ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ- ಎಸ್.ಪಿ.ಪುಟ್ಟಮಾದಯ್ಯ ಎಂ.

ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ- ಎಸ್.ಪಿ.ಪುಟ್ಟಮಾದಯ್ಯ ಎಂ.

 

e- ಸುದ್ದಿ ರಾಯಚೂರು
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎಸ್.ಕಮಲ್ ಕುಮಾರ್ ರವರು ನೂತನ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, (ಐಪಿಎಸ್) ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ವಾಗತಿಸಿ ಗೌರವಿಸಿದರು.

ನಂತರ‌ ಮಾತನಾಡಿದ ಅವರು ಕೈಗಾರಿಕಾ ಪ್ರದೇಶದ ಭದ್ರತೆ, ಇತ್ತೀಚಿನ ಕಳ್ಳತನ ವಿಷಯದ ಬಗ್ಗೆ ವಿವರಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ ಮಾತನಾಡಿ ರೈಸ್ ಮಿಲ್ಲರ್ಸ್ ಲಾರಿ, ಸ್ಥಳೀಯ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.
ಅಧ್ಯಕ್ಷರಾದ ಶ್ರೀ ಎಸ್ ಕಮಲ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಶ್ರೀ ತ್ರಿವಿಕ್ರಮ್ ಜೋಶಿ, ಕಾರ್ಯದರ್ಶಿ ಶ್ರೀ ಜಂಬಣ್ಣ, ಉಪಾಧ್ಯಕ್ಷರು: ಶ್ರೀ ಧೋತರಬಂಡಿ ಮಲ್ಲಿಕಾರ್ಜುನ್, ಶ್ರೀ ಬಿ ಜಗದೀಶ್ ಗುಪ್ತಾ, ಶ್ರೀ ಸಾವಿತ್ರಿ ಪುರುಷೋತ್ತಮ್ ಮತ್ತು ಶ್ರೀ ಗಾರ್ಲದಿನ್ನಿ ಸಿದ್ದನ್ ಗೌಡ. ಖಜಾಂಚಿ: ಶ್ರೀ ಕೆ.ಎಂ. ಪಾಟೀಲ್. ಜಂಟಿ ಕಾರ್ಯದರ್ಶಿ ಶ್ರೀ ದೇವನಪಲ್ಲಿ ಶ್ರೀನಿವಾಸ್, ಕಾರ್ಯಕಾರಿ ಸದಸ್ಯರಾದ ಶ್ರೀ ಕೆ.ವಿ. ಮನೋಹರ್, ಶ್ರೀ ಮುರೈಲಾಲ್ ಎಸ್.ಅಗರ್ವಾಲ್ ಶ್ರೀ ಗೌತಮ್ ಪ್ರಕಾಶ್ ಘಿನ್ಯಾ. ಶ್ರೀ ಬಳತಗಿ ಶ್ರೀನಿವಾಸ್, ಶ್ರೀ ಕೆ ಯೇಮಣ್ಣ. ವಿಶೇಷ ಆಹ್ವಾನಿತರಾಗಿ ಶ್ರೀ ಅಂಬಾಟಿ ವೆಂಕಟರಾಜ್ ಗುಪ್ತಾ, . ಶ್ರೀ ಈರಣ್ಣ ಚಿತ್ರಗಾರ,. ಹಿಂದಿನ ಅಧ್ಯಕ್ಷರು ಮತ್ತು ಸಲಹೆಗಾರರಾದ ಶ್ರೀ ಹಾರವಿ ನಾಗನಗೌಡ. ಶ್ರೀ ಮೈಲಾಪುರ ಎನ್ ಮೂರ್ತಿ ಭಾಗವಹಿಸಿದ್ದರು.

Don`t copy text!