ಇಷ್ಟಲಿಂಗ ಉಪಾಧಿತವಲ್ಲ -ಅಷ್ಟಾವರಣ ಪ್ರಜ್ಞೆಯ ಲಾಂಛನಗಳು ಮಾತ್ರ
ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಅಷ್ಟಾವರಣ ಬಹು ಮುಖ್ಯ ಪಾತ್ರ ವಹಿಸುತ್ತದೆ .ಇಷ್ಟಲಿಂಗವು ಭಕ್ತನ ಅರಿವಿನ ಅನುಸಂಧಾನದ ಕುರುಹು ಮಾತ್ರ .
ಲಿಂಗಯೋಗ ಅಥವಾ ಬಸವ ಯೋಗ ಲಿಂಗಾಯತರ ಧ್ಯೇಯವಾಗಬೇಕು .ಸಾಕಾರದಲ್ಲಿ ನಿರಾಕಾರ ತತ್ವವನ್ನು ಅನುಸಂಧಿಸಿ ಬಯಲಿನಲ್ಲಿ ನಿರಾಳ ನಿರಾಕಾರ ಹೊಂದುವ ಉದಾತ್ತೀಕರಣದ ತತ್ವವಾಗಿದೆ.ಇನ್ನು ರುದ್ರಾಕ್ಷಿ ಮಂತ್ರ ವಿಭೂತಿಗಳು ಪಂಚ ಮಹಾಭೂತಗಳ ಸಂಕೇತ.ಅಷ್ಟಾವರಣಗಳು ಆಯತವಾಗಿ ಸ್ಥೂಲವಾಗಿ ಭಕ್ತನ ದೇಹದ ಮೇಲೆ ಅವರಣಗೊಂಡು ನಂತರ ಸ್ವಾಯತವಾಗಿ ಒಳಗಿನ ಪಂಚೇಂದ್ರಿಗಳ ಮೂಲಕ ಬಾಹ್ಯ ಪಂಚ ಮಹಾಭೂತಗಳ ಶಕ್ತಿಗಳನ್ನು ಗ್ರಹಿಸಿ ಅನುಭವಿಸುವ ಸೂಕ್ಷ್ಮ ತತ್ವವಾಗುತ್ತದೆ.
ಅಷ್ಟಾವರಣಗಳು ಸನ್ನಿಹಿತ ವಿಕಾಸದಲ್ಲಿ ಒಳ ಅಷ್ಟಾವರಣಗಳು ರೂಪಗೊಳ್ಳುತ್ತವೆ ಇದು ಕಾರಣ . ಹೀಗಾಗಿ ಆರಂಭದಲ್ಲಿ ಇಷ್ಟಲಿಂಗ ಯೋಗ ಅನಿವಾರ್ಯ ಹಾಗು ಅಗತ್ಯವೂ ಹೌದು .ಲಿಂಗ ಪೂಜೆಯಲ್ಲ .ಗುರು ಲಿಂಗ ಜಂಗಮ ಇವು ಕಾಯಗುಣಗಳು.
ನಮ್ಮಲ್ಲಿನ ಸೂಕ್ಷ್ಮ ಮನಸಿಗೆ ಪ್ರೇರಣೆ .ಪ್ರಜ್ಞೆ ಅರಿವಿನ ಅನುಸಂಧಾನಕ್ಕೆ ಅಷ್ಟಾವರಣಗಳು ಅಗತ್ಯಆದರೆ ಇವು ಪೂಜಿತಗೊಳ್ಳುವ ಲಾಂಛನಗಳಲ್ಲ .ಅಷ್ಟಾವರಣಗಳ ಮರುವ್ಯಾಖ್ಯಾನ ಮರು ವಿಮರ್ಶೆ ಅಗತ್ಯವಾಗಿದೆ
–ಡಾ.ಶಶಿಕಾಂತ.ಪಟ್ಟಣ ರಾಮದುರ್ಗ