ಕನ್ನಡ ಶಾಲೆಗಳ ಬಲವರ್ಧನೆಗೆ ನಿಂತ ಮಹಾ ದಾನಿ ವಿಪ್ರೋ ಮುಖ್ಯಸ್ಥ ಶ್ರೀ ಅಜೀಂ ಪ್ರೇಮ್‌ಜಿ

ಕನ್ನಡ ಶಾಲೆಗಳ ಬಲವರ್ಧನೆಗೆ ನಿಂತ ಮಹಾ ದಾನಿ ವಿಪ್ರೋ ಮುಖ್ಯಸ್ಥ ಶ್ರೀ ಅಜೀಂ ಪ್ರೇಮ್‌ಜಿ.

 

 

 

 

 

 

 

 

 

ಅಜೀಂ ಪ್ರೇಮ್ಂಜಿ ಯವರ ವಿಪ್ರೋ ಪೌಂಡೇಶನ್ ನಿಂದ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಸುಮಾರು 56 ಲಕ್ಷ ಮಕ್ಕಳಿಗೆ ಮುಂದಿನ 3 ವರ್ಷಗಳವರೆಗೆ 1500 ಕೋಟಿ ಮೌಲ್ಯದಷ್ಟು ಮೊಟ್ಟೆ, ಮತ್ತಿತರ ಪೌಷ್ಟಿಕ ಆಹಾರ ಪದಾರ್ಥಗಳಾದ ಶೆಂಗಾ ಚಕ್ಕಿ ಇಲ್ಲವೆ ರಾಗಿ ಮಾಲ್ಟ್ ನಂತಹ ಆಹಾರ ಪದಾರ್ಥಗಳು ದೊರಯಲಿವೆ.

ಇದರ ಪರಿಣಾಮವಾಗಿ ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗಬಹುದು, ಹಾಜರಾತಿಯು ಹೆಚ್ಚಬಹುದು, ಫಲಿತಾಂಶವು ಕೂಡಾ ಹೆಚ್ಚಾಗುವ ನಿರಿಕ್ಷೆಗಳಿವೆ‌.  ಇವರ ಈ ಕೆಲಸ ಇನ್ನಷ್ಟು ಉದ್ಯಮಿಗಳು ಸರ್ಕಾರಿ ಶಾಲೆಗಳಿಗೆ ನೆರವು ನೀಡಲು ಸ್ಫೂರ್ತಿಯಾಗಬಹುದು. ಈ ಮೂಲಕ ದೇಶದ ಶೈಕ್ಷಣಿಕ ರಂಗದ ಏಳಿಗೆಗೂ ಬಡವರ ಮಕ್ಕಳು ಶೈಕ್ಷಣಿಕ ಬೆಳವಣಿಗೆಯೊಂದಿಗೆ ದೈಹಿಕ ಸದೃಡತೆಗೂ ಸಹಕಾರಿಯಾಗುವುದು.

ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶ್ರೀ ಮಂತರ ಸಂಖ್ಯೆ ದೊಡ್ಡದಾಗಿದೆಯೇ ಇದೆ . ಆದರೆ ಶ್ರೀ ಮಂತ ದಾನಿಗಳ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ.ಅಂತವರ ಸಾಲಿನಲ್ಲಿ ಇನ್ಫೋಸಿಸ್ ನ ಶ್ರೀಮತಿ ಸುಧಾ ನಾರಾಯಣ ಮೂರ್ತಿ, ಟಾಟಾ ಕಂಪೆನಿಯ ರತನ್ ಟಾಟಾ ಅವರಂತೆ ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ಂಜಿ ಯವರ ಕೂಡಾ ಒಬ್ಬರು.

ದೇಶದ ದೊಡ್ಡ ದಾನಿಗಳ ಸಾಲಿನಲ್ಲಿ ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ಂಜಿ ಯವರು ಒಬ್ಬ ಮಹಾದಾನಿ ಎಂದೇ
ಕರೆಯಬಹುದು. ಇಂತಹ ಮಹಾನ್ ಚೇತನರ ಜನ್ಮದಿನ ಇಂದು ಜುಲೈ 24 . ಮೂಲತಃ ಮುಂಬೈನವರಾದ ಇವರು ಜುಲೈ 24 – 1945 ರಲ್ಲಿ ಜನಿಸಿದ್ದು. ಕನ್ನಡಿಗರ ಮೇಲಿನ ಪ್ರೀತಿ ನಿಜಕ್ಕೂ ಅಗಾಧ. ಹಾಗಾಗಿ ಪ್ರತಿಯೊಬ್ಬರೂ ಕೂಡಾ ಇವರನ್ನು ಸ್ಮರಿಸಬೇಕು ,ಇವರ ಸರ್ಕಾರಿ ಶಾಲೆಗಳ ಮೇಲಿನ ಪ್ರೀತಿ ನಿಜಕ್ಕೂ ಶ್ಲಾಘನೀಯವಾದದು. ಅಜೀಂ ಪ್ರೇಮ್ಂಜಿ ಯವರ ಕುಟುಂಬ ವರ್ಗಕ್ಕೆ ಭಗವಂತ ಉತ್ತಮ ಆರೋಗ್ಯ, ಆಯುಷ್ಯ, ಸಂಪತ್ತು ಕರುಣಿಸಲಿ ಎಂದು ಹಾರೈಸುತ್ತಾ ,ಇಂತಹ ದಾಳಿಗಳ ಸಂಖ್ಯೆ ಇನ್ನಷ್ಟು ಇಮ್ಮಡಿಯಾಗಲಿ ಎಂದು ಆಶಿಸೋಣ.

ವೀರೇಶ ಅಂಗಡಿ, ಗೌಡುರು

Don`t copy text!