ಇಂದು ಮಸ್ಕಿಗೆ ಕನ್ನಡ ರಥ ಆಗಮನ
e- ಸುದ್ದಿ ಮಸ್ಕಿ
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ರಥ ಮಸ್ಕಿ ಪಟ್ಟಣಕ್ಕೆ ಅ.೧೭ ಗುರುವಾರ ಆಗಮಿಸಲಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮಹಾಂತೇಶ ಬ್ಯಾಳಿ ತಿಳಿಸಿದ್ದಾರೆ.
ಕನ್ನಡ ರಥವನ್ನು ಸ್ವಾಗತಿಸಲು ಮತ್ತು ಪಟ್ಟಣದಲ್ಲಿ ಸಂಚರಿಸುವಾಗ ಕನ್ನಡ ಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.