ಸಂಸಾರವೆಂಬ ಹೆಣ ಬಿದ್ದಿರೆ, ತಿನಬಂದ ನಾಯ ಜಗಳವ ನೋಡಿರೆ!

ಶ್ರಾವಣ ಮಾಸದ ಶರಣರ ಮಾಲಿಕೆ 5

ಅಲ್ಲಮಪ್ರಭು

 

 

 

 

 

 

 

 

 

 

ಶಿವಮೊಗ್ಗ ಜಿಲ್ಲೆ ಬಳ್ಳಿಗಾವೆ ಅಲ್ಲಮಪ್ರಭುಗಳ ಜನ್ಮ ಸ್ಥಳ .

ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕನಾಗಿದ್ದನು.
ಯವ್ವನದ ಹಂತದಲ್ಲಿಯೇ ವಿರಕ್ತಿಯತ್ತ ಹೊರಟ ಅಲ್ಲಮಪ್ರಭುಗಳು ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಸೇವೆಯನ್ನು ಮಾಡುತ್ತಿದ್ದ ಅಲ್ಲಮಪ್ರಭು ಗುಹೇಶ್ವರ ಎಂಬ ಅಂಕಿತನಾಮದಲ್ಲಿ
ಈ ಒಂದು ವಚನದಲ್ಲಿ ಹೀಗೆ ಹೇಳುತ್ತಿದ್ದಾರೆ .

ಸಂಸಾರವೆಂಬ ಹೆಣ ಬಿದ್ದಿರೆ, ತಿನಬಂದ ನಾಯ ಜಗಳವ ನೋಡಿರೆ!
ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ.
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ!

ಅಲ್ಲಮಪ್ರಭುದೇವರು

ಅನೇಕ ಭೋಗವಿಲಾಸದಿಂದ ಕೂಡಿದ ಈ ಜಗತ್ತು ಒಂದು ಸಂಸಾರವಿದ್ದಂತೆ .
ಈ ಸಂಸಾರವು ನಮಗೆ ಜಡವಾದರೆ
ಅದು ಹೆಣದಂತೆ ಕಾಣಿಸುವುದು .
ಈ ಸಂಸಾರ ಎನ್ನುವ ಜಗತ್ತು ಎಲ್ಲವೂ ಸುಂದರ, ಎಲ್ಲವೂ ಮನಕ್ಕೆ ಮುದವಾದ ಆಕರ್ಷಕ ಅನುಭವ ಕೊಡುವಂತಹದು.
ನೋಡಿದ ಕಣ್ಮನಗಳನ್ನು ಸೆಳೆದು ಅನುರಾಗ ಹುಟ್ಟಿಸುತ್ತದೆ .
ಈ ಸಂಸಾರವೆಂಬ ಜಗತ್ತಿನಲ್ಲಿ ಕೋಟ್ಯಂತರ ಜೀವಿಗಳು ದೇಹ ಧರಿಸಿ ಬರುತ್ತಾರೆ.
ಅನೇಕ ವಸ್ತುಗಳನ್ನು ಸಂಪಾದಿಸಲು ಹಾಗೂ ಉಪಭೋಗಿಸಲು ಅತೀ ಉತ್ಸಾಹದಿಂದ ಹಾತೊರೆಯುತ್ತಾರೆ.
ಉಪಭೋಗಿಸುವಲ್ಲಿ ವ್ಯತ್ಯಯ ಆದರೆ ತಮ್ಮ ತಮ್ಮಲ್ಲಿಯೇ ಪ್ರಾಣದ ಹಂಗನ್ನು ಹರಿದು ತಮ್ಮ ಹಿರಿಮೆ ಗೌರವ ಮರೆತು ನಾಯಿಗಳಂತೆ ಕಚ್ಚಾಡುತ್ತಾರೆ .
ಇಂಥಹ ಅವಿವೇಕತನದಿಂದ ಕಚ್ಚಾಡುವುದನ್ನು ನೋಡಿದ ಈ ಜಡವೆಂಬ ಸತ್ತ ಹೆಣ ಎದ್ದು ನಗುತ್ತದೆ. ಈ ವಿಷಯಗಳಲ್ಲಿ ನಮ್ಮ ಗುಹೇಶ್ವರಲಿಂಗವಿಲ್ಲ .
ಸಂಸಾರವೆಂಬ ಹೆಣದಲ್ಲಿ ಭೋಗವಿಷಯಗಳ ಸೌಖ್ಯವನ್ನು ಪಡೆಯಬೇಕೆಂದು ಹವನಿಸುವ ಈ ನಾಯಿತನವನ್ನು ಕಂಡು ಸಂಸಾರ ಹೆಣವು ನಗದೇ ಇನ್ನೇನು ? ಮಾಡುವುದು ಎನ್ನುವುದನ್ನು ಅಲ್ಲಮಪ್ರಭುಗಳು .ಅತ್ಯಂತ ಮನೋಜ್ಞವಾಗಿ ಈ ಒಂದು ವಚನದಲ್ಲಿ ವಿವರಣೆ ನೀಡಿದ್ದಾರೆ

ರಕ್ಕಸಿಗಿಬ್ಬರು ಮಕ್ಕಳು; ತೊಟ್ಟಿಲ ಮೇಲೈವರು.
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!
ತೊಟ್ಟಿಲ ತೂಗುವೆ, ಜೋಗುಳವಾಡುವೆ. ರಕ್ಕಸಿ-ಬಾಣತಿಯ ತೊಟ್ಟಿಲು ನುಂಗಿತ್ತು,
ಇದೇನು ಹೇಳಾ ಗುಹೇಶ್ವರಾ?

ಮಾಯೆ ಎಂಬ ರಕ್ಕಸಿ. ಅವಳಿಗೆ ಇಬ್ಬರು ಮಕ್ಕಳು ನಮ್ಮ ಮನಸ್ಸು ನಮ್ಮ ಬುದ್ಧಿ. ಈ ದೇಹ ಎಂಬುವುದೇ ತೊಟ್ಟಿಲು. ಈ ದೇಹ ಎಂಬ ತೊಟ್ಟಿಲದಲ್ಲಿ ಐದು ಮಕ್ಕಳು. ಅವೇ ಐದು ಇಂದ್ರಿಯಗಳು. ಕಣ್ಣು, ಕಿವಿ ,ಮೂಗು,ನಾಲಿಗೆ ,ಮತ್ತು ತ್ವಚೆ . ರಾಕ್ಷಸಿಯಾದ ಆ ಮಾಯಾ ತಾಯಿಗೆ ಹಸಿವೆಯಾದರೆ ಹೇಳುವುದುಂಟೇ ? ತನ್ನ ಒಂದೊಂದೇ ಮಕ್ಕಳಾದ, ಇಂದ್ರಿಯಗಳ ಹಸಿವಿನ ಬಗೆಗೆ ಹೇಳುವದೇ ಬೇಡ. ಮಕ್ಕಳಿಗೆ ವಿಷಯದ ದಾಹ. ಅವರನ್ನು ಸಮಾಧಾನಗೊಳಿಸಲು ಈ ತೊಟ್ಟಿಲದ ಅಭಿಮಾನಿಯಾದ, ಜೀವ ತೊಟ್ಟಿಲಾದ ಈ ದೇಹ ತೂಗಿದ. ಅವುಗಳಿಗೆ ವಿಷಯಗಳನ್ನಿತ್ತು ಪೋಷಿಸಿ ಬೆಳೆಸಿದ . ಅವುಗಳ ಪೋಷಣೆಯಲ್ಲಿಯೇ ಸುಖಪಟ್ಟು ಅದರಲ್ಲಿಯೇ ಮಗ್ನನಾದ . ಆದರೂ ಇಂದ್ರಿಯಗಳ ದಾಹ ಕಡಿಮೆಯಾಗಲಿಲ್ಲ. ಹಸಿವೆಯ ದಾಹ ತೀರಲಿಲ್ಲ , ಕಡಿಮೆಯೂ ಆಗಲಿಲ್ಲ. ಅಷ್ಟೇ ಏಕೆ, ಆ ಮಕ್ಕಳ ತೊಟ್ಟಿಲು, ಆ ದೇಹದ ತೊಟ್ಟಿಲು ಆ ಬಾಣಂತಿಯನ್ನೇ ನುಂಗಿಬಿಟ್ಟಿತು . ಬಾಣಂತಿಯನ್ನು ನುಂಗುವ ಮಾಯೆಯನ್ನು ಯಾರೂ ತಡೆಯದೇ ಆಕೆಯ ವಿಷಯದಾಹ-ದೇಹವನ್ನು, ಇಂದ್ರಿಯಗಳನ್ನು, ಮನ-ಬುದ್ಧಿಯನ್ನು ವ್ಯಾಪಿಸಿತು.
ಆಕೆಯ ಒಳಗಿರುವ ಮಾಯೆಯು ಅಸಮಾಧಾನ. ಆಕೆಗೆ ಸಮಾಧಾನವೇ ಇಲ್ಲ .ಈ ಸಂಸಾರದ ಮಾಯೆಯ ಸಮುದ್ರದ ರಕ್ಕಸಿಯಿಂದ ಹೊರಗೆ ತಪ್ಪಿಸಿಕೊಂಡು ಬರಲೂ ಸಾಧ್ಯ ವಿಲ್ಲ .ಎನ್ನುವ ಮಾರ್ಮಿಕವಾದ ಸತ್ಯ ವನ್ನು ಅಲ್ಲಮಪ್ರಭುಗಳು ಈ ಒಂದು ವಚನದಲ್ಲಿ ಹೇಳಿರುವುದು ಕಂಡು ಬಂದಿದೆ .

ಒಳಗೆ ತೊಳೆಯಲರಿಯದೆ
ಹೊರಗ ತೊಳೆದು ಕುಡಿವುತ್ತಿದ್ದರಯ್ಯಾ
ಪಾದೋದಕ ಪ್ರಸಾದವನರಿಯದೆ
ಬಂದ ಬಟ್ಟೆಯಲ್ಲಿ
ಮುಳುಗುತ್ತೈದಾರೆ ಗುಹೇಶ್ವರಾ

ಮನದ ಒಳಗೆ ಇರುವ ಕೊಳೆಯನ್ನು ತೊಳೆಯದಿರುವ, ಅರಿಯದವರು ಹೊರಗಿನ ಪಾದ, ಪಾತ್ರೆಗಳನ್ನು ತೊಳೆದು ಕುಡಿಯುವ ಜನರಿಗೆ ಅಲ್ಲಮಪ್ರಭುಗಳು ತಮ್ಮ ವಚನದ ಮೂಲಕ, ಪಾದೋದಕ ಪ್ರಸಾದಗಳ ನಿಜ ಸ್ವರೂಪವನ್ನು ಅರಿಯದವರು, ಹುಟ್ಟು ಸಾವುಗಳ ಈ ಭವಬಂಧನದಲ್ಲಿ ಮುಳುಗಿ ಏಳುತ್ತಿದ್ದಾರೆ. ಎನ್ನುವ ಅರಿವಿನ ಅಮೃತದಂಥಹ ಮಾತುಗಳನ್ನು ಹೇಳಿದ್ದನ್ನು ಒಮ್ಮೆ ಮೆಲಕು ಹಾಕಿ ಸಾಗೋಣ..


-ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Don`t copy text!