ಧೀಮಂತ ನೇತಾರ ಸರ್ಧಾರ ವಲ್ಲಭಭಾಯ್ ಪಟೇಲ್

ಸ್ಮರಣೆ- ವಲ್ಲಭಭಾಯ್ ಪಟೇಲ್

ವಲ್ಲಭಭಾಯ್ ಪಟೇಲ್ (ಅಕ್ಟೋಬರ್ ೩೧, ೧೮೭೫ – ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಎಂದೇ ಕರೆಯಲ್ಪಡುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.

ಭಾರತ ಮತ್ತು ಇತರೆ ಕಡೆಗಳಲ್ಲಿ, ಅವರನ್ನು ಹೆಚ್ಚಾಗಿ ಸರ್ದಾರ್ ಎಂದು ಕರೆಯಲಾಗುತ್ತಿತ್ತು, ಇದರರ್ಥ ಹಿಂದಿ, ಉರ್ದು, ಮತ್ತು ಪರ್ಷಿಯನ್ ಭಾಷೆಗಳಲ್ಲಿ “ಮುಖ್ಯ”ವಾದ ವ್ಯಕ್ತಿ. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಪ್ರಾಪ್ತವಾಯಿತು.

ಗುಜರಾತ್‌ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲ್, ಯಶಸ್ವಿ ವಕೀಲರಾಗಿದ್ದರು. ಗುಜರಾತ್‌ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು .ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು.

ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಪಟೇಲ್ ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು. ಅವರು ಭಾರತಕ್ಕೆ “ಹಂಚಿಕೆಯಾದ” ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಿಸಿ ಸರ್ಕಾರದ ಸುರ್ಪದಿಗೆ ತಂದರು.ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಬದ್ದತೆಯಿಂದ ಕೂಡಿತ್ತು.

ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು “ಭಾರತದ ನಾಗರಿಕ ಸೇವಕರ ಪೋಷಕ ಸಂತ” (patron saint of India’s civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು “ಭಾರತದ ಏಕೀಕರಣ ನೇತಾರ” ಎಂದೂ ಕರೆಯಲಾಗುತ್ತದೆ.

೧೯೧೮ರಲ್ಲಿ  ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ,ಗೌರವ, ದೊಡ್ಡ ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ, ಕಷ್ಟಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ ಗಾಂಧಿಯವರ ರೀತಿನೀತಿಗಳನ್ನೂ, ರಾಜಕೀಯ ನೀತಿಗಳನ್ನೂ ಲೇವಡಿ ಮಾಡಿದ್ದರೂ, ಅನ್ನಿ ಬೆಸಂಟರ ಬಂಧನಕ್ಕೆ ಸಹಿಹಾಕಿದ ಪಿಟಿಷನ್ ಬದಲು ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು ಗಾಂಧಿ ಸೂಚಿಸಿದಾಗ, ಅವರ ಮನಃಪರಿವರ್ತನೆಯಾಯಿತು.

ಗಾಂಧಿಯವರ ಚಂಪಾರಣ್ಯದ ಸತ್ಯಾಗ್ರಹದ ನಂತರ ಪಟೇಲರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂದು ನಂಬಿಕೆಯುಂಟಾಯಿತು. ಆ ಹಿರಿಯ ವ್ಯಕ್ತಿ ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತಿ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು.

ಪಟೇಲರು ಕಾಂಗ್ರೆಸ್ ಪಕ್ಷ ಸೇರಿದ್ದು ೧೯೧೮ರ ನಂತರ. ಅವರು ಕಾರ್ಯದರ್ಶಿಯಾಗಿದ್ದ ಗುಜರಾತ್ ಸಭಾ ೧೯೨೦ ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯಾಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು ೧೯೪೭ರವರೆಗೂ ಅಲ್ಲಿ ಸೇವೆ ಸಲ್ಲಿಸಿದರು.

ಸಾಮಾಜಿಕ ಹೋರಾಟದಲ್ಲಿ ಭಾಗವಹಿಸಿದ್ದ ಪಟೇಲರು  ಮಹಾನಾಯಕ ಎಂದು ಗುಜರಾತಿ ಜನಮನ್ನಣೆಯನ್ನು ಪಡೆದು, ಭಾರತದಾದ್ಯಂತ ರಾಜಕೀಯ ಧುರೀಣರ ಮೆಚ್ಚುಗೆಯನ್ನು ಗಳಿಸಿದರು.೧೯೧೯ ರಿಂದ ೧೯೨೮ರವರೆಗೆ, ಪಟೇಲರು, ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಙಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು. ೧೯೨೨ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು.

ಇದರಿಂದ ಪಟೇಲರಿಗೆ ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ ಮತ್ತು ಆಡಳಿತರಂಗಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವ ಅವಕಾಶ ದೊರಕಿತು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದಿಗೆ ವಿದ್ಯುತ್ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದರು. ಹಿಂದೂ-ಮುಸ್ಲಿಮ್ ವಿವಾದದಂತಹ ನಾಜೂಕು ವಿಷಯಗಳನ್ನೂ ಕೈಗೆತ್ತಿಕೊಂಡು, ನಗರದ ಬಹುತೇಕ ಜನಸಂಖ್ಯೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡರು.

೧೯೨೮ರಲ್ಲಿ ಬಾರ್ಡೋಲಿಯು ದುರವಸ್ಥೆಗೀಡಾಯಿತು. ಗುಜರಾತಿನ ಬಹುತೇಕ ಭಾಗಗಳು ಕ್ಷಾಮದಿಂದ ತತ್ತರಿಸುವುದರೊಂದಿಗೇ, ಸರಕಾರ ಕಂದಾಯವನ್ನು ಹೆಚ್ಚು ಮಾಡಿತು. ಇದರ ವಿರುದ್ಧವಾಗಿ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆ ದೇಶದಲ್ಲೆಲ್ಲ ಹೆಸರುಮಾಡಿತು.

ಖೇಡಾ ಸತ್ಯಾಗ್ರಹಕ್ಕಿಂತ ಉಗ್ರವಾಗಿದ್ದ ಈ ಪ್ರತಿಭಟನೆಗೆ ಬೆಂಬಲವಾಗಿ ಗುಜರಾತಿನ ಅನೇಕ ಕಡೆಗಳಲ್ಲಿ ಜನರು ಸತ್ಯಾಗ್ರಹ ಹೂಡಿದರು. ಈ ಎರಡೂ ಹೋರಾಟಗಳು ಮುಗಿದ ನಂತರ ಪಟೇಲರು, ಜನಸಾಮಾನ್ಯರು ಕಳೆದುಕೊಂಡಿದ್ದ ಭೂಮಿಕಾಣಿ ಹಾಗೂ ಆಸ್ತಿಪಾಸ್ತಿಗಳನ್ನು ಮತ್ತೆ ಅವರಿಗೆ ವಾಪಸು ದೊರಕಿಸಿಕೊಡಲು ಬಹಳಷ್ಟು ಪರಿಶ್ರಮಪಟ್ಟರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರದಾರ್ ಎಂಬ ಬಿರುದು ಪ್ರಾಪ್ತವಾಯಿತು. ಗುಜರಾತಿನ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ “ಏಕತೆಯ ಮೂರ್ತಿ”ಯನ್ನು ೩೧ ಅಕ್ಟೋಬರ್ ೨೦೧೮ ರಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು. ಗುಜರಾತಿನ ನರ್ಮದಾ ಸರೋವರ ದಂಡೆಯ ಮೇಲೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವಡೋದರಾ ಸಮೀಪದ ಸಾಧು ಬೆಟ್ಟದಿಂದ 3.2 ಕಿಮೀ ದೂರದಲ್ಲಿದೆ. 182 ಮೀಟರ್ (597 ಅಡಿ) ಎತ್ತರದ, ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ವಿಶ್ವದ ಎಂಟನೇ ಅದ್ಭುತ್

Don`t copy text!