e-ಸುದ್ದಿ, ಮಸ್ಕಿ
ತಾಲೂಕಿನಲ್ಲಿ ಬಣಜಿಗ ಸಮಾಜದ ಜನಸಂಖ್ಯೆ ಅಧಿಕವಿದ್ದು, ವ್ಯಾಪರವನ್ನೆ ಅವಲಂಬಿಸಿದ ಈ ಸಮಜದ ಜನ ಸಂಖ್ಯಗೆ ಅನುಗುಣವಾಗಿ ಸರ್ಕಾರದ ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ನಿರ್ದೆಶಕರನ್ನು ಮತ್ತು ರಾಜ್ಯದಿಂದ ತಾಲೂಕು ಮಟ್ಟದವರೆಗಿನ ಹಲವು ಇಲಾಖೆಗಳಲ್ಲಿ ನಾಮ ನಿರ್ದೆಶನ ಮಾಡುವಾಗ ಬಣಜಿಗ ಸಮಾಜದವರನ್ನು ಪರಿಗಣಿಸಬೇಕೆಂದು ಸಮಾಜದ ಮುಖಂಡ ಅಂದಾನಪ್ಪ ಗುಂಡಳ್ಳಿ ಒತ್ತಾಯಿಸಿದರು.
ಪಟ್ಟಣದ ಎಲ್.ವಿ.ಟಿ ಕಾಂಪ್ಲೇಕ್ಸ್‍ನಲ್ಲಿ ಬುಧವಾರ ಬಣಜಿಗ ಸಮಾಜದವರು ಸಭೆ ಸೇರಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮನವಿ ಪತ್ರ ಸಲ್ಲಿಸಿದರು. ಬಣಜಿಗ ಸಮಾಜದ ಹಿರಿಯ ಮುಖಂಡ ಅಂದಾನಪ್ಪ ಗುಂಡಳ್ಳಿ ಮಾತನಾಡಿ ಮಸ್ಕಿ ಕ್ಷೇತ್ರದಲ್ಲಿ ಮೂರು ಅವಧಿಗೆ ಶಾಸಕರಾಗಿ ಪ್ರತಾಪಗೌಡ ಪಾಟೀಲ ಅವರ ಆಯ್ಕೆಗೆ ಬಣಜಿಗ ಸಮಾಜ ಶ್ರಮಿಸಿದೆ. ಸಮಾಜದ ಮುಖಂಡರ ಮತ್ತು ಕಾರ್ಯಕರ್ತರ ಒತ್ತಾಯದಂತೆ ಸಮಾಜಕ್ಕೆ ಸಿ.ಎ.ಸೈಟ್, ಸಮುದಾಯ ಭವನ ಮತ್ತು ರಾಜಕೀಯದಲ್ಲಿ ಸೂಕ್ತಸ್ಥಾನಗಳನ್ನು ಕಲ್ಪಿಸಬೇಕೆಂದರು.
ಡಾ.ಶಿವಶರಣಪ್ಪ ಇತ್ಲಿ ಮಾತನಾಡಿ ನಮ್ಮ ಸಮಾಜದ ಹಿರಿಯ ಧುರಿಣ ಯಡಿಯುರಪ್ಪ ಮುಖ್ಯಮಂತ್ರಿಯಗಲು ಪ್ರತಾಪಗೌಡ ಪಾಟೀಲರ ತ್ಯಾಗ ಕಾರಣವಾಗಿದ್ದು ಅವರನ್ನು ಮತ್ತೊಮ್ಮೆ ಉಪ ಚುನಾವಣೆಯಲ್ಲಿ ಬೆಂಬಲಿಸಿದರೆ ಮಂತ್ರಿಗಳಾಗಿ ಮಸ್ಕಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವರು. ಅದಕ್ಕಾಗಿ ಬಣಜಿಗ ಸಮಜ ಅವರನ್ನು ಬೆಂಬಲಿಸಬೇಕೆಂದು ಕೊರಿದರು.
ಡಾ.ಶಿವಸಬಪ್ಪ ಹೆಸರೂರು ಮಾತನಾಡಿ ಬಣಜಿಗ ಸಮಾಜದವರು ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷದಲ್ಲಿ ಇರುವದು ಸಹಜ. ಆದರೆ ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಅವರನ್ನು ಬೆಂಬಲಿಸಿದರೆ ಗೆದ್ದು ಮಂತ್ರಿಯಾಗುತ್ತಾರೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಬಣಜಿಗ ಸಮಾಜದವರನ್ನು ನಾನು ಹೆಚ್ಚು ಗೌರವದಿಂದ ಕಂಡಿದ್ದೇನೆ. ಸಮುದಾಯದ ಬೇಡಿಕೆಗಳಾದ ಸಿ.ಎ.ಸೈಟ್ ಸರ್ಕಾರದಿಂದ ಕೊಡುವದು ಕಷ್ಟ ಸಾಧ್ಯವಾಗಿದ್ದು ಸಮಾಜದವರು ಸೈಟ್ ಹೊಂದಿದ್ದರೆ ಅನುದಾನ ಕೊಡುವದರ ಜತೆಗೆ ಬಣಜಿಗ ಸಮುದಾಯದವರಿಗೆ ನಿಗಮ, ಮಂಡಳಿ, ನಾಮ ನಿರ್ದೆಶನ ಮಾಡುವಾಗ ಅವಕಾಶ ಕಲ್ಪಿಸುವದಾಗಿ ಭರವಸೆ ನೀಡಿದರು.
ಹಿರಿಯ ಮುಖಂಡ ಮಹಾದೇವಪ್ಪಗೌಡ ಪಾಟೀಲ, ಮಸ್ಕಿ ತಾಲೂಕು ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಬ್ಯಾಳಿ ಇದ್ದರು.