರೆ ಎಂದರು.
ಬಳ್ಳಾರಿಯ ಆದಾಯ ತೆರಿಗೆ ಅಧಿಕಾರಿ ಮಾಳಿಂಗರಾಯ ಮಾತನಾಡಿ ಯುವಕರು ದೊಡ್ಡ ದೊಡ್ಡ ಗುರಿಯೊಂದಿಗೆ ಸಾಧನೆ ಮಾಡುವ ಮೂಲಕ ಯಶಸ್ವಿ ಜೀವನ ರೂಪಿಸಿಕೊಳ್ಳಬೇಕೆಂದು ಸ್ಪಧಾತ್ಮಕ ಪರೀಕ್ಷೆಗಳ ಕುರಿತು ವಿವರಿಸಿದರು.
ವರ್ತಕ ಲಕ್ಷ್ಮೀನಾರಯಣ ಶಟ್ಟಿ, ರಾಮಣ್ಣ ಹಂಪರಗುಂದಿ, ಬಸವರಾಜ ಮಾತನಾಡಿದರು, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.