ವಚನ ಸಾಹಿತ್ಯ ಆಕ್ರಮಿಸಿಕೊಳ್ಳಬೇಕೆನ್ನುವ ಸಂಘ ಪರಿವಾರ
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಚಳುವಳಿ. ಮಾನವ ಹಕ್ಕುಗಳು ಆಂದೋಲನ. ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕಕರಣವಲ್ಲದ ಸರ್ವ ಶ್ರೇಷ್ಟ ಮಾನವ ಧರ್ಮ.
ಬಸವಣ್ಣ ಒಂದು ವೇಳೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿದ್ದರೆ ಇಂದು ಜಗತ್ತು ಲಿಂಗಮಯ ಆಗುತ್ತಿತ್ತು.
ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರ ಪುರಾಣಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕುತ್ತವೆ. ಬಹುದೇವೋಪಾಸನೆ ಸ್ಥಾವರ ಪೂಜೆ ರುದ್ರಾಭಿಷೇಕ ಅರ್ಚನೆ ನಿಮ್ಮ ವೃತ ಎಂಬ ಅನೇಕ ಶುಷ್ಕ ಆಚರಣೆಗೆ ಮುಂದಾಗದೆ ಅಂತಹ ಅನೇಕ ಕ್ರಿಯೆಗಳನ್ನು ನಿರಂತರ ಪ್ರಶ್ನೆ ಮಾಡುತ್ತಾ ತನ್ನದೇ ಆದ ಭಿನ್ನ ಹಾದಿಯಲ್ಲಿ. ನಡೆದರು ಶರಣರು.
ಸನಾತನ ಧರ್ಮದ ಕಟ್ಟಳೆ ಶೋಷಣೆ ಕಂದಾಚರ ಕಂಡು ಬೇಸತ್ತು ಬುದ್ಧ ಮೊದಲಿಗೆ ಸಿಡಿದೆದ್ದು ಪರ್ಯಾಯ ಚಳುವಳಿಯನ್ನು ವೈದಿಕರ ವಿರುದ್ಧ ಆರಂಭಿಸಿದನು.
ವಿಚಿತ್ರ ಆದರೂ ಸತ್ಯ ಬುದ್ಧನನ್ನು ಸನಾತನವಾದಿಗಳು ದಶಾವತಾರದಲ್ಲಿ ಸ್ಥಾನ ಕಲ್ಪಿಸಿ
ಬೌದ್ಧ ಧರ್ಮ ಭಾರತ ಬಿಟ್ಟು ಪೌರಾತ್ಯ ರಾಷ್ಟ್ರಗಳಿಗೆ ಹೋಗುವಂತೆ ಮಾಡಿದರು.
ಆದರೆ ಬಸವಣ್ಣ ವೈದಿಕ ಮೂಲ ಬೇರಿಗೆ ಕೊಡಲಿ ಏಟು ಕೊಟ್ಟ ಅದುವೆ ಯಜನೋಪವೀತ ಜನಿವಾರ ಧಾರಣೆ ಮುಂಜಿವೆ ಪ್ರಸಂಗ ಅದನ್ನು ಧಿಕ್ಕರಿಸಿ ಮನೆ ಬಿಟ್ಟು ಹೊರ ನಡೆದರು. ದಲಿತರ ಬಡವರ ಕಾರ್ಮಿಕರ ಶ್ರಮಿಕರ ಶೋಷಿತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವ ಮೂಲಕ ಸಮಾಜದ ಸಂಘಟನೆಯ ನಾಯಕತ್ವ ವಹಿಸಿದರು.
ಬಸವಣ್ಣವರು ಸಾರಿದ ವಚನಗಳು ಬಂಡಾಯ ವಿದ್ರೋಹಿ ಸಾಹಿತ್ಯ ಚಿಂತನೆಗಳು .ಕಲ್ಯಾಣ ಕ್ರಾಂತಿಯ ನಂತರ ಸುಮಾರು ಇನ್ನೂರು ಐವತ್ತು ವರ್ಷಗಳವರೆಗೆ ವಚನ ಚಳುವಳಿ ಭೂಗರ್ಭ ಸೇರಿತು. ಇತ್ತೀಚೆಗೆ. ಡಾ ಫ ಗು ಹಳಕಟ್ಟಿ ಅವರ ಮತ್ತು ಅನೇಕ ಸಂಶೋಧಕರ ನಿರಂತರ ಪ್ರಯತ್ನದಿಂದಾಗಿ ನಮಗೆ ಪರಿಷ್ಕೃತ ವಚನ ಸಾಹಿತ್ಯ ದೊರಕಿದೆ
ಹಿಂದೂ ಎನ್ನುವುದು ಧರ್ಮವಲ್ಲ ಅದು ಸಂಸ್ಕೃತಿ ಮತ್ತು ಬದುಕಿನ ಮಾರ್ಗವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದನ್ನು ನಮ್ಮ ಪ್ರಧಾನಿಯವರು ಅನೇಕ ಬಾರಿ ಹೇಳಿದ್ದಾರೆ. ವಸ್ತು ಸ್ಥಿತಿ ಹೀಗಿದ್ದಾಗ ಭಾರತದಲ್ಲಿ ಹುಟ್ಟಿದ ಜೈನ ಬೌದ್ಧ ಸಿಖ್ ಧರ್ಮದಂತೆ ಲಿಂಗಾಯತ ಬಸವ ಧರ್ಮವೂ ಕೂಡ ಸ್ವತಂತ್ರ ಹಿಂದುಯೇತರ ಅವೈದಿಕ ಧರ್ಮ. ಬಸವಣ್ಣನವರ ವಚನಗಳು ಚಿಂತನೆಗಳು ಇಂದು ಇಡೀ ಜಗತ್ತಿಗೆ ಆಕರ್ಷಕವಾಗಿವೆ. ಮಗ್ನಾ ಕಾರ್ಟ ದವರು ಸಹಿತ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂದು ಹೇಳುತ್ತಾರೆ.
ವಸ್ತು ಸ್ಥಿತಿ ಹೀಗಿರುವಾಗ ಲಿಂಗಾಯತರು ಹಿಂದೂಗಳು ಎಂದು ಹೇಳುತ್ತಾ ಅವರಿಗೆ ಸ್ವತಂತ್ರ ಧರ್ಮ ಮಾನ್ಯತೆಯನ್ನು ಮತ್ತು ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡದೆ ಕೇವಲ ಮತಗಳ ಪಡೆಯುವ ಹುನ್ನಾರದಿಂದ ಇತ್ತೀಚಿಗೆ ಸಂಘಿಗಳು ಶರಣ ಸಾಹಿತ್ಯವನ್ನು
ತಮ್ಮ ತೆಕ್ಕೆಗೆ ತೆಗೆದುಕೊಂಡು ವಚನಗಳಲ್ಲಿ ಸೇರಿಕೊಂಡ ಕೆಲ ಖೋಟಾ ವಚನಗಳನ್ನು ಕಲಬೆರಕೆಯಾದ ವಚನಗಳನ್ನು ಸಂಸ್ಕೃತ ಉಕ್ತಿಗಳಿಂದ ಕೂಡಿದ ಪ್ರಕ್ಷಿಪ್ತ ವಚನಗಳನ್ನು ಬಳಸಿ ಕೊಂಡು ಮೂಲಕ ವಚನ ದರ್ಶನ ಎಂಬ ಕೃತಿಯನ್ನು ಪ್ರಕಟಗೊಳಿಸಿ ಸದ್ಗುರು ಶ್ರೀಸದಾಶಿವಾನಂದ ಸ್ವಾಮಿಗಳ ಗೌರವ ಸಂಪಾದಕತ್ವದಲ್ಲಿ ಜನಮೇಜಯ ಉಮರ್ಜಿ ಡಾ ನಿರಂಜನ ಪೂಜಾರ ಚಂದ್ರಪ್ಪ ಬಾರಂಗಿ ಡಾ ಸಂತೋಷಕುಮಾರ ಪೈ ಕೆ ಎಂಬವರು ವಚನ ಸಾಹಿತ್ಯವನ್ನು ವೇದ ಆಗಮದ ಮೂಲವೆಂದು ಹೇಳಲು ಹೊರಟ ಹಾಗಿದೆ.
ಕಲಬುರ್ಗಿಯಲ್ಲಿ ಹುಬ್ಬಳ್ಳಿಯಲ್ಲಿ ಸಂಘ ಪರಿವಾರದ ಸಂತೋಷ ಆದಿಯಾಗಿ ವಚನ ದರ್ಶನ ಪುಸ್ತಕ ಬಿಡುಗಡೆಗೊಳಿಸಿ ವಚನ ಸಾಹಿತ್ಯವನ್ನು ಕೇಸರಿಮಯ ಮಾಡ ಬೇಕೆನ್ನುವ ದುಷ್ಟ ಹುನ್ನಾರವನ್ನು ಹೊಂದಿದ್ದಾರೆ. ಕಲಬುರ್ಗಿಯಲ್ಲಿ 3 ಆಗಸ್ಟ್ ಹಾಗು ಹುಬ್ಬಳ್ಳಿಯಲ್ಲಿ 7 ಆಗಸ್ಟ್ ಪುಸ್ತಕ ಲೋಪಾರ್ಪಣೆ ಕಾರ್ಯಕ್ರಮ ಇಟ್ಟಿದ್ದಾರೆ. ಪುಸ್ತಕಗಳನ್ನು online ಮೂಲಕ ರಿಯಾಯಿತಿಯ ದರದಲ್ಲಿ ಇಂತಹ ಪುಸ್ತಕ ಲಿಂಗಾಯತ ಧರ್ಮಕ್ಕೆ ಹಿನ್ನೆಡೆ ಉಂಟು ಮಾಡುವ ಕೃತ್ರಿಮ ಸಾಹಿತ್ಯವನ್ನು ನಾವು ವಿರೋಧಿಸಬೇಕು .
ಇಂತಹ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮಿಗಳು ,ಶ್ರೀ ಶಂಕರಣ್ಣ ಮುನವಳ್ಳಿಯವರು ಕಲಬುರ್ಗಿಯವರಾದ ಡಾ ವಿಲಾಸವತಿ ಖುಬಾ ಅವರು ಡಾ ದಾಕ್ಷಾಯಿಣಿ ಶರಣಬಸಪ್ಪ ಅಪ್ಪ ಅವರು ಪಾಲ್ಗೊಳ್ಳದಿರಲು ಮನವಿ.
ಎಲ್ಲಾ ಬಸವಾಭಿಮಾನಿಗಳು ಬಸವ ಭಕ್ತರು ಇಂತಹ ಕಾರ್ಯಕ್ರಮವನ್ನು ಉಗ್ರವಾಗಿ ಪ್ರತಿಭಟಿಸಿ ಈ ಕೃತಿಯನ್ನು ಸಮಗ್ರವಾಗಿ ಇನ್ನೊಮ್ಮೆ ಪರಿಶೀಲಿಸಿ ಲೋಪ ದೋಷಗಳನ್ನು
ತೆಗೆದು ಶರಣರ ಆಶಯಗಳಿಗೆ ಮಾತ್ರ ಸೀಮಿತಗೊಳಿಸುವ ಕಾರ್ಯಕ್ಕೆ ಎಲ್ಲರೂ ಸನ್ನದ್ಧರಾಗಲು ಮನವಿ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ
——-+——————————————————e-ಸುದ್ದಿಯಲ್ಲಿ ಪ್ರಕಟವಾಗುವ ಲೇಖಮ, ಕತೆ, ಕವನ, ಬರಹಗಳು ಲೇಖಕರ ಅಭಿಪ್ರಾಯವಾಗಿರುತ್ತವೆ.
-ಸಂಪಾದಕ