ಗ್ರಾ.ಪಂ. ನಾಮಪತ್ರ ಸಲ್ಲಿಕೆ ಅಡ್ಡಿ ಪಡಿಸಿದರೆ ಕಾನೂನು ಕ್ರಮ- ಎಸಿ ಡಂಬಳ

 

e-ಸುದ್ದಿ, ಮಸ್ಕಿ

ತಾಲೂಕಿನ ಅಮೀನಗಡ, ಪಾಮನಕಲ್ಲೂರು, ವಟಗಲ್ ಮತ್ತು ಅಂಕುಶದೊಡ್ಡಿ ಗ್ರಾಮಗಳಲ್ಲಿ ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಸುವರಿಗೆ ಅಡ್ಡಿ ಪಡಿಸುವದು ಸರಿಯಲ್ಲ. ಅಂತ ಘಟನೆಗಳು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವದಾಗಿ ಲಿಂಗಸುಗೂರು ಎಸಿ ರಾಜಶೇಖರ ಡಂಬಳ ಹೇಳಿದರು.
ಅಮೀನಗಡ, ವಟಗಲ್, ಪಾಮನಕಲ್ಲೂರು, ಅಂಕುಶದೊಡ್ಡಿ ಗ್ರಾಮಗಳಿಗೆ ಸೋಮವಾರ ತೆರಳಿ ಅಲ್ಲಿನ ಗ್ರಾಮಸ್ಥರಿಗೆ ಚುನಾವಣೆ ಬಹಿಷ್ಕಾರ ಮಾಡುವದು ಸರಿಯಲ್ಲ. ಚುನಾವಣೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಮಸ್ಕಿ ತಾಲೂಕು ತಹಸೀಳ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಗ್ರಾ.ಪಂ.ಮುಂದೆ ಟೆಂಟ್ ಹಾಕಿ ಗ್ರಾಮಸ್ಥರು ಕಾವಲು ಕಾಯುತ್ತಿರುವದು ಸರಿಯಲ್ಲ. ಇದು ಕಾನೂನಿಗೆ ಅಪರಾಧವಾಗಿದ್ದು ಟೆಂಟ್ ತೆಗೆಯುವಂತೆ ಸೂಚಿಸಿದರು.
ಅಂಕುಶದೊಡ್ಡಿ ಗ್ರಾಮಸ್ಥರು ಮಾತನಾಡಿ ಸ್ವಯಂ ಪ್ರೇರಣೆಯಿಂದ 5 ಎ ಕಾಲುವೆ ಅನುಷ್ಠಾನಕ್ಕೆ ಒತ್ತಾಯಿಸಿ ಗ್ರಾ.ಪಂ.ಚುನಾವಣೆಯನ್ನು ಬಹಿಷ್ಕರಿದ್ದೇವೆ. ನಾವು ನಾಮಪತ್ರ ಸಲ್ಲಿಸಲು ಬಂದವರಿಗೆ ಅಡ್ಡಿ ಪಡಿಸುವದಿಲ್ಲ ಆದರೆ ದೇವರ ಹೆಸರಿನಲ್ಲಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಒಕ್ಕೂರಲಿನಿಂದ ಪ್ರಮಾಣ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
—————————–

5 ಎ ಕಾಲುವೆ ವ್ಯಾಪ್ತಿಯ 4 ಗ್ರಾ.ಪಂ.ಗಳಲ್ಲಿ ಅಲ್ಲಿನ ಗ್ರಾಮಸ್ಥರೆ ಸ್ವಯಂ ಪ್ರೇರಣೆಯಿಂದ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಹೊರಾಟ ಸಮಿತಿಯವರು ಪ್ರಚೋಧಿಸಿಲ್ಲ. ನಮ್ಮ ಹೊರಾಟಕ್ಕೆ ಬೆಂಬಲಿಸಿದ್ದಾರೆ. ಹೊರಾಟ ಸಮಿತಿಯನ್ನು ಹತ್ತಿಕ್ಕುವ ಷಡ್ಯಂತ್ರ ನಡೆದಿದೆ.
-ನಾಗರೆಡ್ಡಪ್ಪ ಬುದ್ದಿನ್ನಿ ಹೊರಾಟ ಸಮಿತಿ ಮುಖಂಡ

Don`t copy text!