ಶ್ತಾವಣ ಶರಣರ ಮಾಲಿಕೆ -೨
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ
ಗಣತಿಂಥಿಣಿಯೊಳಗಿರಿಸೆನ್ನನು ಲಿಂಗವೆ
ಶಿವ ಶಿವಾ ಕೂಡಲಸಂಗಮದೇವಾ
ಸೆರಗೊಡ್ಡಿ ಬೇಡುವೆನು.
-ಬಸವಣ್ಣ
ಮನುಷ್ಯ ಸಂಘಜೀವಿ ಸಮಾಜ ಜೀವಿ ಸಮಾಜವನ್ನು ಬಿಟ್ಟು ಬದುಕಿದ್ದೆ ಆದರೆ ಆತ ಒಬ್ಬ ಪಶುಗೆ ಸಮಾನವಾಗಿ ಕಾಣುತ್ತಾನೆ.
12 ನೇ ಶತಮಾನದಲ್ಲಿ ಶಿವಶರಣರು ಜಾತಿ ಲಿಂಗ ಭೇದ ವನ್ನು ಮರೆತು ಸಮ ಸಮಾಜದಲ್ಲಿ ಬದುಕಿ ತೋರಿಸಿ ಮಾದರಿ ಆದರು. ಶಿವಶರಣರು ನುಡಿದಂತೆ ನಡೆದರು ನಡೆದಂತೆ ನುಡಿದರು.
ತಂದೆ ತಾಯಿಯ ನಡೆ ನುಡಿ, ಶಾಲೆ ಸಮಾಜದ ನಡೆ ನುಡಿ ಯಲ್ಲಿ ಒಬ್ಬ ವ್ಯಕ್ತಿಯು ತನ್ನ ಸುಂದರ ಬದುಕನ್ನು ಕಟ್ಟಿಕೊಂಡು ಸಾಗುವನು . ವ್ಯಕ್ತಿಯ
ಬದುಕಿನ ಸುಂದರ ಮಾರ್ಗವನ್ನೂ ತೋರಿಸುತ್ತದೆ .ಸುಂದರ ಮಾರ್ಗ ತೋರಿಸದೇ ತಿರಸ್ಕಾರ ಭಾವದಿಂದ ನೋಡಿದಾಗ ಆ ವ್ಯಕ್ತಿಯ ಬದುಕು ದುಸ್ತರ ಆಗುವ ಉದಾಹರಣೆಯನ್ನು ನಾವು ಬಸವಣ್ಣನವರ ಈ ಒಂದು ವಚನದಲ್ಲಿ ಕಾಣುತ್ತೇವೆ .
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ
ಸಮಾಜದಲ್ಲಿ ಮನುಷ್ಯ ಸಂಘದಲ್ಲಿ ಇದ್ದುಕೊಂಡೇ ನಮ್ಮ ಬದುಕು ಕಟ್ಟಿಕೊಂಡು ಜೀವನ ಸಾಗಿಸಬೇಕಾಗುತ್ತದೆ.ನಮ್ಮ ಪ್ರತಿ ವ್ಯವಹಾರಿಕ ಚಟುವಟಿಕೆಗಳನ್ನು ನಡೆಸುವುದು ಪರಿವಾರದವರ ಜೊತೆಗೆ ಆ ಸಂಘ ಸಹವಾಸವೇ ಒಬ್ಬ ಮನುಷ್ಯನ ಏಳು ಬೀಳು ಉತ್ತಮರ ಸಹವಾಸ ಅದರಲ್ಲೂ ಸಾಧಕರಿಗೆ ಶರಣರ ಸಂಗವೇ ಪ್ರಾಣ ಜೀವಾಳ .
ಗಣತಿಂಥಿಣಿಯೊಳಗಿರಿಸೆನ್ನನು ಲಿಂಗವೆ
ಸರ್ವ ಕಾರಣಕರ್ತೃ ವಾಗಿರುವ ಲಿಂಗರೂಪಿ ಪರಶಿವನೇ ನನ್ನನ್ನು ಸದಾ ಶರಣರ ಅಮರಗಣಂಗಳ ಸಮೂಹದ ಮಧ್ಯದಲ್ಲಿರಿಸಿ ಬದುಕಿಸು ಎನ್ನುವ ಭಾವ ಪ್ರತಿಯೊಬ್ಬರದಾಗಬೇಕು
ಶಿವ ಶಿವಾ ಕೂಡಲಸಂಗಮದೇವಾ
ಸೆರಗೊಡ್ಡಿ ಬೇಡುವೆನು
ಶರಣರ ಸಂಗ ನೀರು ಇದ್ದ ಹಾಗೆ ನಾನು ನೀರೊಳಗಿನ ಒಂದು ಮೀನು ಆ ಮೀನು ನೀರನ್ನು ಅಂದರೆ ಶರಣರ ಸಂಗ ಬಿಟ್ಟು ಬದುಕಲಾರದು ಎನ್ನುವ ಭಾವ.
ಶಿವ ಶಿವಾ ನಿನಗೆ ಸೆರಗೊಡ್ಡಿ ಪರಿಪರಿಯಿಂದ ಬೇಡಿಕೊಳ್ಳುವೆ ಎನ್ನನ್ನು ಶರಣರ ಸಂಗದಲ್ಲಿರಿಸು ಎನ್ನುತಾನೆ ಬಸವಣ್ಣ
—ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
e-ಸುದ್ದಿಯಲ್ಲಿ ಪ್ರಕಟವಾಗುವ ಲೇಖನ, ಕತೆ, ಕವನ, ಬರಹಗಳ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.
-ಸಂಪಾದಕ