ಧರ್ಮ ಮತ್ತು ರಾಷ್ಟೀಯತೆಯ ಏಕತೆ ಇರುವುದು ಭಾರತದಲ್ಲಿ ಮಾತ್ರ. – ಡಾ.ಮರುಳಸಿದ್ಧ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ

ಧರ್ಮ ಮತ್ತು ರಾಷ್ಟೀಯತೆಯ ಏಕತೆ ಇರುವುದು ಭಾರತದಲ್ಲಿ ಮಾತ್ರ. – ಡಾ.ಮರುಳಸಿದ್ಧ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ

e- ಸುದ್ದಿ ಮಸ್ಕಿ

ಧರ್ಮ ಮತ್ತು ರಾಷ್ಟೀಯತೆಯ ಏಕತೆ ಇರುವುದು ಭಾರತದಲ್ಲಿ ಮಾತ್ರ. ಅನೇಕ ವೈವಿದ್ಯತೆಯ ಮದ್ಯೆ ಏಕತೆ ಸಾಧಿಸಿರುವ ಭಾರತಕ್ಕೆ ಅನೇಕ ಸಂಕಷ್ಟಗಳು ಬಂದಾಗ ಧರ್ಮ ಈ ದೇಶವನ್ನು ಎತ್ತಿ ಹಿಡಿದಿದೆ ಎಂದು ವಿರಾಪೂರ ಹಿರೇಮಠದ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ೫೪ ನೇ ವರ್ಷದ ಮಹಾದೇವಿ ಪುರಾಣ ಮಂಗಲೋತ್ಸವದ ನಿಮಿತ್ತ ಮಂಗಳವಾರ ನಡೆದ ಧರ್ಮ ಮತ್ತು ರಾಷ್ಟ್ರೀಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ರಾಷ್ಟೀಯತೆ ಬೆರೆತು ಕೊಂಡಿವೆ. ಧರ್ಮ ಉತ್ತಮ ಮಾರ್ಗದಲ್ಲಿ ಬದಕುವುದನ್ನು ಕಲಿಸಿದರೆ, ರಾಷ್ಟೀಯತೆ ಕೂಡಿ ಬಾಳುವದನ್ನು ಕಲಿಸುತ್ತದೆ ಎಂದರು.
ಆದಿಶಕ್ತಿ ಭ್ರಮರಾಂಬೆಯ ಕೈಯಲ್ಲಿ ಅಸ್ತ್ರ ಮತ್ತು ಶಸ್ತ್ರಗಳಿವೆ. ಅಸ್ತ್ರವನ್ನು ಮತ್ತು ಶಸ್ತ್ರವನ್ನು ಬಳಸುವ ವಿಧಾನ ಬೇರೆ ಬೇರೆ ಆಗಿದ್ದು ಯಾವುದನ್ನು ಯಾವಾಗ ಬಳಸಬೇಕು ಎಂಬುದನ್ನು ಅರಿತಿರಬೇಕು ಎಂದರು.
ಯಮ್ಮಿಗನೂರಿನ ಶ್ರೀವಾಮದೇವ ಶಿವಾಚಾರ್ಯ ಸ್ವಾಮೀಜಿ, ಗಚ್ಚಿನಮಠದ ಶ್ರೀವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಧುಮತಿ ದೇಶಪಾಂಡೆ ಮಾತನಾಡಿದರು.ವೀರೇಶ ಸೌದ್ರಿ ಸ್ವಾಗತಿಸಿ ಪ್ರಾಸ್ತಾವಿಕ‌ ಮಾತನಾಡಿದರು. ನಾಗಭೂಷಣ ಶಿಕ್ಷಕರು ನಿರೂಪಿಸಿದರು.

Don`t copy text!