ಪತ್ರಿಕೆಗಳ ಪ್ರೋತ್ಸಾಹದಿಂದ ರಾಜಕೀಯ ಪ್ರವೇಶ – ಎನ್ .ಎಸ್. ಬೊಸರಾಜು
e-ಸುದ್ದಿ ರಾಯಚೂರು
ಪತ್ರಿಕೆಗಳು ಸ್ಪೂರ್ತಿಯಿಂದಲೇ ನಾನು ರಾಜಕೀಯಕ್ಕೆ ಪ್ರವೇಶಿಸಿದೆ. ಹತ್ತಾರ ವರ್ಷಗಳ ರಾಜಕೀಯ ಜೀವನದಲ್ಲಿ ಪತ್ರಿಕೆಗಳು, ಪತ್ರಕರ್ತರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಸರ್ಕಾರ ಮತ್ತು ವ್ಯವಸ್ಥೆ ಕುರಿತು ಜನರಲ್ಲಿ
ನಂಬಿಕೆ ಮೂಡಿಸುವ ಕೆಲಸ ಪತ್ರಕರ್ತರಿಂದ ನಡೆಯಬೇಕಿದೆ
ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಖಾತೆ ಸಚಿವರಾದ ಎನ್.ಎಸ್.ಬೋಸರಾಜು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರವಿವಾರ ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ ಮತ್ತು ಡಾ.ಬಾಬು ಜಗಜೀವರಾಂ ಸಮೂದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
2013 ರಲ್ಲಿಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗಲೇ ಪತ್ರಕರ್ತರ ಮಾಶಾಸನವನ್ನು ಹೆಚ್ಚಿಸಲಾಗಿದೆ. ಪತ್ರಕರ್ತರ ರಕ್ಷಣೆ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಪಾಸ್ ನೀಡುವ ಕುರಿತು ನಿಯಾವಳಿ ರೂಪಿಸಲಾಗುತ್ತಿದೆ ನಗರಸಭೆ ಮತ್ತುಆರ್‌ಡಿಎ ಪತ್ರಕರ್ತರಿಗೆ ನಿವೇಶನ ಒದಗಿಸಲು ಮುಂದಾದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದರು.
ಸುಳ್ಳು ಸುದ್ದಿಗಳು ವಿಜೃಂಭಿಸುವ ಕಾಲ ಘಟ್ಟದಲ್ಲಿ ಮುದ್ರಣ ಮಾದ್ಯಮ ಜನರ ವಿಶ್ವಾಸ ಉಳಿಸಿಕೊಂಡಿದೆ. ಸಾಮಾಜಿಕ ಜಾಲತಾಣದ ಸುದ್ದಿಗಳ ಖಚಿತತೆಗೆ ಪತ್ರಿಕೆಗಳ ಮೊರೆ ಹೋಗಬೇಕಾಗಿದೆ ಎಂದು ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಖಾತೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ ಪಾಟೀಲ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಗುರುನಾಥ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜಿಲ್ಲೆಯ ಸಮಸ್ಯೆಗಳಿಗೆ ಮತ್ತು ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರದ ಸ್ಫಂದನೆ ಅಗತ್ಯವಾಗಿದ್ದು ಜಿಲ್ಲೆಯ ಸಚಿವರು ಈ ಕುರಿತು ಸರ್ಕಾರದಲ್ಲಿ ದನಿ ಎತ್ತುವಂತೆ ಮನವಿ ಮಾಡಿದರು.
ಖಾಸಗಿ ಸುದ್ದಿವಾಹಿನಿಯ ಸಂಪಾದಕ ಹರಿಪ್ರಸಾದ ಉಪನ್ಯಾಸ ನೀಡಿದರು.
ಶಾಸಕರಾದ ಶಿವರಾಜ ಪಾಟೀಲ, ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಹಂಪಯ್ಯ ಸಾಹುಕಾರ, ವಿಧಾನ ಪರಿಷತ್ತ ಸದಸ್ಯರಾದ ಎ.ವಸಂತಕುಮಾರ, ಭವಾನಿಸಿಂಗ್ ಠಾಕೂರ್, ಜಿಲ್ಲಾಧಿಕಾರಿ ನಿತೀಶ ಕೆ. ಎಸ್.ಪಿ.ಪುಟ್ಟಮಾದಯ್ಯ ಎಂ. ರಾಜ್ಯ ಪ್ರತಿನಿಧಿ ಶಿವಮೂರ್ತಿ ಹಿರೇಮಠ, ಹಾಗೂ ಅಬ್ದುಲ್ ಅಜೀಜ್ ಇದ್ದರು. ಪತ್ರಕರ್ತರಿಗೆ ಸತ್ಕರಿಸಲಾಯಿತು.