ಬಣಜಿಗ ಸಮಾಜ ರಾಜ್ಯಕ್ಕೆ 7 ಸಿಎಂಗಳನ್ನು ಕೊಟ್ಟಿದೆ
7 – ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
e-ಸುದ್ದಿ ಮಸ್ಕಿ
ಕರ್ನಾಟಕ ರಾಜ್ಯಕ್ಕೆ ಬಣಜಿಗ ಸಮಾಜ ರಾಜ್ಯಕ್ಕೆ 7 ಜನ
ದಕ್ಷ ಮುಖ್ಯ ಮಂತ್ರಿಗಳನ್ನು ಕೊಟ್ಟಿದೆ ಎಂದು ಮಾಜಿ
ಶಾಸಕ ಪ್ರತಾಪಗೌಡ ಪಾಟೀಲ್ ತಿಳಿಸಿದರು.
ಪಟ್ಟಣದಲ್ಲಿ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ
ಬುಧವಾರ ನಡೆದ ಬಣಜಿಗ ಸಮಾಜದ ವಾರ್ಷಿಕ
ಮಹಾಸಭೆ ನೂತನ ಪಧಾದಿಕಾರಿಗಳ ಪದಗ್ರಹಣ
ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತ
ನಾಡಿದರು.
ಶಿರಹಟ್ಟಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ , ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಯ ಎ.ಕೆ ಬಳಗೇರ್ ಸರ್ ಮಾತನಾಡಿ ಧಾರ್ಮಿಕ, ಸಾಹಿತ್ಯ ಕಾರ್ಯಗಳ ಯಶಸ್ಸಿಗೆ ಬಣಜಿಗ ಸಮಾಜದ ಕೊಡುಗೆ ಅಪಾರಾಗಿದೆ ಎಂದರು.
ಕಾಯಯಕದ ಜೊತೆಗೆ ಎಲ್ಲಾ ರಂಗದಲ್ಲಿ ಬಣ
ಜಿಗ ಸಮಾಜ ಗುರುತಿಸಿಕೊಂಡಿದೆ. ಸಾಹಿತ್ಯ, ಸಂಗೀತ
ಕ್ಷೇತ್ರದಲ್ಲಿ ಅನೇಕ ಮಹನೀಯರು ಹೆಸರು ಮಾಡಿದ್ದಾರೆ
ಎಂದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಡಾ. ಶಿವಬಸ್ಸಪ್ಪ ಹೆಸರೂರು, ಕೆಪಿಸಿಸಿ
ಎಸ್ಪಿ ಸಮಿತಿ ರಾಜ್ಯ ಪ್ರಧಾನ ಕಾರ್ಯದಶರ್ಶಿ ಆರ್.
ಸಿದ್ದನಗೌಡ ತುರ್ವಿಹಾಳ ಇದ್ದರು.
ಮಸ್ಕಿ ಪಟ್ಟಣದಲ್ಲಿ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಮಾಜದ ವಾರ್ಷಿಕ ಮಹಾಸಭೆ, ನೂತನ
ಪಧಾದಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಘಟಕದ ಅಧ್ಯಕ್ಷ ಉಮಕಾಂತಪ್ಪ ಸಂಗನಾಳ, ದೊಡ್ಡಪ್ಪ
ಕಡಬೂರು, ಡಾ. ಮಲ್ಲಿಕಾರ್ಜುನ ಇಲ್ಲಿ ಸೊಗಣ್ಣ ಬಾಳೆ
ಕಾಯಿ, ಶ್ರೀಶೈಲಪ್ಪ ಲಿಂಗಸುಗೂರು, ಪಂಪಣ್ಣನಂದಾ,
ಮಲ್ಲಿಕಾರ್ಜುನ ಯಂಬಲದ, ಬಸ್ಸಮ್ಮ ಕಡಿ, ಕವಿತಾ
ಕೋಡಿಹಾಳ, ಸಹನಾ ಎಂ. ಬ್ಯಾಳಿ, ಸಮಾಜದ
ಬಾಂಧವರು ಇದ್ದರು.
ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧಕ್ಷೇತ್ರದಲ್ಲಿ ಸಾಧನೆಗೈದಸಾಧಕರಿಗೆ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಸ್ಕಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ವೀರೇಶ ಸೌದ್ರಿ, ಗೌರವಾಧ್ಯಕ್ಷರಾಗಿ ಡಾ.ನಾಗರಾಜ ಚೌಡಶೆಟ್ಟಿ ಪದಗ್ರಹಣ ಮಾಡಿದರು.