ಉಪನಿಷತ್ತು ಪುರಾಣ ಕಥೆಗಳು-ವಾರದ ಅಂಕಣ
ಕೃಷ್ಣ -ಸುಧಾಮರ ಸ್ನೇಹ
ಭಾವಗತ ಮತ್ತು ಮಹಾಭಾರತಗಳಲ್ಲಿ ಬರುವ ಪ್ರಸಿದ್ಧ ಸ್ನೇಹದ ಉದಾಹರಣೆ ಕೃಷ್ಣ ಸುಧಾಮರದ್ದು. ಕೃಷ್ಣ ರಾಜಕುಮಾರ ಸುಧಾಮ ಬಡಬ್ರಾಹ್ಮಣ. ಸಾಂದೀಪನಿ ಋಷಿಗಳ ಆಶ್ರಮದಲ್ಲಿ ವಿದ್ಯೆ ಕಲಿಯುವ ಸಂದರ್ಭದಲ್ಲಿ ಸಹಪಾಠಿಗಳಾಗಿ ಸ್ನೇಹಿತರಾದವರು.
ಶ್ರೀಕೃಷ್ಣ ಗುರುಕುಲದಲ್ಲಿ ಇದ್ದಾಗ ಒಂದು ಬಾರಿ ಸಮಿತ್ತನ್ನು ತರಲು ಕಾಡಿಗೆ ಸುಧಾಮನೊಂದಿಗೆ ಹೋಗಿದ್ದನು. ಗುರುಮಾತೆಯು ಇಬ್ಬರಿಗೂ ತಿನ್ನಲು ಆಹಾರವನ್ನು ಕಟ್ಟಿ ಕೊಟ್ಟಿದ್ದರು. ಸಮಿತ್ತು ಹುಡುಕುವಾಗ ಸುಧಾಮನ ಕೈಲಿ ಆಹಾರದ ಗಂಟು ಉಳಿದು ಬೇರೆ ಬೇರೆ ದಿಕ್ಕುಗಳಲ್ಲಿ ಉಳಿದು ಬಿಟ್ಟರು. ಆಗ ಸುಧಾಮನಿಗೆ ಹಸಿವೆಯಾದ್ದರಿಂದ ಸುಧಾಮನೇ ಶ್ರೀ ಕೃಷ್ಣನ ಪಾಲಿನ ಆಹಾರವನ್ನೂ ತಿಂದು ಬಿಟ್ಟ. ಶ್ರೀ ಕೃಷ್ಣನು ಹಸಿದು ಇರಬೇಕಾಯಿತು. ಶ್ರೀಕೃಷ್ಣ ಅದನ್ನು ತನ್ನ ಮನದಲ್ಲಿ ಹೆಚ್ಚು ವಿಚಾರ ಮಡಲಿಲ್ಲ. ಆದರೆ ಸುಧಾಮನಿಗೆ ಆ ವಿಚಾರವು ಮನದಲ್ಲಿ ಉಳಿದು ಬಿಟ್ಟಿತು.
ಗುರುಕುಲ ವಿದ್ಯಾಭ್ಯಾಸ ಮುಗಿದ ನಂತರ ಮಥುರೆಗೆ ಹಿಂತಿರುಗಿದ ನಂತರ ಕೃಷ್ಣ ತನ್ನ ರಾಜಕೀಯ ಕೆಲಸಗಳಲ್ಲಿ ತೊಡಗಿಕೊಂಡ ಮದುವೆ ಸಂಸಾರ ಮಕ್ಕಳು ಎಲ್ಲದರ ಮಧ್ಯ ಆರಾಮವಾಗಿ ಇದ್ದ. ಕೃಷ್ಣನ ಗೆಳೆಯ ಸುಧಾಮನಿಗೂ ಮದುವೆಯಾಯಿತು. ಮೊದಲಿಗೂ ಬಡವನಾಗಿಯೇ ಇದ್ದ ಈಗಲೂ ಬಡ ಬ್ರಾಹ್ಮಣನಾಗಿಯೇ ಉಳಿದಿದ್ದ. ಅವನ ಹೆಂಡತಿ ಒಮ್ಮೆ ದ್ವಾರಕಾಪತಿ ನಿಮ್ಮ ಸ್ನೇಹಿತರು ಎಂದು ಹೇಳುತ್ತೀರಿ. ನಮ್ಮ ಈ ದುರ್ಗತಿಯಲ್ಲಿ ಮಕ್ಕಳಿಗೆ ಒಂದು ಹೊತ್ತಿನ ಊಟವನ್ನು ಸರಿಯಾಗಿ ನೀಡಲು ಆಗುತ್ತಿಲ್ಲವಲ್ಲ ಒಮ್ಮೆ ಹೋಗಿ ಅವರ ಸಹಾಯವನ್ನು ಬೇಡಿರಿ ಎಂದು ಒತ್ತಾಯ ಮಾಡಿದಾಗ ಸುಧಾಮನು ದ್ವಾರಕೆಗೆ ಹೊರಟ.
ಯಾರನ್ನೇ ಭೇಟಿ ಮಾಡಲು ಬರಿಗೈಲಿ ಹೋಗಬಾರದು ಅದರಲ್ಲಿ ಸ್ನೇಹಿತನನ್ನು ನೋಡಲು ಬರಿ ಗೈಲಿ ಹೇಗೆ ಹೋಗಲಿ ಎಂದು ಸುಧಾಮನು ಕೇಳಿದಾಗ ಅವನ ಹೆಂಡತಿ ಮನೆಯಲ್ಲಿ ಇದ್ದ ಹಿಡಿ ಅವಲಕ್ಕಿಯನ್ನು ಗಂಟು ಕಟ್ಟಿ ಕೊಟ್ಟಳು.
ಸುಧಾಮ ಆಪ್ತ ಮಿತ್ರ ಶ್ರೀಕೃಷ್ಣನನ್ನು ನೋಡಲು ದ್ವಾರಕೆಗೆ ಹೋರಟ, ದ್ವಾರಕೆಯನ್ನು ತಲುಪಿ ಶ್ರೀಕೃಷ್ಣನನ್ನು ನೋಡಲು ಅವನ ಸ್ನೇಹಿತ ಸುಧಾಮ ಬಂದಿದ್ದಾನೆ ಎಂದು ಅವನು ದ್ವಾರಪಾಲಕರಿಗೆ ಹೇಳಿದಾಗ ಅವರು ಮೊದಲಿಗೆ ನಂಬದೇ ಇಂತಹ ದರಿದ್ರ ನಮ್ಮ ಸ್ವಾಮಿಯ ಸ್ನೇಹಿತ ಹೇಗೆ ಆದನು ಎಂದು ಅಂದುಕೊಂಡರು.
ಆದರೆ ಸುಧಾಮನ ಆಗಮನದ ಸಮಾಚಾರ ತಿಳಿದು ಶ್ರೀಕೃಷ್ಣನು ಓಡೋಡಿ ಬಂದು ಸ್ನೇಹಿತನನ್ನು ಅಪ್ಪಿಕೊಂಡು ವಿಶ್ವಾಸದಿಂದ ಸ್ವಾಗತಿಸಿದ ತನ್ನ ಅರಮನೆಯ ಅಂತಃ ಪುರಕ್ಕೆ ಕರೆದುಕೊಂಡು ಹೋಗಿ ಪಟ್ಟದರಸಿ ರುಕ್ಮಿಣಿಗೆ ಮತ್ತು ಇತರ ರಾಣಿಯರಿಗೆ ಎಲ್ಲರೀಗೂ ಪರಿಚಯಿಸಿದ ಶ್ರೀ ಕೃಷ್ಣನ ವೈಭವವನ್ನು ಕಂಡ ಸುಧಾಮ ತಾನು ತಂದ ಅವಲಕ್ಕಿಯನ್ನು ಹಿಂದೆ ಮುಚ್ಚಿಕೊಟ್ಟುಕೊಳ್ಳಲು ನೋಡಿದ ಆದರೆ ಶ್ರೀಕೃಷ್ಣ ಅವನ ಕೈಯಲ್ಲಿದ್ದ ಅವಲಕ್ಕಿಯ ಗಂಟನ್ನು ಕಸಿದು ಕೊಂಡು ತಾನೊಬ್ಬನೇ ತಿಂದ. ನಾಲ್ಕು ದಿನ ಅವನನ್ನು ಆದರ ಆತಿಥ್ಯ ಮಾಡಿದ. ಆದರೆ ತಾನು ಬಂದ ಕಾರಣ ಸುಧಾಮ ಹೇಳಲಿಲ್ಲ. ಕೃಷ್ಣನು ಕೇಳಲಿಲ್ಲ ಸುಧಾಮ ಹೊರಟಾಗ ಪ್ರೀತಿಯಿಂದ ಅವನನ್ನು ಕಳುಹಿಸಿಕೊಟ್ಟ.
ಸುಧಾಮ ಹಿಂತಿರುಗಿ ಬಂದಾಗ ಅವನ ಗುಡಿಸಲು ಅರಮನೆಯಾಗಿತ್ತು, ಧನ ಕನಕಗಳು ಹೆಂಡತಿ ಮಕ್ಕಳು ಹೊಸ ಬಟ್ಟೆ ಆಭೂಷಣಗಳಿಂದ ಸಮೃದ್ಧರಾಗಿದ್ದರು. ಪರಮಾತ್ಮನು ಎಲ್ಲ ಜನರ ಸುಖದಃಖಗಳನ್ನು ಅರಿತು ತಾನೇ ಎಲ್ಲರನ್ನೂ ಸಲಹುವ ಅಂತಹದ್ದರಲ್ಲಿ ತನ್ನ ಸ್ನೇಹಿತನು ಬೇಡದೇ ಅವನಿಗೆ ನೀಡಿದ್ದ ಅವಶ್ಯಕತೆ ಇದನ್ನು ಅದಕ್ಕೂ ಹೆಚ್ಚಿನ ಅನುಕೂಲತೆಗಳನ್ನು ನೀಡಿದ್ದ.
ನೀತಿ : ನಮ್ಮ ಸ್ನೇಹವು ಪರಸ್ಪರ ಅರ್ಥ ಮಾಡಿಕೊಳ್ಳುದಾಗಿರಬೇಕು. ಯಾರನ್ನೇ ಭೇಟಿ ಮಡಲು ಹೋಗುವಾಗ ಬರಿಗೈಲಿ ಹೋಗಬಾರದು. ಆಸ್ತಿ ಅಂತಸ್ತುಗಳ ಆಧಾರದ ಮೇಲೆ ಸ್ನೇಹವನ್ನು ಮಾಡಬಾರದು. ಸ್ನೇಹಿತರ ಕಷ್ಟ ಸಮಸ್ಯೆಗಳನ್ನು ಅವರು ಹೇಳಿದ ಮೇಲೆ ನಾವು ತಿಳಿಯಬೇಕು ಅಥವಾ ಅವರು ಕೇಳಿದಾಗ ಮಾತ್ರ ಸಹಾಯ ಮಡಬೇಕೆಂಬ ಹಮ್ಮು ಇರಬಾರದು. ಪರಮಾತ್ಮನ ಬಳಿಯಲ್ಲಿ ನಾವು ಭಕ್ತಿ ಮಾಡಿದರೆ ಸಾಕು ನಮಗೆ ಬೇಕಾದ್ದು ಅವನೇ ತಿಳಿದು ಯಥೇಚ್ಚವಾಗಿ ನೀಡುತ್ತಾನೆ.
–ಮಾಧುರಿ ದೇಶಪಾಂಡೆ, ಬೆಂಗಳೂರು