ಜು.28 ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ- ಆರ್.ಗುರುನಾಥ
e-ಸುದ್ದಿ ರಾಯಚೂರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಇಲಾಖೆಗಳ ಸಹಯೋಗದಲ್ಲಿ ಜು.28 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ ಮತ್ತು ಡಾ.ಬಾಬು ಜಗಜೀವನರಾಂ ಸಮೂದಾಯ ಭವನದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಅಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮವನ್ನು ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜ ಉದ್ಘಾಟಿಸಲಿದ್ದಾರೆ. ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಹಾಗೂ ವೈಧ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಪ್ರದಾನ ಮಾಡಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ನ್ಯೂಸ್ 18 ಪ್ರಧಾನ ಸಂಪಾದಕ ಹರಿಪ್ರಸಾದ ಆಗಮಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ಜಿ.ಕುಮಾರನಾಯಕ, ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ, ಹಂಪಯ್ಯನಾಯಕ, ಮಾನಪ್ಪ ವಜ್ಜಲ್, ಜಿ.ಕರೆಮ್ಮ ನಾಯಕ, ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಶರಣಗೌಡ ಬಯ್ಯಾಪುರು, ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ .ಕೆ. ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪುಟ್ಟಮಾದಯ್ಯ, ಎಂ, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹೀರೆಮಠ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಆರ್.ಗುರುನಾಥವಹಿಸಿಕೊಳ್ಳಲಿದ್ದಾರೆ. ಜಿಲ್ಲೆ ಎಲ್ಲಾ ತಾಲೂಕ ಘಟಕಗಳ ಪದಾಧಿಕಾರಿಗಳು, ಸಂಘದ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸಾರ್ವಜನಿಕರು ಭಾಗವಹಿಸುವಂತೆ ಮನವಿಮಾಡಿದರು.
ಈ ಸಂದರ್ಬದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹೀರೆಮಠ, ಖಜಾಂಚಿ ವೆಂಕಟೇಶ ಹೂಗಾರ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿಗೆ ನಾಗರಾಜ, ನರಸಿಂಗ್‌ರಾವ್ ಸರ್ಕಿಲ್, ರಘುನಾಥರೆಡ್ಡಿ ಸೇರಿ ಹಲವರ ಆಯ್ಕೆ
ಜಿಲ್ಲಾ ಕಾರ್ಯಕರ್ತರ ಸಂಘದಿಂದ ಪ್ರದಾನ ಮಾಡುವ ಪ್ರಶಸ್ತಿಗಳಿಗೆ ಹತ್ತು ಜನರನ್ನು ಆಯ್ಕೆ ಮಾಡಲಾಗಿದೆ. ಎನ್.ಕೆ.ಕುಲ್ಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ಪ್ರಾಯೋಜಿತ ಜೀವಮಾನ ಸಾಧನೆ ಪ್ರಶಸ್ತಿಗೆ ಈಶಾನ್ಯ ಟೈಮ್ಸ್ ಪತ್ರಿಕೆ ಸಂಪಾದಕ ನಾಗತೀಹಳ್ಳಿ ನಾಗರಾಜ, ಹಾಗೂ ಶಿವಶಂಕರಗೌಡ ಯದ್ದಲದಿನ್ನಿ ಸ್ಮರಣಾರ್ಥ ವೀಶೇಷ ಪ್ರಶಸ್ತಿಗೆ ದೇವದುರ್ಗ ಕನ್ನಡ ಪ್ರಭ ವರದಿಗಾರ ನರಸಿಂಗರಾವ್ ಸರ್ಕಿಲ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ ಹೇಳಿದರು.
ಸುದ್ದಿಮೂಲ ಪ್ರಾಯೋಜಿತ ಪ್ರಕಾಶ ದಿನ್ನಿ ಸ್ಮಾರಕ ವಾರ್ಷಿಕ ಪ್ರಶಸ್ತಿಗೆ ಪ್ರಜಾಪ್ರಸಿದ್ದ ಪತ್ರಿಕೆ ಉಪ ಸಂಪಾದಕ ರಘುನಾಥರೆಡ್ಡಿ ಮನ್ಸಲಾಪುರು, ಸುದ್ದಿಮೂಲ ಪ್ರಾಯೋಜಿತ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ರಾಯಚೂರು ಧ್ವನಿ ಪತ್ರಿಕೆಸಂಪಾದಕ ಲಕ್ಷö್ಮಣ ಕಪಗಲ್, ನರಸಿಂಹಚಾರ್ಯ ಗುಡಿ ಸ್ಮರಣಾರ್ಥ ಪ್ರಶಸ್ತಿಗೆ ಮಸ್ಕಿ ಉದಯವಾಣಿ ವರದಿಗಾರ ವಿಠ್ಠಲ್ ಕೆಳೂತ್, ಪ್ರಹ್ಲಾದಾಚಾರ್ಯ ಜೋಷಿ ಸ್ಮರಣಾರ್ಥ ಪ್ರಶಸ್ತಿಗೆ ಕವಿತಾಳ ಸಂಜೆವಾಣಿ ವರದಿಗಾರ ರಾಮಣ್ಣ ಕವಿತಾಳ, ಪ್ರಹ್ಲಾದಚಾರ್ಯ ಜೋಷಿ ಪ್ರಾಯೋಜಿಯ ಮತ್ತೊಂದು ಪ್ರಶಸ್ತಿಗೆ ಲಿಂಗಸೂಗೂರು ಹೈದ್ರಾಬಾದ ಕರ್ನಾಟಕ ಪತ್ರಿಕೆ ವರದಿಗಾರ ರಾಘವೇಂದ್ರ ಭಜಂತ್ರಿ, ಮಹಾದೇವಮ್ಮ ಬಸವರಾಜಸ್ವಾಮಿ ಸ್ಮರಣಾರ್ಥ ಪ್ರಶಸ್ತಿಗೆ ಸಿರವಾರ ಸಂಜೆವಾಣಿಪತ್ರಿಕೆ ವರದಿಗಾರ ಹನುಮೇಶ.ಸಿ, ನಂದಿಕೋಲಮಠ ಪ್ರಾಯೋಜಿತ ಸ್ಪಂದನಾ ಪ್ರಶಸ್ತಿಎ ಅರಕೇರಾ ವಿಜಯವಾಣಿ ವರದಿಗಾರ ಮಹಾಂತೇಶ ಹೀರೆಮಠ, ಸಿರವಾರ ಸಿದ್ದಪ್ಪ ಹಳ್ಳೂರು ಸ್ಮರಣಾರ್ಥ ಪ್ರಶಸ್ತಿಗೆ ಪವರ ಟಿವಿ ಕ್ಯಾಮರಾಮನ್ ಅಬ್ದುಲ್ ಖಾದರ್, ಈಶರಮ್ಮ ನರಸಪ್ಪ ಜಲ್ದಾರ ಪ್ರಾಯೋಜಿತ ಪ್ರಶಸ್ತಿಎ ಸಿಂಧನೂರು ಸಾಕ್ಷಿ ಪತ್ರಿಕೆ ವರದಿಗಾರ ನಾಗರತ್ನಮ್ಮ ಶರಣೇಗೌಡ, ರಜನಿ ಸತ್ಯವತಿ ಜೇಮಸಿಂಗ್ ಸ್ಮರಣಾರ್ಥ ಜಾಹೀರಾತು ಪ್ರತಿನಿಧಿಗೆ ನೀಡುವ ಪ್ರಶಸ್ತಿಎ ವಿಜಯವಾಣಿ ಪತ್ರಿಕೆಯ ಜಾಹೀರಾತು ಪ್ರತಿನಿಧಿ ಮುತ್ತಣ್ಣ ಕಬ್ಬಿಣದ ಇವರಿಗೆ ಆಯ್ಕೆ ಮಾಡಲಾಗಿದೆ ಎಂದರು.
ಅಲ್ಲದೇ ಪತ್ರಿಕಾ ವಿತರಕರಾದ ದತ್ತಾತ್ರೇಯ ಅಸ್ಕಿಹಾಳ ಇವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ 10 ಸಾವಿರ ರೂ ನಗದು ಹಾಗೂ ಟ್ರೋಫಿ ಸಹ ವಿತರಿಸಲಾಗುತ್ತದೆ ಎಂದರು.