ಅಪೂರ್ಣ ಕಾಮಾಗಾರಿ ಬೇಗ ಮುಗಿಸಲು ಜಿಲ್ಲಾ ವಾಣಿಜ್ಯೋದ್ಯಮ ಸಂಘ ಜಿಲ್ಲಾಧಿಕಾರಿಗೆ ಮನವಿ

ಅಪೂರ್ಣ ಕಾಮಾಗಾರಿ ಬೇಗ ಮುಗಿಸಲು ಜಿಲ್ಲಾ ವಾಣಿಜ್ಯೋದ್ಯಮ ಸಂಘ ಜಿಲ್ಲಾಧಿಕಾರಿಗೆ ಮನವಿ

e-ಸುದ್ದಿ ರಾಯಚೂರು

ಜಿಲ್ಲೆಯ ಹಲವು ಕಾಮಾಗಾರಿಗಳು ನಿಧಾನ ಗತಿಯಲ್ಲಿ ಸಾಗಿವೆ. ಅವುಗಳಿಗೆ ಪುನಶ್ವೇತನ‌ನೀಡಿ ನಿಗದಿತ ಕಾಲ ಮಿತಿಯೋಳಗೆ ಪೂರ್ಣಗೊಳಿಸುವಂತೆ ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘ ರಾಯಚೂರು ನಾಗರಿಕರ ಪರವಾಗಿ ಕಮಲ್ ಕುಮಾರ ಜಿಲ್ಲಾಧಿಕಾರಿ ಶ್ರೀ ಕೆ.ನಿತಿಶ್ ಅವರಿಗೆ ಮನವಿ ಮಾಡಿದರು.
ಐದು ಹೆದ್ದಾರಿಗಳ ಕಾರ್ಯ ಚಟುವಟಿಕೆಗಳು ನಿಧಾನಗತಿಯಲ್ಲಿ ನಡೆದಿವೆ. ಮಾನ್ವಿಯಿಂದ ರಾಯಚೂರುವರೆಗಿನ ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ, ವಿಮಾನ ನಿಲ್ದಾಣ ಕಾಮಗಾರಿ, ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾಧೀನ, ನೀರು ಸರಬರಾಜು ಕುರಿತು ಚರ್ಚಿಸಿದರು. ಕೈಗಾರಿಕಾ ಪ್ರದೇಶ, ಗದ್ವಾಲ್ ರಸ್ತೆ ಮತ್ತು ಮಂಚಲಾಪುರ , ಸೋಲಾರ್ ಪಾರ್ಕ್ ಪ್ರಸ್ತಾವನೆ, ಜವಳಿ ಪಾರ್ಕ್, ಹೊಸ ಕೈಗಾರಿಕಾ ನೀತಿ, ಸಹಾಯಧನ ಬಿಡುಗಡೆ ಚರ್ಚಿಸಿದರು.
ಕಾರ್ಯದರ್ಶಿ ಶ್ರೀ ವೈ ಜಂಬಣ್ಣ ಮಾಜಿ ಅಧ್ಯಕ್ಷರಾದ ಶ್ರೀ ತ್ರಿವಿಕ್ರಮ್ ಜೋಶಿ, ಕಾರ್ಯದರ್ಶಿ ಶ್ರೀ ಜಂಬಣ್ಣ, ಉಪಾಧ್ಯಕ್ಷರಾದ ಶ್ರೀ ಧೋತರಬಂಡಿ ಮಲ್ಲಿಕಾರ್ಜುನ್, ಶ್ರೀ ಸಾವಿತ್ರಿ ಪುರುಷೋತ್ತಮ್, ಶ್ರೀ ಗಾರ್ಲದಿನ್ನಿ ಸಿದ್ದನಗೌಡ, ಖಜಾಂಚಿ: ಶ್ರೀ ಕೆ.ಎಂ. ಪಾಟೀಲ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಸಿ ಎ ಚೇತನ್ ಧೋಕಾ ಕಾರ್ಯಕಾರಿ ಸದಸ್ಯರಾದ ಶ್ರೀ ಕೆ.ವಿ.ಮನೋಹರ್, ಶ್ರೀ ಮುರಾರಿ ಲಾಲ್ ಎಸ್.ಅಗರ್ವಾಲ್, ಶ್ರೀ ಗೌತಮ್ ಪ್ರಕಾಶ್ ಗಿನಿಯ , ಶ್ರೀ ಕೆ.ಎಸ್ ಉದಯ್ ಕಿರಣ್ . ಶ್ರೀ ಶೆಟ್ಟಿ ನಾಗರಾಜ್, ಶ್ರೀ ಆರ್ ವೆಂಕೋಬ್ ಶೆಟ್ಟಿ, ಮಾಜಿ ಅಧ್ಯಕ್ಷರು ಮತ್ತು ಸಲಹೆಗಾರರಾದ ಶ್ರೀ ಅರವಿ ನಾಗನಗೌಡ ಮತ್ತು ಶ್ರೀ ಮೈಲಾಪುರ ಎನ್ ಮೂರ್ತಿ ಇದ್ದರು.

Don`t copy text!