ಬಲಿಯಾಯಿತೆ ಕುಸ್ತಿ?
ಜಗವ ಕೂಡುವ ತಾಣ
ಒಲಿ0ಪಿಕ್ ಆಟದ ಮಾಟ
ಸಮತೆ ಪ್ರೀತಿಯ ಪಾಠ
ಸೋಲು ಗೆಲವು
ಸರಳ ಸಹಜ
ಆದರೆ ದೊಡ್ಡವರ
ಕುತಂತ್ರ ದ್ವೇಷಕ್ಕೆ
ಬಲಿಯಾಯಿತೆ ಕುಸ್ತಿ?
ತೂಕ ಹೆಚ್ಚೆಂದು
ಅವಳನು ಹೊರಗಟ್ಟಿ
ಕಳೆದರು ಪದಕದ ಮೌಲ್ಯ
ಚಿನ್ನವೆ ಆದರೂ
ಬೆಲೆ ಕಳೆದುಕೊಂಡ
ಲೋಹ ಅಷ್ಟೇ
ದ್ವೇಷ ದಳ್ಳುರಿಗೆ
ಕಮರಿತೆ ಪ್ರತಿಭೆ?
–ಡಾ ಶಶಿಕಾಂತ ಪಟ್ಟಣ ರಾಮದುರ್ಗ