ಮಣ್ಣೂರಿನ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ “ಮಾಧವ ತೀರ್ಥರು”

ಮಣ್ಣೂರಿನ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ “ಮಾಧವ ತೀರ್ಥರು”

 

 

 

 

 

 

 

 

 

 

ವೈಷ್ಣವ ಪರಂಪರೆಯ ಪ್ರವರ್ತಕರಾದ ಮಾಧ್ವಾಚಾರ್ಯರಿಗೆ ಅನೇಕ ಗೃಹಸ್ಥ ಮತ್ತು ಸನ್ಯಾಸಿ ಶಿಷ್ಯರು ಇದ್ದರು. ಅವರಲ್ಲಿ ನಾಲ್ಕು ಜನರು ಶ್ರೀ ಪದ್ಮನಾಭ ತೀರ್ಥರು, ಶ್ರೀ ನರಹರಿ ತೀರ್ಥರು ಮತ್ತು ಶ್ರೀ ಮಾಧವ ತೀರ್ಥರು ಮತ್ತು ಶ್ರೀ ಅಕ್ಷೋಭ್ಯ ತೀರ್ಥರ ಜೊತೆಗೆ ಅಷ್ಟ ಮಠಗಳ ಜನ ಸನ್ಯಾಸಿಗಳಿಗೆ ಸನ್ಯಾಸಾಶ್ರಮವನ್ನು ನೀಡಿದರು. ಉತ್ತರ ಕರ್ನಾಟಕದವರಾದ ಶ್ರೀ ವಿಷ್ಣು ಶಾಸ್ತ್ರಿಗಳು ಬ್ರಹ್ಮಚರ್ಯಾಶ್ರಮದಿಂದಲೇ ಶ್ರೀಮದಾಚಾರ್ಯರ ನೇರ ಶಿಷ್ಯರಾಗಿ ಯತ್ಯಾಶ್ರಮವನ್ನು ಸ್ವೀಕಾರ ಮಾಡಿದರು. ನಂತರ ಶ್ರೀ ನರಹರಿತೀರ್ಥರ ನಂತರ ವೇದಾಂತ ಸಾಮ್ರಾಜ್ಯದಲ್ಲಿ ಪೀಠಾಧಿಪತಿಗಳಾಗಿ 1333ರಿಂದ 1350ರವರೆಗೆ ಫೀಠಾಧಿಪತಿಗಳಾಗಿದ್ದು ಮಧ್ವ ಶಾಸ್ತ್ರದ ರಕ್ಷಣೆ ಪ್ರಚಾರ ಪ್ರಸಾರದಲ್ಲಿ ತೊಡಗಿದರು.

ಮಾಧವತೀರ್ಥರು ಉದ್ಧಾಮ ಪಂಡಿತರು ಹಾಗೂ ವಿದ್ವಾಂಸರೂ ಆಗಿದ್ದು ಪರವಾದಿಗಳ ಖಂಡನೆಯನ್ನು ನಿರ್ಭಯವಾಗಿ ಮಾಡುತ್ತಿದ್ದರು ಎಂದು ಅವರ ಚರಮ ಶ್ಲೋಕದಿಂದ ತಿಳಿದು ಬರುತ್ತದೆ. ಮಾಧವ ತೀರ್ಥರು ವೇದಗಳ ಭಾಷ್ಯವನ್ನು ಮಾತ್ರವಲ್ಲದೇ ಧರ್ಮ ಶಾಸ್ತ್ರದ ಗ್ರಂಥವನ್ನು ಕೂಡ ಬರೆದಿದ್ದಾರೆ ಎಂದು ಹೇಳುತ್ತಾರೆ ಆದರೆ ಆ ಗ್ರಂಥ ಈಗ ಉಪಲಬ್ಧವಿಲ್ಲ.

ಒಂದು ಬಾರಿ ಮಾಧವತೀರ್ಥರು ಪೂಜೆಗೆ ಕುಳಿತಿದ್ದಾಗ ಇದ್ದಕ್ಕಿದ್ದ ಹಾಗೆ ಕುಳಿತ ಜಾಗದಿಂದ ಎದ್ದು ಹೋಗಿ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕೈಮುಗಿದು ನಿಂತರು ಬೇರೆಯವರಿಗೆ ಏನು ಆಗುತ್ತಿದೆ ಎಂದು ಶಿಷ್ಯರಿಗೆ ತಿಳಿಯದೇ ಕಾರಣವನ್ನು ಕೇಳಿದಾಗ ಸ್ವತಃ ಶ್ರೀಮದಾಚಾರ್ಯರೇ ಪೂಜೆಯನ್ನು ಮಾಡುತ್ತಿದ್ದ ಕಾರಣ ಎದ್ದು ನಮಸ್ಕರಿಸಿದ್ದುದಾಗಿ ಹೇಳಿದರು. ಇದೇ ರೀತಿಯ ಘಟನೆ ಶ್ರೀಅಕ್ಷೋಭ್ಯತೀರ್ಥರ ಜೊತೆಗೆ ಕೂಡ ನಡೆದಿತ್ತು.

ಇದುವರೆಗೂ ಶ್ರೀಮಾಧವ ತೀರ್ಥರು ಬರೆದ ಗ್ರಂಥಗಳು ನಮಗೆ ಲಭ್ಯವಿಲ್ಲ ಆದರೆ ನಾಲ್ಕು ವೇದಗಳಿಗೆ ಭಾಷ್ಯವನ್ನು ಬರೆದಿರುವರು ಎಂದು ಹೇಳುತ್ತಾರೆ. ಶ್ರೀಮದಾಚಾರ್ಯರ ನೇರ ಶಿಷ್ಯರಾದ ಕಾರಣ ಅವರ ಬಾಯಿಯಿಂದಲೇ ಋಗ್ಭಾಷ್ಯದಿಗಳನ್ನು ಕೇಳಿ ಬರೆದರು ಎಂದು ಹೇಳಲಾಗುತ್ತದೆ. ಅಲ್ಲಿಯವರೆಗೂ ವೇದ ಭಾಷ್ಯಗಳಿಗೆ ವೈಷ್ಣವ ಸಿದ್ದಾಂತದ ರೀತಿಯ ವ್ಯಾಖ್ಯೆ ಇರಲಿಲ್ಲವಾದ್ದರಿಂದ ಅವರ ವ್ಯಾಖ್ಯೆಯು ಮಹತ್ವವನ್ನು ಪಡೆಯಿತು ಅದರಲ್ಲೂ ಶ್ರೀಮದಾಚಾರ್ಯರ ನೇರ ಶಿಷ್ಯರಾದ ಕಾರಣ ಅವರ ಭಾಯಿಯಿಂದ ಕೇಳಿದ ವ್ಯಾಖ್ಯೆ ಬರೆದಿದ್ದರಿಂಧ ಅವರ ವ್ಯಾಖ್ಯೆ ವೈಷ್ಣವ ಸಿದ್ದಾಂತ ರೀತ್ಯಾ ಇತ್ತು. ಆದರೆ ಅವರಿಗೆ ಯಾವುದೇ ರಾಜಾಶ್ರಯವಿರಲಿಲ್ಲ, ಹೀಗಾಗಿ ಹಂಪಿಯ ಪರಿಸರವನ್ನು ವಿಟ್ಟು ಭೀಮಾತೀರಕ್ಕೆ ಪ್ರಯಾಣ ಬೆಳಸಿ ಮಣ್ಣೂರು ಗ್ರಾಮದಲ್ಲಿ ನೆಲಸಿದರು ಇಲ್ಲಿ ಬಂದು ನೆಲೆಸಲು ಮೂಲ ಕಾರಣ ಭೀಮಾತೀರದ ಮಣ್ಣೂರು ಕ್ಷೇತ್ರದಲ್ಲಿ ಧ್ರುವರಾಜರು ಪ್ರತಿಷ್ಠಾಪನೆ ಮಾಡಿದ ಕೇಶವ ದೇವರ ಸುಂದರ ಮೂರ್ತಿಯಿದೆ ಅಲ್ಲಿ ಉಪಾಸನೆಯನ್ನು ಮಾಡುತ್ತಾ, ಶಿಷ್ಯರಿಗೆ ಪಾಠವನ್ನು ಹೇಳುತ್ತಿದ್ದರು ಅವರ ಜ್ಞಾನವನ್ನು ಅಧ್ಯಯನಶೀಲತೆಯನ್ನು ನೋಡಿ ಅಲ್ಲಿ ಪ್ರಾಚೀನ ಕಾಲದಿಂದಲೂ ಮಣ್ಣೂರು ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯವಿತ್ತು ಆದರೆ ಜೈನರ ಆಳ್ವಿಕೆಯ ಕಾಲದಲ್ಲಿ ಅದಕ್ಕೆ ಬಹಳ ಕೆಟ್ಟ ಪರಿಸ್ಥಿತಿ ಬಂದಿತ್ತು, ಆ ಕಾಲದಲ್ಲಿ ಆ ವಿಶ್ವವಿದ್ಯಾಲಯದ ಕುಲಪತಿಯಾದ ಪದ್ಮರಾಜನೆಂಬ ಪಂಡಿತನು ರಾಜಾಶ್ರಯ ದೊರೆತ ಕಾರಣ ವಿಶ್ವ ವಿದ್ಯಾಲಯವನ್ನು ಬಿಟ್ಟು ಹೋಗಿದ್ದನು. ಅದೇ ಸಮಯದಲ್ಲಿ ಶ್ರೀ ಮಾಧವತೀರ್ಥರು ಮಣ್ಣೂರಿಗೆ ಬಂದು ನೆಲೆಸಿದರು ಅಲ್ಲಿಯ ಜನರು ಅವರ ವಿದ್ವತ್ತು ಮತ್ತು ಸ್ವಾಧ ಧ್ಯಾಯಗಳನ್ನು ನೋಡಿ ಪ್ರಭಾವಿತರಾಗಿ ಅವರಿಗೆ ಪ್ರಾರ್ಥಿಸಿ ಆ ವಿಶ್ವವಿದ್ಯಾಲಯದ ಕುಲಪತಿಗಳಾಗ ಬೇಕೆಂದು ಕೇಳಿಕೊಂಡರು ನಂತರ ಅವರು ಮಣ್ಣೂರಿನಲ್ಲಿಯೇ ವಾಸ ಮಾಡಿ ಅಲ್ಲಿಂದಲೇ ತಮ್ಮ ಗ್ರಂಥ ರಚನೆಯನ್ನು ಮುಂದುವರೆಸಿದರು ಮತ್ತು ವೈಷ್ಣವ ಸಿದ್ಧಾಂತವನ್ನು ಪ್ರಸಾರ ಮಾಡಿದರು.

ಶ್ರೀ ಮಾಧವತೀರ್ಥರು ಸನ್ಯಾಸಾಶ್ರಮವನ್ನು ಪಡೆದಾಗ ಶ್ರೀಮದಾಚಾರ್ಯರು ಅವರಿಗೆ ವೀರರಾಮನ ಮೂರ್ತಿಯನ್ನು ನೀಡಿದ್ದರು ಆ ಮೂರ್ತಿಯನ್ನು ಪೂಜೆ ಉಪಾಸನೆಯನ್ನು ಮಾಡುತ್ತಾ ಬಂದಿದ್ದರು. ಆದರೆ ಶ್ರೀನರಹರಿತೀರ್ಥರಿಂದ ಪೀಠಾಧಿಪತ್ಯವನ್ನು ಸ್ವೀಕಾರ ಮಾಡುವಾಗ ತಮ್ಮ ಶಿಷ್ಯರಾದ ಶ್ರೀ ಮಧುಹರಿ ತೀರ್ಥರಿಗೆ ಸನ್ಯಾಸಾಶ್ರಮವನ್ನು ಕೊಟ್ಟಿದ್ದರು ತಮಗೆ ಶ್ರೀಮದಾಚಾರ್ಯರಿಂದ ದೊರೆತ ವೀರರಾಮನ ಮೂರ್ತಿಯನ್ನು ನೀಡಿದರು ಮತ್ತು ತಮ್ಮ ಸಂಸ್ಥಾನವನ್ನು ಮುಂದುವರೆಸಲು ಹೇಳಿದರು. ಈಗ ಅದೇ ಮಠವು ತಂಬಿಹಳ್ಳಿ ಮಠ ಅಥವಾ ಮಜ್ಜಿಗೆಹಳ್ಳಿ ಮಠ ಎಂದು ಪ್ರಸಿದ್ಧವಾಗಿದೆ.

17 ವರ್ಷಗಳ ಕಾಲ ಪೀಠಾಧಿಪತ್ಯವನ್ನು ನಡೆಸಿದ ನಂತರ ಶ್ರೀಅಕ್ಷೋಭ್ಯತೀರ್ಥರಿಗೆ ಪೀಠವನ್ನು ಕೊಟ್ಟು ಭಾದ್ರಪದ ಕೃಷ್ಣ ಪಕ್ಷ ಅಮಾವಾಸ್ಯೆ ತಿಥಿಯಂದು ಇಂದಿನ ಅಫಜಲ್‌ ಪುರ ತಾಲ್ಲೂಕಿನ ಮಣ್ಣೂರು ಗ್ರಾಮದಲ್ಲಿ ಶ್ರೀ ಮಾಧವತೀರ್ಥರು ಭೀಮಾತೀರದಲ್ಲಿ ವೃಂದಾವನಸ್ಥರಾದರು ಅಲ್ಲಿ ಅವರ ಮೂಲ ವೃಂದಾವನವಿದೆ. ನಂತರ ಅಲ್ಲಿಯೇ ಶ್ರೀಮದುತ್ತರಾಧಿ ಮಠದ ಶ್ರೀವೇದೇಶತೀರ್ಥರು ವಿದ್ಯಾಪೀಠವನ್ನು ಆರಂಭಿಸಿ ಇಂದಿಗೂ ಅಲ್ಲಿ ಗುರುಕುಲವಿದೆ.

 

 

 

 

 

 

 

 

 

ಮಾಧುರಿ ದೇಶಪಾಂಡೆ ಬೆಂಗಳೂರು

 

Don`t copy text!