ದೇವರಿಗೇಕೆ ಸುವಾಸಸೆ ಹೂವು?

ದೇವರಿಗೇಕೆ ಸುವಾಸಸೆ ಹೂವು?

 

 

 

 

 

 

 

 

 

ಮೊದಲಿನಿಂದಲೂ ದೇವರಿಗೆ ಸುವಾಸಿತ ಪುಷ್ಪಗಳನ್ನು ಹಾಕುವುದು ಅಭ್ಯಾಸ ನಮ್ಮ ಮನೆಯಲ್ಲಿ ದೇವರ ಪೂಜೆಗೆ ವಿಶೇಷವಾಗಿ ಸುಗಂಧಿತವಾದ ಪುಷ್ಪಗಳನ್ನೇ ಬಳಸುತ್ತಾರೆ. ಈ ಚಂಡು ಹೂವು ಕನಕಾಂಬರ ಸ್ಪಟಿಕದಂತಹ ಹೂವು ಹಾಕಿದ್ದಿಲ್ಲ. ಅದೇ ಅಭ್ಯಾಸ ನನ್ನ ಮಕ್ಕಳು ಅಮ್ಮ ಎಲ್ಲ ಹೂವು ಹೂವಲ್ಲವೇ ಯಾಕೆ ಸುವಾಸಿತ ಪುಷ್ಪಗಳನ್ನೇ ಬಳಸಬೇಕೆಂದು ಕೇಳಿದಾಗ ನಾನು ಅಮ್ಮನನ್ನು ಕೇಳಿದೆ ಆಗ ಅಮ್ಮ ಎಲ್ಲವೂ ದೇವರ ಸೃಷ್ಟಿ ಆದರೆ ಅದರಲ್ಲಿ ಕೆಲವು ಸುಗಂಧಿತ ಪುಷ್ಪ ಇನ್ನು ಕೆಲವು ವಾಸನೆ ರಹಿತ ಪುಷ್ಪಗಳು ಕೆಲವನ್ನು ಪೂಜೆಗೆ ಬಳಸಿದರೆ ಇನ್ನು ಕೆಲವನ್ನು ಅಲಂಕಾರಕ್ಕೆ ಬಳಸುತ್ತಾರೆ ಎಂದು ಹೇಳಿದರು.

ಕೆಲವು ಪುಷ್ಪಗಳು ಕೆಲವು ದೇವರಿಗೆ ವಿಶೇಷ ಪ್ರೀತಿ ಎನ್ನುತ್ತಾರೆ. ಗಣೇಶನಿಗೆ ಕಣಗಲೇ ಮತ್ತು ಗರಿಕೆ, ಲಕ್ಷ್ಮಿದೇವಿಗೆ ಕಮಲ, ರುದ್ರದೇವರಿಗೆ ಬಿಲ್ವ ಪತ್ರೆ, ನಾಗದೇವರಿಗೆ ಕೇದಿಗೆ ಸೇವಂತಿಗೆ ದೇವರಿಗೆ ಎಲ್ಲ ಪುಷ್ಪಗಳನ್ನು ಅರ್ಪಿಸುತ್ತಾರೆ. ಪಾರಿಜಾತ, ಮಲ್ಲಿಗೆ, ಸಂಪಿಗೆ ಸೇವಂತಿಗೆ ಕೇದಿಗೆ ಗುಲಾಬಿ ಎಲ್ಲ ಹೂವುಗಳು ಹೇಗೆ ಸುವಾಸಿತವಾಗಿರುತ್ತವೆಯೋ ಹಾಗೆಯೇ ನಮ್ಮ ಜೀವನವೂ ಸುವಾಸಿತವಾಗಲೆಂದು ದೇವರು ನಮ್ಮನ್ನು ಹರಸುತ್ತಾನೆ. ಪ್ರಪಂಚದ ಅದ್ಭುತ ಸೃಷ್ಟಿಯನ್ನು ನಾವು ಬೇಕಾದಷ್ಟು ಉಪಯೋಗಿಸಿ ಕೊಳ್ಳುತ್ತೇವೆ ಅವನ ಸೃಷ್ಟಿಯ ವಸ್ತುಗಳನ್ನು ಅವನಿಗೆ ಅರ್ಪಿಸಿ ಕೃತಾರ್ಥರಾಗೋಣ. ನಮ್ಮ ಆಚಾರಣೆ ಹಾಗೂ ಧಾರ್ಮಿಕ ಮಹತ್ವ ತಿಳಿದು ಅದನ್ನು ಅನುಸರಿಸೋಣ.

 

 

 

 

 

 

 

 

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!