ಭ್ರಮರಾಂಬ ದೇವಿ ಜಾತ್ರೆ ೧೦೦೦ ಕುಂಭಗಳ ಅದ್ದೂರಿ ಮೆರವಣಿಗೆ, ಮಹಿಳೆಯರಿಂದ ರಥೋತ್ಸವ ಹಾಗೂ ಜಂಬೂ ಸವಾರಿ

 ಭ್ರಮರಾಂಬ ದೇವಿ ಜಾತ್ರೆ
೧೦೦೦ ಕುಂಭಗಳ ಅದ್ದೂರಿ ಮೆರವಣಿಗೆ, ಮಹಿಳೆಯರಿಂದ ರಥೋತ್ಸವ ಹಾಗೂ ಜಂಬೂ ಸವಾರಿ

 

 

 

 

 

 

 

 

 

 

e- ಸುದ್ದಿ ಮಸ್ಕಿ

ಮಸ್ಕಿ ಪಟ್ಟಣದ ಶ್ರೀಭ್ರಮರಾಂಬ ದೇವಿಯ ೫೪ ನೇ ವರ್ಷದ ಜಾತ್ರಾ ಮಹೋತ್ಸವ, ದೇವಿ ಪುರಾಣ ಮಂಗಲೋತ್ಸವ, ೧೦೦೦ ಕುಂಬಗಳ ಮೆರವಣಿಗೆ ಹಾಗೂ ಮಹಿಳೆಯರಿಂದ ರಥೋತ್ಸವ ಗುರುವಾರ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಪ್ರಮುಖ ಪ್ರಕಾಶ ಧಾರಿವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವರಾತ್ರಿ ಅಂಗವಾಗಿ ೯ ದಿನಗಳವರೆಗೆ ದೇವಿ ಪುರಾಣ ನಡೆಸಲಾಗಿದ್ದು ೪ ದಿನಗಳಿಂದ ಪ್ರತಿದಿನ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಗಿದೆ.
ಗುರುವಾರ ಗಂಗಾಸ್ಥಳದಿಂದ ಕುಂಭಹೊತ್ತು ೧೦೦೦ ಕ್ಕೂ ಅಧಿಕ ಮಹಿಳೆಯರು ದೇವಸ್ಥಾನಕ್ಕೆ ಮೆರವಣಿಗೆ ಮುಖಾಂತರ ಆಗಮಿಸಲಿದ್ದಾರೆ. ಶ್ರೀಭ್ರಮರಾಂಬ ದೇವಿಗೆ ಜಲಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಷನೆ ಕುಂಕುಮಾರ್ಚನೆ ನಡೆಯಲಿದೆ.
ಆನೆಯ ಮೇಲೆ ಅಂಬಾರಿ ಕಟ್ಟಿ ಭ್ರಮರಾಂಬ ದೇವಿಯ ಉತಸ್ವ ಮೂರ್ತಿ ಮತ್ತು ದೇವಿ ಪುರಾಣದ ಗ್ರಂಥದ ಮೆರವಣಿಗೆ ಪಟ್ಟಣದ ವಿವಿಧ ಪ್ರಮುಖ ರಸ್ತೆಗಳ ಮುಖಾಂತರ ದೇವಸ್ಥಾನಕ್ಕೆ ಆಗಮಿಸಲಿದೆ. ನಂತರ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ ಗಂಟೆಗೆ ಮಹಿಳೆಯರು ಭ್ರಮರಾಂಬ ದೇವಿಯ ರಥವನ್ನು ಎಳೆಯುವ ಮೂಲಕ ೧೫ ದಿನಗಳ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

Don`t copy text!